ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುವ ಎಲ್ಲರಿಗೂ ಪ್ರಧಾನಮಂತ್ರಿ ವಿನಂತಿಸುತ್ತಾರೆ

Posted On: 10 JAN 2022 10:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತವು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲು ಆರಂಭಿಸಿರುವ ಹಿನ್ನೆಲೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುವ ಎಲ್ಲರಿಗೂ ವಿನಂತಿಸಿದ್ದಾರೆ. ಜೊತೆಗೆ ಇಂದು ಲಸಿಕೆ ಪಡೆದವರನ್ನು ಶ್ಲಾಘಿಸಿದರು.

ಟ್ವೀಟ್‌ನಲ್ಲಿ  ಪ್ರತಿಕ್ರಿಯಿಸಿರುವ ಪ್ರಧಾನಿ ಅವರು;

"ಭಾರತವು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲು ಪ್ರಾರಂಭಿಸಿದೆ. ಇಂದು ಲಸಿಕೆಯನ್ನು ಪಡೆದವರಿಗೆ ಅಭಿನಂದನೆಗಳು. ಲಸಿಕೆಯನ್ನು ಪಡೆಯಲು ಅರ್ಹರಾಗಿರುವ ಎಲ್ಲರಿಗೂ ನಾನು ವಿನಂತಿಸುತ್ತೇನೆ. ನಮಗೆ ತಿಳಿದಿರುವಂತೆ, ಲಸಿಕೆಯು ಕೋವಿಡ್-19 ವಿರುದ್ಧ ಹೋರಾಡಲು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿ ಉಳಿದಿದೆ." ಎಂದಿದ್ದಾರೆ.

***



(Release ID: 1789249) Visitor Counter : 204