ಪ್ರಧಾನ ಮಂತ್ರಿಯವರ ಕಛೇರಿ
ಅತಿವೃಷ್ಟಿಯ ಹಾವಳಿಗೆ ಸಿಲುಕಿರುವ ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ
ಪ್ರಕಟಣಾ ದಿನಾಂಕ:
19 NOV 2021 6:38PM by PIB Bengaluru
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಗುರುವಾರ ಸಂಜೆ ಮಾತನಾಡಿದರು. ಅತಿವೃಷ್ಟಿಯಿಂದಾಗಿರುವ ಅನಾಹುತಗಳ ಬಗ್ಗೆ ವಿಚಾರಿಸಿದರು. ಕೇಂದ್ರದಿಂದ ಸಾಧ್ಯ ಇರುವ ಎಲ್ಲ ಸಹಾಯವನ್ನೂ ನೀಡುವುದಾಗಿ ಭರವಸೆ ನೀಡಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್‌ಜಗನ್‌ಗಾರು ಅವರಿಗೆ ದೂರವಾಣಿ ಕರೆ ಮಾಡಿ, ಅಲ್ಲಿಯ ಪರಿಸ್ಥಿತಿಯ ಕುರಿತು ವಿಚಾರಿಸಿಕೊಂಡೆ. ಕೇಂದ್ರದಿಂದ ಅಗತ್ಯವಿರುವ ನೆರವನ್ನು ನೀಡುವ ಭರವಸೆ ನೀಡಿದೆ. ಅಲ್ಲಿಯ ಪ್ರತಿ ಪ್ರಜೆಯ ಸುರಕ್ಷೆ ಹಾಗೂ ಸ್ವಾಸ್ಥ್ಯಕ್ಕಾಗಿ ಪ್ರಾರ್ಥಿಸುವೆ’ ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1773897)
ವಿಸಿಟರ್ ಕೌಂಟರ್ : 166
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam