ಸಂಪುಟ
azadi ka amrit mahotsav g20-india-2023

ಕೆನ್-ಬೆತ್ವಾ ನದಿಗಳ ಜೋಡಣೆ ಯೋಜನೆಗೆ ಸಂಪುಟದ ಅನುಮೋದನೆ


ಯೋಜನೆಗೆ 44,605 ಕೋಟಿ ರೂ.ಗಳ ವೆಚ್ಚವಾಗಲಿದ್ದು, 8 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ

103 ಮೆಗಾವ್ಯಾಟ್ ಜಲ ವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆ

ಕೆನ್-ಬೆತ್ವಾ ನದಿ ಜೋಡಣೆ ಯೋಜನೆ ಪ್ರಾಧಿಕಾರ (ಕೆಬಿಎಲ್ ಪಿಎ) ಎಂದು ಕರೆಯಲಾಗುವ ವಿಶೇಷ ಉದ್ದೇಶದ ವಾಹಕ (ಎಸ್ ಪಿವಿ) ಯೋಜನೆಯ ಅನುಷ್ಠಾನವನ್ನು ರೂಪಿಸುತ್ತದೆ

ಈ ಯೋಜನೆಯು ಸದಾ ಬರಪೀಡಿತ ಮತ್ತು ನೀರಿನ ಕೊರತೆ ಇರುವ ಪ್ರದೇಶಗಳಾದ ಮಧ್ಯಪ್ರದೇಶದ ಛತ್ತಾರ್ ಪುರ್, ಪನ್ನಾ ಮತ್ತು ಟಿಕಾಮ್ ಘರ್ ಮತ್ತು ಉತ್ತರ ಪ್ರದೇಶದ ಬಂಡಾ, ಮಹೋಬಾ  ಮತ್ತು ಝಾನ್ಸಿಯ 10.62 ಲಕ್ಷ ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ

ಸಂಪರ್ಕ ಕಾಲುವೆಯು 62 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲಿದೆ

Posted On: 08 DEC 2021 4:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೆನ್-ಬೆತ್ವಾ ನದಿಗಳ ಜೋಡಣೆ ಯೋಜನೆಗೆ ಆರ್ಥಿಕ ನೆರವು ಮತ್ತು ಅನುಷ್ಠಾನಕ್ಕೆ ತನ್ನ ಅನುಮೋದನೆ ನೀಡಿದೆ.

ಕೆನ್-ಬೆತ್ವಾ ಸಂಪರ್ಕ ಯೋಜನೆಯ ಒಟ್ಟು ವೆಚ್ಚವನ್ನು 2020-21 ಬೆಲೆ ಮಟ್ಟದಲ್ಲಿ 44,605 ಕೋಟಿ ರೂ.ಗಳೆಂದು ಅಂದಾಜು  ಮಾಡಲಾಗಿದೆ.   ಯೋಜನೆಗೆ 36,290 ಕೋಟಿ ರೂ.ಗಳ ಅನುದಾನ ಮತ್ತು 3,027 ಕೋಟಿ ರೂ.ಗಳ ಸಾಲವನ್ನು ಒಳಗೊಂಡಂತೆ 39,317 ಕೋಟಿ ರೂ.ಗಳ ಕೇಂದ್ರ ಸರ್ಕಾರದ ಬೆಂಬಲಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಯೋಜನೆಯು ಭಾರತದಲ್ಲಿ ಇನ್ನೂ ಹೆಚ್ಚಿನ ನದಿ ಜೋಡಣೆ ಯೋಜನೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು  ನಮ್ಮ ಜಾಣ್ಮೆ ಮತ್ತು ದೃಷ್ಟಿಕೋನವನ್ನು ಜಗತ್ತಿಗೆ ಪ್ರದರ್ಶಿಸುತ್ತದೆ.

ಯೋಜನೆಯು ದೌಧನ್ ಅಣೆಕಟ್ಟು ನಿರ್ಮಾಣ ಮತ್ತು ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆ, ಕೆಳ ಓರ್ ಯೋಜನೆಕೋಥಾ  ಬ್ಯಾರೇಜ್ ಮತ್ತು ಬೀನಾ ಸಮುಚ್ಛಯ ವಿವಿಧೋದ್ದೇಶ ಯೋಜನೆಯ ಮೂಲಕ ಕೆನ್ ನಿಂದ ಬೆತ್ವಾ ನದಿಗೆ ನೀರನ್ನು ಹರಿಸುವುದನ್ನು ಒಳಗೊಂಡಿರುತ್ತದೆ. ಯೋಜನೆಯು ವಾರ್ಷಿಕ 10.62 ಲಕ್ಷ ಹೆಕ್ಟೇರ್ ನೀರಾವರಿ, ಸುಮಾರು 62 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಪೂರೈಕೆ ಮಾಡಲಿದ್ದು,  103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುತ್ತದೆಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 8 ವರ್ಷಗಳಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯೋಜಿಸಲಾಗಿದೆ.

ಯೋಜನೆಯಿಂದ ತೀವ್ರ ನೀರಿನ ಅಭಾವದಿಂದ ಬಳಲುತ್ತಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹರಡಿರುವ ಬುಂದೇಲ್ ಖಂಡ್ ಪ್ರದೇಶಕ್ಕೆ ಅಪಾರ ಪ್ರಯೋಜನವಾಗಲಿದೆ. ಯೋಜನೆಯು ಪನ್ನಾ, ಟಿಕಾಮ್ ಘರ್, ಛತರ್ಪುರ್, ಸಾಗರ್, ದಮೋಹ್ದತಿಯಾ,ವಿದಿಶಾ, ಶಿವಪುರಿ ಮತ್ತು ಮಧ್ಯಪ್ರದೇಶದ ರೈಸನ್ ಮತ್ತು ಉತ್ತರ ಪ್ರದೇಶದ ಬಾಂಡಾಮಹೋಬಾ, ಝಾನ್ಸಿ ಮತ್ತು ಲಲಿತಪುರ ಜಿಲ್ಲೆಗಳಿಗೆ ಅಪಾರ ಪ್ರಯೋಜನಗಳನ್ನು ಒದಗಿಸುತ್ತದೆ.

ಯೋಜನೆಯು ಕೃಷಿ ಚಟುವಟಿಕೆಗಳು ಮತ್ತು ಉದ್ಯೋಗ ಸೃಷ್ಟಿ ಹೆಚ್ಚಳದ ಕಾರಣದಿಂದಾಗಿ ಹಿಂದುಳಿದ ಬುಂದೇಲ್ ಖಂಡ್ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಪ್ರದೇಶದಿಂದ ಸಂಕಷ್ಟದ ವಲಸೆಯನ್ನು ತಡೆಯಲೂ ಸಹಾಯ ಮಾಡುತ್ತದೆ.

ಯೋಜನೆಯು ಪರಿಸರ ನಿರ್ವಹಣೆ ಮತ್ತು ಸುರಕ್ಷತೆಗಳನ್ನು ಸಮಗ್ರವಾಗಿ ಒದಗಿಸುತ್ತದೆ. ಉದ್ದೇಶಕ್ಕಾಗಿ  ಭಾರತೀಯ ವನ್ಯಜೀವಿ ಸಂಸ್ಥೆಯಿಂದ ಸಮಗ್ರ ಭೂರಮೆ ನಿರ್ವಹಣಾ ಯೋಜನೆ ಅಂತಿಮ ಹಂತದಲ್ಲಿದೆ.

ಹಿನ್ನೆಲೆ:

ದೇಶದ ಮೊದಲ ಪ್ರಮುಖ ಕೇಂದ್ರ ಚಾಲಿತ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸಲು 2021 ಮಾರ್ಚ್ 22ರಂದು ಕೇಂದ್ರ ಜಲಶಕ್ತಿ ಸಚಿವರು ಮತ್ತು ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಪ್ಪಂದವು ನದಿಗಳ ಜೋಡಣೆಯ ಮೂಲಕ, ಹೆಚ್ಚುವರಿ ನೀರಿರುವ ಪ್ರದೇಶಗಳಿಂದ ಬರ ಪೀಡಿತ ಮತ್ತು ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ಸಾಗಿಸುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನವನ್ನು ಜಾರಿಗೆ ತರಲು ಅಂತರ ರಾಜ್ಯ ಸಹಕಾರಕ್ಕೆ ನಾಂದಿ ಹಾಡುತ್ತದೆ.

***(Release ID: 1779543) Visitor Counter : 163