ಹಣಕಾಸು ಸಚಿವಾಲಯ
azadi ka amrit mahotsav

ನಾರಿ ಶಕ್ತಿ 'ಅಮೃತ ಕಾಲ' ಸಮಯದಲ್ಲಿ ಮಹಿಳಾ ಆಧಾರಿತ ಅಭಿವೃದ್ಧಿಯ ಮುನ್ನುಡಿ


2 ಲಕ್ಷ ಅಂಗನವಾಡಿಗಳನ್ನು ಹೊಸ ತಲೆಮಾರಿನ ‘ಸಕ್ಷಂ ಅಂಗನವಾಡಿ’ಗಳಾಗಿ ಮೇಲ್ದರ್ಜೆಗೇರಿಸಲಾಗುವುದು

‘ಅಮೃತ ಕಾಲ’ದಲ್ಲಿ ನಾರಿ ಶಕ್ತಿ ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಹರಿಕಾರ

Posted On: 01 FEB 2022 1:06PM by PIB Bengaluru

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಭಾರತ@100 ಗೆ 25 ವರ್ಷಗಳ ಕಾಲ ಮುನ್ನಡೆಸುವ ಅಮೃತ ಕಾಲದ ಸಮಯದಲ್ಲಿ ನಾರಿ ಶಕ್ತಿಯು ದೇಶದ ಉಜ್ವಲ ಭವಿಷ್ಯದ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿದೆ ಗೌರವಾನ್ವಿತ ಪ್ರಧಾನ ಮಂತ್ರಿಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭಾರತ@100 ಗಾಗಿ ದೂರದೃಷ್ಟಿಯನ್ನು ರೂಪಿಸಿದ್ದರು.ಎಂದು ಹೇಳಿದರು

ನಾರಿ ಶಕ್ತಿಯ ಮಹತ್ವವನ್ನು ಗುರುತಿಸಿ, ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆಗಳನ್ನು ಸಮಗ್ರವಾಗಿ ಪರಿಷ್ಕರಿಸಿದೆ. ಅದರಂತೆ, ಮಹಿಳೆಯರು ಮತ್ತು ಮಕ್ಕಳಿಗೆ ಸಮಗ್ರ ಪ್ರಯೋಜನಗಳನ್ನು ಒದಗಿಸಲು ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಎಂಬ ಮೂರು ಯೋಜನೆಗಳನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ.

HEALTH_M2.jpg

ಸಕ್ಷಮ್ ಅಂಗನವಾಡಿಗಳು ಹೊಸ ಪೀಳಿಗೆಯ ಅಂಗನವಾಡಿಗಳಾಗಿವೆ, ಅವುಗಳು ಉತ್ತಮ ಮೂಲಸೌಕರ್ಯ ಮತ್ತು ಶ್ರವಣ-ದೃಶ್ಯ ಸಾಧನಗಳನ್ನು ಹೊಂದಿವೆ, ಸ್ವಚ್ಛ ಇಂಧನದಿಂದ ನಡೆಸಲ್ಪಡುತ್ತವೆ ಮತ್ತು ಆರಂಭಿಕ ಮಗುವಿನ ಬೆಳವಣಿಗೆಗೆ ಸುಧಾರಿತ ವಾತಾವರಣವನ್ನು ಒದಗಿಸುತ್ತವೆ. ಯೋಜನೆಯಡಿ ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಘೋಷಿಸಿದರು.

***


(Release ID: 1794423) Visitor Counter : 337