ಪ್ರಧಾನ ಮಂತ್ರಿಯವರ ಕಛೇರಿ
ಸ್ವಾಮಿ ವಿವೇಕಾನಂದರ 1893ರ ಷಿಕಾಗೊ ಐತಿಹಾಸಿಕ ಭಾಷಣ; ಪ್ರಧಾನ ಮಂತ್ರಿ ಸ್ಮರಣೆ
प्रविष्टि तिथि:
11 SEP 2021 11:02PM by PIB Bengaluru
ಭಾರತದ ಆಧ್ಯಾತ್ಮಿಕ ಸಂತ ಸ್ವಾಮಿ ವಿವೇಕಾನಂದರು 1893ರಲ್ಲಿ ಷಿಕಾಗೊದಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ. ಸ್ವಾಮಿ ವಿವೇಕಾನಂದರ ಭಾಷಣದ ಸ್ಫೂರ್ತಿಯು ಈ ಸುಂದರ ಪೃಥ್ವಿಯನ್ನು ಮತ್ತಷ್ಟು ಸಮೃದ್ಧಗೊಳಿಸುವ, ಎಲ್ಲರನ್ನು ಒಳಗೊಂಡ ಪ್ರಗತಿಗೆ ಕೊಂಡೊಯ್ಯುವ ಅಪಾರ ಸಾಮರ್ಥ್ಯವನ್ನು ಸೃಜಿಸುವ ತಾಕತ್ತು ಹೊಂದಿದೆ.
ಸ್ವಾಮಿ ವಿವೇಕಾನಂದರ ಷಿಕಾಗೊ ಭಾಷಣದ ವಾರ್ಷಿಕೋತ್ಸವದ ನೆನಪಲ್ಲಿ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು: “1893ರಲ್ಲಿ ಸ್ವಾಮಿ ವಿವೇಕಾನಂದರು ಷಿಕಾಗೊದಲ್ಲಿ ಮಾಡಿದ ಭಾಷಣದ ತುಣುಕುಗಳನ್ನು ನೆನಪು ಮಾಡಿಕೊಂಡಿರುವ ಪ್ರಧಾನ ಮಂತ್ರಿ ಅವರು, ಅವರ ಸುಂದರ ಮತ್ತು ಅದ್ಭುತ ಭಾಷಣವು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಸಾರವನ್ನು ಸಾರಿದೆ. ಅವರ ಭಾಷಣದ ಸ್ಫೂರ್ತಿಯು ಇಡೀ ವಿಶ್ವವನ್ನೇ ಮತ್ತಷ್ಟು ಸಮೃದ್ಧಗೊಳಿಸುವ, ಎಲ್ಲರನ್ನೂ ಒಳಗೊಂಡ ಪ್ರಗತಿಯ ಹಾದಿಗೆ ಕೊಂಡೊಯ್ಯುವ ಅಪಾರ ಸಾಮರ್ಥ್ಯವನ್ನು ಸೃಜಿಸಿದೆ” ಎಂದಿದ್ದಾರೆ.
***
(रिलीज़ आईडी: 1754450)
आगंतुक पटल : 287
इस विज्ञप्ति को इन भाषाओं में पढ़ें:
English
,
Urdu
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam