ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ನಲ್ಲಿ  ಬೆಳ್ಳಿಪದಕ ಗೆದ್ದ ಭಾವಿನಾ ಪಟೇಲ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 29 AUG 2021 9:06AM by PIB Bengaluru

ಟೋಕಿಯೋ ದಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾವಿನಾ ಪಟೇಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, "ಭಾವಿನಾ ಪಟೇಲ್ ಗಮನಾರ್ಹ ಇತಿಹಾಸ ಬರೆದಿದ್ದಾರೆ! ಈಕೆ ಮನೆಗೆ ಐತಿಹಾಸಿಕ ಬೆಳ್ಳಿ ಪದಕವನ್ನು ತಂದಿದ್ದಾರೆ. ಅದಕ್ಕಾಗಿ ಇವರ ಕ್ರೀಡಾ ಸಾಧನೆಗಾಗಿ ಅಭಿನಂದನೆಗಳು. ಇವರ ಕ್ರೀಡಾ ಜೀವನದ ಪಯಣ ಪ್ರೇರಣದಾಯಕವಾಗಿದೆ ಮತ್ತು ಹೆಚ್ಚಿನ ಯುವಸಮೂಹವನ್ನು ಕ್ರೀಡೆಗಳತ್ತ ಸೆಳೆಯುವಂತೆ ಮಾಡುತ್ತದೆ. #ಪ್ಯಾರಾಲಿಂಪಿಕ್ಸ್." ಎಂದು ಹೇಳಿದ್ದಾರೆ.

***


(Release ID: 1750113) Visitor Counter : 219