ಪ್ರಧಾನ ಮಂತ್ರಿಯವರ ಕಛೇರಿ
ಬ್ಲಾಕ್ಸ್ಟೋನ್ ಅಧ್ಯಕ್ಷ, ಸಿ.ಇ.ಒ. ಮತ್ತು ಸಹ –ಸಂಸ್ಥಾಪಕ ಶ್ರೀ ಸ್ಟೀಫನ್ ಶ್ಚೆವರ್ಜ್ಮಾನ್ ಜೊತೆ ಪ್ರಧಾನ ಮಂತ್ರಿ ಮಾತುಕತೆ
प्रविष्टि तिथि:
23 SEP 2021 9:27PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬ್ಲಾಕ್ಸ್ಟೋನ್ ಅಧ್ಯಕ್ಷ, ಸಿ.ಇ.ಒ., ಮತ್ತು ಸಹ –ಸಂಸ್ಥಾಪಕ ಶ್ರೀ ಸ್ಟೀಫನ್ ಶ್ಚೆವರ್ಜ್ಮಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಶ್ರೀ ಶ್ಚೆವರ್ಜ್ಮಾನ್ ಅವರು ಭಾರತದಲ್ಲಿ ಚಾಲ್ತಿಯಲ್ಲಿರುವ ಬ್ಲಾಕ್ಸ್ಟೋನ್ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ಅವರಿಗೆ ವಿವರಿಸಿದರು ಮತ್ತು ಮೂಲಸೌಕರ್ಯ ಹಾಗು ರಿಯಲ್ ಎಸ್ಟೇಟ್ ವಲಯಗಳಲ್ಲಿ ಇನ್ನಷ್ಟು ಹೂಡಿಕೆಗೆ ಸಂಬಂಧಿಸಿದ ತಮ್ಮ ಆಸಕ್ತಿಯ ಬಗ್ಗೆಯೂ ತಿಳಿಸಿದರು. ಭಾರತದಲ್ಲಿ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಮತ್ತು ರಾಷ್ಟ್ರೀಯ ಮಾನಿಟೈಸೇಶನ್ ಪೈಪ್ ಲೈನ್ ನಡಿಯಲ್ಲಿ ಇರುವ ಭರವಸೆದಾಯಕ ಹೂಡಿಕೆ ಅವಕಾಶಗಳ ಬಗ್ಗೆಯೂ ಚರ್ಚಿಸಲಾಯಿತು.
***
(रिलीज़ आईडी: 1757495)
आगंतुक पटल : 246
इस विज्ञप्ति को इन भाषाओं में पढ़ें:
Malayalam
,
Tamil
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Telugu