ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೋವಿಡ್ ಲಸಿಕೆ ಅಭಿಯಾನದಲ್ಲಿ 150 ಕೋಟಿ ಮೈಲಿಗಲ್ಲು ದಾಟಿದ್ದಕ್ಕಾಗಿ ದೇಶವಾಸಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ 

प्रविष्टि तिथि: 07 JAN 2022 9:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು, ಕೋವಿಡ್ ಲಸಿಕೆ ಅಭಿಯಾನದಲ್ಲಿ 150ಕೋಟಿಯ ಮೈಲುಗಲ್ಲು ದಾಟಿದ್ದಕ್ಕಾಗಿ ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಲಸಿಕೆ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಆಭಾರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.
ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ಲಸಿಕೆಗೆ ಸಂಬಂಧಿಸಿದಂತೆ ಇಂದು ಮಹತ್ವದ ದಿನ! 150ರ ಮೈಲಿಗಲ್ಲು ದಾಟಿದ ಸಂದರ್ಭದಲ್ಲಿ ಎಲ್ಲ ದೇಶವಾಸಿಗಳಿಗೂ ಅಭಿನಂದನೆಗಳು. ನಮ್ಮ ಲಸಿಕೆ ಅಭಿಯಾನ ಹಲವಾರು ಜೀವಗಳನ್ನು ಉಳಿಸಿದ್ದನ್ನು ಖಾತ್ರಿ ಪಡಿಸಿದೆ. ಅದೇ ವೇಳೆ ನಾವೆಲ್ಲರೂ ಕೋವಿಡ್-19 ಸಂಬಂಧಿತ ಎಲ್ಲ ಶಿಷ್ಟಾಚಾರಗಳನ್ನೂ ಪಾಲಿಸೋಣ.
ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಭಾರತ ಋಣಿಯಾಗಿದೆ. ನಾವು ನಮ್ಮ ವೈದ್ಯರು, ವಿಜ್ಞಾನಿಗಳು, ನಾವೀನ್ಯದಾರರು ಮತ್ತು ಜನರಿಗೆ ಲಸಿಕೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ. ಎಲ್ಲ ಅರ್ಹರೂ ತಮ್ಮ ಲಸಿಕೆ ಪಡೆಯುವಂತೆ ನಾನು ಆಗ್ರಹಿಸುತ್ತೇನೆ. ನಾವೆಲ್ಲ ಒಗ್ಗೂಡಿ ಕೋವಿಡ್ 19 ವಿರುದ್ಧ ಹೋರಾಡೋಣ.." ಎಂದು ತಿಳಿಸಿದ್ದಾರೆ.

 
 

***


(रिलीज़ आईडी: 1788688) आगंतुक पटल : 199
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam