ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಕರಾವಳಿ ಪಡೆಯ ಕುಟುಂಬಕ್ಕೆ ಅವರ ಸಂಸ್ಥಾಪನಾ ದಿನದಂದು ಪ್ರಧಾನ ಮಂತ್ರಿ ಶುಭಾಶಯ

Posted On: 01 FEB 2022 9:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕರಾವಳಿ ಪಡೆಯ ಕುಟುಂಬಕ್ಕೆ ಅವರ ಸಂಸ್ಥಾಪನಾ ದಿನದಂದು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಟ್ವೀಟರ್‌ನಲ್ಲಿ ಪ್ರಧಾನಿ ಅವರು; ‘‘ಭಾರತೀಯ ಕರಾವಳಿ ಪಡೆ ಕುಟುಂಬಕ್ಕೆ ಅವರ ಸಂಸ್ಥಾಪನಾ ದಿನದಂದು ಶುಭಾಶಯಗಳು. ಹೆಚ್ಚಿನ ಕಾರ್ಯತಂತ್ರದ ಪ್ರಾಮುಖ್ಯತೆಯ ಸಂಸ್ಥೆಯಾಗಿರುವ ನಮ್ಮ ಕರಾವಳಿ ಕಾವಲು ಪಡೆ ಅತ್ಯುತ್ತಮ ವೃತ್ತಿಪರರ ತಂಡವಾಗಿದೆ, ಅವರು ನಮ್ಮ ಕರಾವಳಿಯನ್ನು ಸ್ಥಿರವಾಗಿ ಭದ್ರಪಡಿಸುವ ಜತೆಗೆ ಮಾನವೀಯ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ.’’ ಎಂದಿದ್ದಾರೆ.

***



(Release ID: 1794369) Visitor Counter : 145