ಪ್ರಧಾನ ಮಂತ್ರಿಯವರ ಕಛೇರಿ
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಟಿ 47 ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದ ನಿಶಾದ್ ಕುಮಾರ್ ಅವರಿಗೆ ಪ್ರಧಾನಿ ಅಭಿನಂದನೆ
ಪ್ರಕಟಣಾ ದಿನಾಂಕ:
29 AUG 2021 5:44PM by PIB Bengaluru
ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಟಿ 47 ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದ ನಿಶಾದ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿಯವರು, "ಟೋಕಿಯೊದಿಂದ ಮತ್ತಷ್ಟು ಸಂತಸದ ಸುದ್ದಿಗಳು ಬಂದಿವೆ! ಪುರುಷರ ಟಿ 47 ಎತ್ತರ ಜಿಗಿತದಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿರುವುದು ಅಪಾರ ಸಂತೋಷ ತಂದಿದೆ. ಅವರು ಅತ್ಯುತ್ತಮ ಕೌಶಲ್ಯ ಮತ್ತು ದೃಢತೆ ಹೊಂದಿರುವ ವಿಶಿಷ್ಟ ಅಸಾಧಾರಣ ಕ್ರೀಡಾಪಟು. ಅವರಿಗೆ ಅಭಿನಂದನೆಗಳು. #Paralympics " ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1750467)
ವಿಸಿಟರ್ ಕೌಂಟರ್ : 215
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam