ಪ್ರಧಾನ ಮಂತ್ರಿಯವರ ಕಛೇರಿ

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖಾರ ಅವರಿಗೆ ಪ್ರಧಾನಿ ಅಭಿನಂದನೆ

Posted On: 30 AUG 2021 9:22AM by PIB Bengaluru

ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖಾರ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್  ಮಾಡಿರುವ ಪ್ರಧಾನಿಯವರು, "ಅದ್ಭುತ ಪ್ರದರ್ಶನ ಅವನಿಲೇಖಾರ! ಶ್ರಮ ಮತ್ತು ಅರ್ಹತೆಯಿಂದ ಸಂಪಾದಿಸಿದ ಚಿನ್ನದ ಪದಕಕ್ಕಾಗಿ ಅಭಿನಂದನೆಗಳು. ನಿಮ್ಮ ಶ್ರಮಶೀಲ ಸ್ವಭಾವ ಮತ್ತು ಶೂಟಿಂಗ್  ಬಗ್ಗೆ ಇರುವ ಪ್ರೀತಿಯಿಂದಾಗಿ ಇದು ಸಾಧ್ಯವಾಗಿದೆ. ಇದು ನಿಜವಾಗಿಯೂ ಭಾರತದ ಕ್ರೀಡಾಕ್ಷೇತ್ರಕ್ಕೆ ಒಂದು ವಿಶೇಷ ಕ್ಷಣವಾಗಿದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು." ಎಂದು ಹೇಳಿದ್ದಾರೆ.

 


 

****



(Release ID: 1750452) Visitor Counter : 203