ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರಕಾರದ ಮುಖ್ಯಸ್ಥರಾಗಿ 20 ವರ್ಷಗಳನ್ನು ಪೂರ್ಣಗೊಳಿಸಿದ ಪ್ರಧಾನಮಂತ್ರಿಯವರ ಬಗ್ಗೆ ʻಮೈಗವ್ʼ ರಸಪ್ರಶ್ನೆ

Posted On: 07 OCT 2021 10:25AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸರಕಾರದ ಮುಖ್ಯಸ್ಥರಾಗಿ 20 ವರ್ಷಗಳನ್ನು ಪೂರೈಸಿದ್ದಾರೆ. ಸಂದರ್ಭದಲ್ಲಿ, ʻಸೇವಾ ಸಮರ್ಪಣ್‌ ರಸಪ್ರಶ್ನೆ ಸ್ಪರ್ಧೆʼಯನ್ನು ʻಮೈಗವ್ಇಂಡಿಯಾʼ ಆಯೋಜಿಸುತ್ತಿದೆ.

ಕುರಿತು ಟ್ವೀಟ್‌ ಪ್ರಧಾನಮಂತ್ರಿಗಳ ಕಾರ್ಯಾಲಯ ಹೀಗೆ ಟ್ವೀಟ್‌ ಮಾಡಿದೆ:

"ಪ್ರಧಾನಮಂತ್ರಿ @narendramodi ಅವರು ಇಂದು, ಅಕ್ಟೋಬರ್ 7ರಂದು ಸರಕಾರದ ಮುಖ್ಯಸ್ಥರಾಗಿ 20 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ಸದಾ ತಮ್ಮನ್ನು 'ಆತ್ಮನಿರ್ಭರ್ ಭಾರತ್'ಗಾಗಿ ದುಡಿಯುತ್ತಿರುವ 'ಪ್ರಧಾನ ಸೇವಕ' ಎಂದು ಹೇಳಿಕೊಳ್ಳುತ್ತಾರೆ. ಕಳೆದ 20 ವರ್ಷಗಳಲ್ಲಿ ರಾಷ್ಟ್ರ ನಿರ್ಮಾಣದ ವಿವಿಧ ಅಂಶಗಳ ಕುರಿತಾದ ರಸಪ್ರಶ್ನೆಯಲ್ಲಿ @mygovindia ಮೂಲಕ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿ: https://t.co/nEYpBCltGN".

***


(Release ID: 1761668) Visitor Counter : 240