ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19: ಸತ್ಯ ಮತ್ತು ಸುಳ್ಳು
15-18 ವಯಸ್ಸಿನವರ ಕೋವಿಡ್ ಲಸಿಕೆಯ ಮಾರ್ಗಸೂಚಿಗಳಲ್ಲಿ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂಬ ಮಾಧ್ಯಮ ವರದಿಗಳು ದಾರಿ ತಪ್ಪಿಸುವಂತಿವೆ
प्रविष्टि तिथि:
07 JAN 2022 10:43AM by PIB Bengaluru
15-18 ವರ್ಷ ವಯಸ್ಸಿನವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆ ಪಟ್ಟಿಯಲ್ಲಿ (ಇಯುಎಲ್) ಸೇರಿಸಿಲ್ಲದಿದ್ದರೂ ಅನುಮೋದನೆ ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇವು ಹೆಚ್ಚು ಮಾಹಿತಿಯಿಲ್ಲದ, ತಪ್ಪುದಾರಿಗೆಳೆಯುವ ಮತ್ತು ಸತ್ಯಕ್ಕೆ ದೂರವಾದ ವರದಿಗಳಾಗಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಇಯುಎಲ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 27ನೇ ಡಿಸೆಂಬರ್ 2021 ರಂದು ಕೇಂದ್ರ ಆರೋಗ್ಯ ಸಚಿವಾಲಯವು “15-18 ವರ್ಷ ವಯಸ್ಸಿನ ಹೊಸ ಫಲಾನುಭವಿಗಳು”ಶೀರ್ಷಿಕೆಯಡಿಯಲ್ಲಿ ಹೊರಡಿಸಿದ ಮಾರ್ಗಸೂಚಿಗಳ ಉಪ-ಶೀರ್ಷಿಕೆ (ಇ) ನ ಪುಟ 4 ರಲ್ಲಿ “ಅಂತಹ ಫಲಾನುಭವಿಗಳಿಗೆ, ಕೋವ್ಯಾಕ್ಸಿನ್ ಲಸಿಕೆ ಆಯ್ಕೆಯು ಮಾತ್ರ ಲಭ್ಯವಿರುತ್ತದೆ. ಇದು 15-18 ವಯಸ್ಸಿನವರಿಗೆ ತುರ್ತು ಬಳಕೆಗೆ (ಇಯುಎಲ್) ಇರುವ ಏಕೈಕ ಲಸಿಕೆಯಾಗಿದೆ" ಎಂದು ಹೇಳಲಾಗಿದೆ.
ರಾಷ್ಟ್ರೀಯ ಔಷಧ ನಿಯಂತ್ರಕ ಸಂಸ್ಥೆಯಾದ ಸಿ ಡಿ ಎಸ್ ಸಿ ಒ, 12-18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ 24ನೇ ಡಿಸೆಂಬರ್ 2021 ರಂದು ಅನುಮತಿ ನೀಡಿತು. ತರುವಾಯ, 15-18 ವರ್ಷ ವಯಸ್ಸಿನವರಿಗೆ ಮತ್ತು ಇತರ ಗುರುತಿಸಲಾದ ವರ್ಗಗಳಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲು 27ನೇ ಡಿಸೆಂಬರ್ 2021 ರಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇವುಗಳು ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ ಮತ್ತು ಅವುಗಳನ್ನು ಇಲ್ಲಿ ನೋಡಬಹುದು- https://www.mohfw.gov.in/pdf/GuidelinesforCOVID19VaccinationofChildrenbetween15to18yearsandPrecautionDosetoHCWsFLWs&60populationwithcomorbidities.pdf
***
(रिलीज़ आईडी: 1788364)
आगंतुक पटल : 284
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Tamil
,
Telugu