ಪ್ರಧಾನ ಮಂತ್ರಿಯವರ ಕಛೇರಿ

‘ಪರೀಕ್ಷಾ ಪೇ ಚರ್ಚಾ 2022’ ದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಆಹ್ವಾನ

Posted On: 15 JAN 2022 7:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಪರೀಕ್ಷಾ ಪೇ ಚರ್ಚಾ 2022’ರ ಕುರಿತು ಟ್ವೀಟ್‌ ಮಾಡಿದ್ದಾರೆ ಮತ್ತು ನೋಂದಣಿಗಾಗಿ ಕೋರಿದ್ದಾರೆ. ಇದು ನಮ್ಮ ಕ್ರಿಯಾತ್ಮಕ ಯುವಕರೊಂದಿಗೆ ಸಂಪರ್ಕ ಸಾಧಿಸಲು, ಅವರ ಸವಾಲುಗಳು ಮತ್ತು ಆಕಾಂಕ್ಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನಿ ಅವರು ಟ್ವೀಟ್‌ ನಲ್ಲಿ:

ಪರೀಕ್ಷೆಗಳು ಸಮೀಪಿಸುತ್ತಿವೆ ಮತ್ತು ‘ಪರೀಕ್ಷಾ ಪೇ ಚರ್ಚಾ 2022’ ದಲ್ಲಿ ಒತ್ತಡ-ಮುಕ್ತ ಪರೀಕ್ಷೆಗಳ ಕುರಿತು ಮಾತನಾಡೋಣ ಮತ್ತು ಮತ್ತೊಮ್ಮೆ ನಮ್ಮ ಧೈರ್ಯಶಾಲಿ #ಪರೀಕ್ಷಾ ಯೋಧರು, ಅವರ ಪೋಷಕರು ಮತ್ತು ಶಿಕ್ಷಕರನ್ನು ಬೆಂಬಲಿಸೋಣ. ಈ ವರ್ಷದ #ಪಿಪಿಸಿ2022ಕ್ಕೆ ನೋಂದಾಯಿಸಿಕೊಳ್ಳುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.

ವೈಯಕ್ತಿಕವಾಗಿ, ‘ಪರೀಕ್ಷಾ ಪೇ ಚರ್ಚಾ’ ಒಂದು ಅದ್ಭುತ ಕಲಿಕೆಯ ಅನುಭವವಾಗಿದೆ. ನಮ್ಮ ಕ್ರಿಯಾತ್ಮಕ ಯುವಕರೊಂದಿಗೆ ಸಂಪರ್ಕ ಸಾಧಿಸಲು, ಅವರ ಸವಾಲುಗಳು ಮತ್ತು ಆಕಾಂಕ್ಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನಗೆ ಅವಕಾಶವಿದೆ. ಇದು ಶಿಕ್ಷ ಣದ ಜಗತ್ತಿನಲ್ಲಿ ಉದಯೋನ್ಮುಖ ಪ್ರವೃತ್ತಿಯನ್ನು ಕಂಡುಹಿಡಿಯುವ ಅವಕಾಶವನ್ನು ಒದಗಿಸುತ್ತದೆ #ಪಿಪಿಸಿ2022" ಎಂದಿದ್ದಾರೆ.

***



(Release ID: 1790229) Visitor Counter : 151