ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
2014-15ರಿಂದ 2020-21ರವರೆಗಿನ ಹತ್ತಿ ಋತುವಿನಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) ಹತ್ತಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾರ್ಯಾಚರಣೆಳಿಂದ ಉಂಟಾದ ನಷ್ಟ ತುಂಬಿಕೊಡುವ ನಿಟ್ಟಿನಲ್ಲಿ ವೆಚ್ಚವನ್ನು ಭರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ
2014-15ರಿಂದ 2020-21ರ ವರೆಗಿನ ಹತ್ತಿ ಋತುಗಳಲ್ಲಿ ʻಭಾರತೀಯ ಹತ್ತಿ ಆಯೋಗʼಕ್ಕೆ (ಸಿಸಿಐ) 17,408.85 ಕೋಟಿ ರೂ.ಗಳ ಬೆಲೆ ಬೆಂಬಲಕ್ಕೆ ಸಂಪುಟ ಅನುಮೋದನೆ
Posted On:
10 NOV 2021 3:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ಸೇರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2014-15ರಿಂದ 2020-21ರವರೆಗಿನ ಹತ್ತಿ ಋತುಗಳಲ್ಲಿ (30.09.2021ರವರೆಗೆ) ʻಭಾರತೀಯ ಹತ್ತಿ ಆಯೋಗʼಕ್ಕೆ (ಸಿಸಿಐ) 17,408.85 ಕೋಟಿ ರೂ.ಗಳ ಬೆಲೆ ಬೆಂಬಲ ಬದ್ಧತೆಯನ್ನು ಅನುಮೋದಿಸಿದೆ.
ಹತ್ತಿ ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ, ಹತ್ತಿ ಬೆಲೆಗಳು ಕನಿಷ್ಠ ಬೆಂಬಲ ಬೆಲೆಗಳನ್ನು ಮುಟ್ಟಿದ್ದರಿಂದ 2014-15 ರಿಂದ 2020-21ರ ವರೆಗೆ ಹತ್ತಿ ವರ್ಷಗಳಲ್ಲಿ ಬೆಲೆ ಬೆಂಬಲ ಕಾರ್ಯಾಚರಣೆಗಳನ್ನು ನಡೆಸುವುದು ಸೂಕ್ತವಾಗಿದೆ. ಇದರ ಅನುಷ್ಠಾನವು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಹತ್ತಿ ಬೆಳೆಗಾರರ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಬೆಲೆ ಬೆಂಬಲ ಕಾರ್ಯಾಚರಣೆಗಳು ಹತ್ತಿ ಬೆಲೆಗಳನ್ನು ಸ್ಥಿರಗೊಳಿಸಲು ಮತ್ತು ರೈತರ ಸಂಕಷ್ಟವನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಹತ್ತಿಯು ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಸುಮಾರು 58 ಲಕ್ಷ ಹತ್ತಿ ಬೆಳೆಗಾರರು, ಹತ್ತಿ ಸಂಸ್ಕರಣೆ ಮತ್ತು ವ್ಯಾಪಾರದಂತಹ ಚಟುವಟಿಕೆಗಳಲ್ಲಿ ತೊಡಗಿರುವ 400ರಿಂದ 500ಲಕ್ಷ ಜನರ ಜೀವನೋಪಾಯಕ್ಕೆ ಹತ್ತಿಯು ಪ್ರಮುಖ ಪಾತ್ರ ವಹಿಸುತ್ತದೆ.
202-21ರ ಹತ್ತಿ ಋತುವಿನಲ್ಲಿ 133 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಕೃಷಿ ಮಾಡಲಾಗಿದ್ದು, ಇದರಿಂದ ಅಂದಾಜು 360 ಲಕ್ಷ ಪಿಂಡಿಗಳ (ಬೇಲ್) ಉತ್ಪಾದನೆಯಾಗಿದೆ. ಇದು ಒಟ್ಟು ಜಾಗತಿಕ ಹತ್ತಿ ಉತ್ಪಾದನೆಯಲ್ಲಿ ಸುಮಾರು 25% ರಷ್ಟಾಗಿದೆ. ʻಸಿಎಸಿಪಿʼ ಶಿಫಾರಸುಗಳ ಆಧಾರದ ಮೇಲೆ ಭಾರತ ಸರಕಾರವು ಬೀಜ ಹತ್ತಿಗೆ (ಕಪಾಗಳು) ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತದೆ.
ಭಾರತ ಸರಕಾರವು ʻಸಿಸಿಐʼ ಅನ್ನು ಕೇಂದ್ರ ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಹತ್ತಿ ಬೆಲೆಗಳು ಕನಿಷ್ಠ ಬೆಂಬಲ ಬೆಲೆಮಟ್ಟಕ್ಕಿಂತ ಕಡಿಮೆಯಾದಾಗ, ಯಾವುದೇ ಪರಿಮಾಣಾತ್ಮಕ ಮಿತಿ ಇಲ್ಲದೆ ರೈತರಿಂದ ಎಲ್ಲಾ ʻಎಫ್‌ಎಕ್ಯೂʼ ದರ್ಜೆಯ ಹತ್ತಿಯನ್ನು ಖರೀದಿಸುವ ಮೂಲಕ ಹತ್ತಿಯಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಸಿಸಿಐ ಕಡ್ಡಾಯವಾಗಿ ಜಾರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಗಳು ಯಾವುದೇ ಪ್ರತಿಕೂಲ ಬೆಲೆ ಪರಿಸ್ಥಿತಿಯಲ್ಲಿ ಹತ್ತಿ ಬೆಳೆಗಾರರನ್ನು ನಷ್ಟದಿಂದ ರಕ್ಷಿಸುತ್ತವೆ.
ʻಎಂಎಸ್‌ಪಿʼ ಕಾರ್ಯಾಚರಣೆಗಳು ಸಾರ್ವಭೌಮ ಸ್ವರೂಪದವಾಗಿರುವುದರಿಂದ ದೇಶದ ಹತ್ತಿ ಬೆಳೆಗಾರರು ಹತ್ತಿ ಕೃಷಿಯಲ್ಲಿ ತಮ್ಮ ನಿರಂತರ ಆಸಕ್ತಿಯನ್ನು ಉಳಿಸಿಕೊಳ್ಳಲು ಪ್ರೇರೇಪಿಸುತ್ತವೆ. ಇದರಿಂದ ಭಾರತವು ನೂಲುವ ಉದ್ಯಮಕ್ಕೆ ಕಚ್ಚಾ ವಸ್ತುವಾದ ಗುಣಮಟ್ಟದ ಹತ್ತಿ ಒದಗಿಸುವಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗುತ್ತದೆ. 143 ಜಿಲ್ಲೆಗಳಲ್ಲಿ 474 ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ʻಸಿಸಿಐʼ ಎಲ್ಲಾ 11 ಪ್ರಮುಖ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ತನ್ನ ಮೂಲಸೌಕರ್ಯವನ್ನು ಸಜ್ಜುಗೊಳಿಸಿದೆ.
ಕಳೆದ ಎರಡು ಹತ್ತಿ ಋತುಗಳಲ್ಲಿ (2019-20 ಮತ್ತು 2020-21) ಜಾಗತಿಕ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಸಿಸಿಐ ದೇಶದಲ್ಲಿ ಹತ್ತಿ ಉತ್ಪಾದನೆಯ ಸುಮಾರು 1/3 ಭಾಗವನ್ನು ಅಂದರೆ ಸುಮಾರು 200 ಲಕ್ಷ ಪಿಂಡಿಗಳನ್ನು ಸಂಗ್ರಹಿಸಿ, ಸುಮಾರು 40 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 55,000/- ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜಮೆ ಮಾಡಿದೆ.
ಪ್ರಸಕ್ತ ಹತ್ತಿ ಋತುವಿನಲ್ಲಿ ಅಂದರೆ 2021-022 ರಲ್ಲಿ, ʻಸಿಸಿಐʼ ಈಗಾಗಲೇ ಎಲ್ಲಾ 11 ಪ್ರಮುಖ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಎಲ್ಲಾ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಎಂಎಸ್‌ಪಿ ಅನುಷ್ಠಾನದಲ್ಲಿ ಯಾವುದೇ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ 450ಕ್ಕೂ ಹೆಚ್ಚು ಖರೀದಿ ಕೇಂದ್ರಗಳಲ್ಲಿ ಮಾನವ ಸಂಪನ್ಮೂಲದ ನಿಯೋಜನೆಯೂ ಈ ಸಿದ್ಧತೆಗಳಲ್ಲಿ ಸೇರಿದೆ.
***
(Release ID: 1770621)
Visitor Counter : 244
Read this release in:
Marathi
,
Gujarati
,
Malayalam
,
Assamese
,
Odia
,
English
,
Urdu
,
Hindi
,
Manipuri
,
Bengali
,
Punjabi
,
Tamil
,
Telugu