ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟಕ್ಕೆ ಅಮೆರಿಕವನ್ನು ಸ್ವಾಗತಿಸಿದ ಪ್ರಧಾನಿ

Posted On: 10 NOV 2021 10:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಸ್ವಾಗತಿಸಿದ್ದಾರೆ. ಸೌರ ಮೈತ್ರಿಕೂಟ ಸೇರುವ ನಿರ್ಧಾರಕ್ಕಾಗಿ ಶ್ರೀ ಮೋದಿ ಅವರು ಅಮೆರಿಕ ಅಧ್ಯಕ್ಷ ಶ್ರೀ ಜೋ ಬೈಡೆನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಹವಾಮಾನ ಕುರಿತ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಶ್ರೀ ಜಾನ್ ಕೆರ್ರಿ ಅವರ ಟ್ವೀಟ್‌ಗೆ ಉತ್ತರವಾಗಿ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ: "ಅದ್ಭುತವಾದ ಸುದ್ದಿ @ClimateEnvoy! ಸೌರ ಮೈತ್ರಿಕೂಟಕ್ಕೆ @isolaralliance ಅಮೆರಿಕವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಮೆರಿಕದ ಅಧ್ಯಕ್ಷರಿಗೆ @POTUS ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇದು ಸುಸ್ಥಿರ ಭೂಮಂಡಲಕ್ಕಾಗಿ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಜಂಟಿ ಅನ್ವೇಷಣೆಯಲ್ಲಿ ನಮ್ಮ ಮೈತ್ರಿಯನ್ನು ಮತ್ತಷ್ಟು ಬಲಪಡಿಸುತ್ತದೆ."

***


(Release ID: 1770861) Visitor Counter : 218