ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
'ವಿಶ್ವ 2021 ಯು20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನಲ್ಲಿ ಭಾರತದ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್
ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ಎಲ್ಲಾ ಸೌಲಭ್ಯಗಳು ಮತ್ತು ಉತ್ತಮ ತರಬೇತಿಯ ಖಾತರಿಯನ್ನು ಸರಕಾರ ನೀಡಲಿದೆ: ಶ್ರೀ ಅನುರಾಗ್ ಠಾಕೂರ್
ಎರಡು ಬೆಳ್ಳಿ ಸೇರಿದಂತೆ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮೂರು ಪದಕಗಳನ್ನು ಗೆದ್ದಿದೆ
Posted On:
25 AUG 2021 1:44PM by PIB Bengaluru
ಮುಖ್ಯಾಂಶಗಳು:
- ಇದು ನಮ್ಮ ಪಾಲಿಗೆ ದೊಡ್ಡ ಸಂಭ್ರದ ಕ್ಷಣ, ನಮಗೆ ನಿಮ್ಮಲ್ಲಿ ಭರವಸೆ ಕಾಣುತ್ತಿದೆ: ಶ್ರೀ ಅನುರಾಗ್ ಠಾಕೂರ್
- ಯುವ ಕ್ರೀಡಾಪಟುಗಳೊಂದಿಗೆ ಕೈ ಜೋಡಿಸಿ ಅವರಿಗೆ ತರಬೇತಿ ನೀಡಲು ಮತ್ತು ಮತ್ತು ಅವರನ್ನು ಪ್ರೇರೇಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಕ್ರೀಡಾಪಟುಗಳು ಮುಂದೆ ಬರಬೇಕು: ಕ್ರೀಡಾ ಸಚಿವ
- ಪುರುಷರ 10000 ಮೀ. ರೇಸ್ ವಾಕ್‌ನಲ್ಲಿ ಬೆಳ್ಳಿ ಪದಕ ಪಡೆಯುವುದಕ್ಕಾಗಿ ಅಮಿತ್ ಖತ್ರಿ ಅವರು ತಮ್ಮ ಉಸಿರಾಟದ ತೊಂದರೆಯನ್ನು ಧೈರ್ಯದಿಂದ ಎದುರಿಸಿ ಜಯಿಸಿದರು
- ʻಲಾಂಗ್ ಜಂಪ್ʼನಲ್ಲಿ ಶ್ರೀಮತಿ ಶೈಲಿ ಸಿಂಗ್ ಬೆಳ್ಳಿ ಗೆದ್ದಿದ್ದಾರೆ.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ʻ2021ನೇ ಸಾಲಿನ 20 ವರ್ಷದೊಳಗಿನ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ʼ(2021 ವಿಶ್ವ ಯು20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್)ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು ಮತ್ತು ಪದಕ ವಿಜೇತರೊಂದಿಗೆ ಇಂದು ಸಂವಾದ ನಡೆಸಿದರು. ಕೀನ್ಯಾದ ನೈರೋಬಿಯಲ್ಲಿರುವ ಮೋಯಿ ಅಂತಾರಾಷ್ಟ್ರೀಯ ಕ್ರೀಡಾ ಕೇಂದ್ರದಲ್ಲಿ 2021ರ ಆಗಸ್ಟ್ 18ರಿಂದ 22ರವರೆಗೆ ನಡೆದ, ʻವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ʼ ಎಂದೂ ಕರೆಯಲಾಗುವ ಈ ಕ್ರೀಡಾಕೂಟದಲ್ಲಿ ಭಾರತ ಎರಡು ಬೆಳ್ಳಿ ಸೇರಿದಂತೆ ಮೂರು ಪದಕಗಳನ್ನುಗೆದ್ದಿದೆ. ಲಾಂಗ್ ಜಂಪ್ ತರಬೇತುದಾರ ರಾಬರ್ಟ್ ಬಾಬಿ ಜಾರ್ಜ್, ಅಂಜು ಬಾಬಿ ಜಾರ್ಜ್, ಕಮಲ್ ಅಲಿ ಖಾನ್, ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನವದೆಹಲಿಯಲ್ಲಿ ಇಂದು ವಿಶ್ವ ಯುವ ಚಾಂಪಿಯನ್‌ಶಿಪ್‌ನ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ಪದಕ ವಿಜೇತರನ್ನು ಅಭಿನಂದಿಸಿದರು ಹಾಗೂ ಭಾರತದ 20 ವರ್ಷದೊಳಗಿನ ಅಥ್ಲೆಟಿಕ್ಸ್ ಚಾಂಪಿಯನ್‌ಗಳು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಹೇಳಿದರು. "ಇದು ನಮಗೆ ದೊಡ್ಡ ಸಂಭ್ರಮದ ಕ್ಷಣವಾಗಿದೆ", ಎಂದು ಸಚಿವರು ಹೇಳಿದರು. ಯುವ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಒಲಿಂಪಿಕ್ ಕ್ರೀಡಾಕೂಟದಂತಹ ಭವಿಷ್ಯದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ಶ್ರೀ ಅನುರಾಗ್ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದರು. "ನಮಗೆ ನಿಮ್ಮಲ್ಲಿ ಭರವಸೆ ಕಾಣಿಸಿದೆ,ʼʼ ಎಂದು ಸಚಿವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ಸೃಷ್ಟಿಸಿದ ಪರಿಸ್ಥಿತಿಗಳ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಮತ್ತು ಪದಕಗಳನ್ನು ಗೆದ್ದಿದ್ದಕ್ಕಾಗಿ ಕ್ರೀಡಾಪಟುಗಳು, ಫೆಡರೇಷನ್ ಮತ್ತು ತರಬೇತುದಾರರ ಪ್ರಯತ್ನಗಳನ್ನು ಕ್ರೀಡಾ ಸಚಿವರು ಶ್ಲಾಘಿಸಿದರು. "ಕೋವಿಡ್-19ರ ಹಿನ್ನೆಲೆಯಲ್ಲಿ ನಿಮ್ಮ ಕಾರ್ಯಕ್ಷಮತೆ ಪ್ರಶಂಸನೀಯವಾಗಿದೆ. ಈಗಿನ ಸಮಯ ಸುಲಭವೂ ಆಗಿರಲಿಲ್ಲ, ಸಾಮಾನ್ಯವೂ ಆಗಿರಲಿಲ್ಲ", ಎಂದು ಸಚಿವರು ಅಭಿಪ್ರಾಯಪಟ್ಟರು. ದೊಡ್ಡ ಮಟ್ಟದಲ್ಲಿ ಆಲೋಚನೆ ಮಾಡಿ, ಭವಿಷ್ಯಕ್ಕಾಗಿ ಯೋಜನೆ ತಯಾರಿಸಿ, ಮುಂದಿನ ಹಂತದ ಸ್ಪರ್ಧೆಗೆ ಸಿದ್ಧರಾಗುವಂತೆ ಕ್ರೀಡಾಪಟುಗಳಿಗೆ ಅವರು ಸಲಹೆ ನೀಡಿದರು.
ಒಂದು ಮಹತ್ವದ ವಿಚಾರವೆಂದರೆ, ಭಾರತವು ಇಂದು ಗಣನೀಯ ಕ್ರೀಡಾಪಟುಗಳ ಬಲವನ್ನು ಹೊಂದಿದೆ. ವೈವಿಧ್ಯಮಯ ಕ್ರೀಡೆಗಳನ್ನು ಮತ್ತು ಭಾರತದ ಯುವ ಕ್ರೀಡಾಪಟುಗಳನ್ನು ಪೋಷಿಸಲು ಹಾಗೂ ಅವರನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಸರಕಾರ ಗಮನ ಕೇಂದ್ರೀಕರಿಸಿದೆ ಎಂದು ವಿವರಿಸಿದರು. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ಎಲ್ಲಾ ಸೌಲಭ್ಯಗಳು ಮತ್ತು ಉತ್ತಮ ತರಬೇತಿಯ ಖಾತರಿಯನ್ನು ಸರಕಾರ ಒದಗಿಸಿದೆ. ಈ ನಿಟ್ಟಿನಲ್ಲಿ ಉನ್ನತ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. ಮಾಜಿ ಕ್ರೀಡಾಪಟುಗಳು ತರಬೇತಿ ಕ್ಷೇತ್ರಕ್ಕೆ ಬಂದಿರುವುದನ್ನು ಶ್ಲಾಘಿಸಿದ ಕ್ರೀಡಾ ಸಚಿವರು, ಯುವ ಕ್ರೀಡಾಪಟುಗಳನ್ನು ಕೈಹಿಡಿಯಲು ಮತ್ತು ಅವರನ್ನು ಪ್ರೇರೇಪಿಸಲು ಇಂತಹ ಮತ್ತಷ್ಟು ಹೆಚ್ಚಿನ ಸಂಖ್ಯೆ ಕ್ರೀಡಾಪಟುಗಳು ಮುಂದೆ ಬರಬೇಕು ಎಂದು ಒತ್ತಾಯಿಸಿದರು. ನಾವು ಹೊಸ ಆಲೋಚನೆಗಳು ಮತ್ತು ಸಲಹೆಗಳಿಗೆ ಮುಕ್ತರಾಗಿದ್ದೇವೆ. ನಾವು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಾವು ದೃಢವಾದ ಕ್ರೀಡಾ ಸಂಸ್ಕೃತಿಯನ್ನು ಮತ್ತು ಭವಿಷ್ಯವನ್ನು ನಿರ್ಮಿಸಬಹುದು ಎಂದು ಸಚಿವರು ಹೇಳಿದರು.
1೦೦೦೦ ಮೀ ರೇಸ್ ವಾಕ್‌ನಲ್ಲಿ ಶ್ರೀ ಅಮಿತ್ ಖತ್ರಿ ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಯು20 ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 1೦೦೦೦ ಮೀ ರೇಸ್ ವಾಕ್‌ನಲ್ಲಿ ಬೆಳ್ಳಿ ಪದಕ ಪಡೆಯಲು ಅಮಿತ್ ಖತ್ರಿ ಅವರು ತಮ್ಮ ಉಸಿರಾಟದ ತೊಂದರೆಗಳನ್ನು ಧೈರ್ಯದಿಂದ ಎದುರಿಸಿ ಜಯಿಸಿದರು. ಹೆಚ್ಚಿನ ಸಮಯ ಮುಂದಾಳು ಗುಂಪಿನಲ್ಲಿ ವೇಗವನ್ನು ಕಾಯ್ದುಕೊಂಡು 9೦೦೦ ಮೀ. ತಲುಪಿದ ಕೂಡಲೇ ಮುನ್ನಡೆ ಸಾಧಿಸಿದ ಅಮಿತ್ ಖತ್ರಿ, ಕೀನ್ಯಾದ ಹೆರಿಸ್ಟೋನ್ ವಾನ್ಯಾನಿ (41:10.84)) ಅವರ ಹಿಂದೆ 42:17:94ರ ವೇಳೆಗೆ ಸ್ಪರ್ಧೆಯನ್ನು ಮುಗಿಸಿದರು. ನೀರು ಪಡೆಯಲು ಅವರು ಆಗಾಗ್ಗೆ ರಿಫ್ರೆಶ್‌ಮೆಂಟ್ ಟೇಬಲ್‌ಗೆ ಭೇಟಿ ನೀಡಿದ್ದು- ವಿಶೇಷವಾಗಿ ಮುಕ್ತಾಯದ ಹಂತದಲ್ಲಿ ಅವರ ಈ ನಡೆಯು ಅವರನ್ನು ಚಿನ್ನದ ಪದಕದಿಂದ ದೂರ ಮಾಡಿತು.
ಲಾಂಗ್ ಜಂಪ್‌ಲ್ಲಿ ಶ್ರೀಮತಿ ಶೈಲಿ ಸಿಂಗ್ ಬೆಳ್ಳಿ ಗೆದ್ದರು. ಶೈಲಿ ಸಿಂಗ್ ಅವರು ತಮ್ಮ ಬೆಳ್ಳಿ ಪದಕದ ಹಾದಿಯಲ್ಲಿ ಮಹಿಳೆಯರ ಲಾಂಗ್ ಜಂಪ್‌ನ ಫೈನಲ್‌ನಲ್ಲಿ 6.59 ಮೀ. ದೂರ ಜಿಗಿಯುವ ಮೂಲಕ ವೈಯಕ್ತಿಕ ಅತ್ಯುತ್ತಮ ದಾಖಲೆ ಮಾಡಿದರು. ರಾಷ್ಟ್ರೀಯ ಯು20 ದಾಖಲೆ ಹೊಂದಿರುವ ಶೈಲಿ ಸಿಂಗ್ ಅವರು ಫೈನಲ್ಸ್‌ಗೆ ನಿಗದಿಪಡಿಸಲಾಗಿದ್ದ 6.35 ಮೀ ಅರ್ಹತೆ ಮಾನದಂಡಕ್ಕೆ ಸ್ವಯಂಚಾಲಿತ ಅರ್ಹತೆಯನ್ನು ಪಡೆದ ಮೂವರು ಮಹಿಳಾ ಲಾಂಗ್ ಜಂಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ತಮ್ಮ ಮೂರನೇ ಪ್ರಯತ್ನದಲ್ಲಿ 6.40 ಮೀ ಜಿಗಿದರು.
ಶ್ರೀ ಭರತ್ ಶ್ರೀಧರ್, ಶ್ರೀಮತಿ ಪ್ರಿಯಾ ಮೋಹನ್, ಶ್ರೀಮತಿ ಸುಮ್ಮಿ, ಶ್ರೀ ಕಪಿಲ್, ಶ್ರೀ ಅಬ್ದುಲ್ ರಝಾಕ್ ಅವರು ಮಿಶ್ರ 4x400 ಮೀ ರಿಲೇಗಳಲ್ಲಿ ಕಂಚು ಗೆದ್ದರು. ನೈರೋಬಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಯು20 ಚಾಂಪಿಯನ್‌ಶಿಪ್‌ನ ಆರಂಭಿಕ ದಿನದಂದು ಭಾರತದ 4x4೦೦ ಮೀ ಮಿಶ್ರ ರಿಲೇ ತಂಡವು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಭರತ್ ಶ್ರೀಧರ್, ಪ್ರಿಯಾ ಮೋಹನ್, ಸುಮ್ಮಿ ಮತ್ತು ಕಪಿಲ್ ಅವರು ನೈಜೀರಿಯಾ (3:19.70) ಮತ್ತು ಪೋಲೆಂಡ್ (3:19.80) ಹಿಂದೆ 3:20.60ಕ್ಕೆ ಮುಗಿಸಿದರು. ಕೆಲವೇ ಕ್ಷಣಗಳ ಅಂತರವನ್ನು ಸಾಧಿಸುವ ಮೂಲಕ ಸ್ಪರ್ಧೆಯಲ್ಲಿ ಭಾರತದ ಪ್ರತಿಭೆಯ ಆಳದ ನೋಟವನ್ನು ಒದಗಿಸಿದರು. ನೈರೋಬಿಯಲ್ಲಿ ನಡೆದ ಯು20 ವಿಶ್ವ ಚಾಂಪಿಯನ್‌ಶಿಪ್‌ನ 2018ರ ಆವೃತ್ತಿಯಲ್ಲಿ ಹಿಮಾ ದಾಸ್ ಮಹಿಳೆಯರ 400 ಮೀ. ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಅಬ್ದುಲ್ ರಝಾಕ್ ರಶೀದ್ ಮುಂದಾಳತ್ವ ಒದಗಿಸುವುದರೊಂದಿಗೆ ಭಾರತೀಯ ಚತುಷ್ಕರ ತಂಡವು 3:23:36ಕ್ಕೆ ಸ್ಪರ್ಧೆ ಮುಗಿಸಿತು. ಪ್ರಿಯಾ ಮತ್ತು ಸುಮ್ಮಿ ತಮ್ಮ ಮಹಿಳೆಯರ 4೦೦ ಮೀ ಅನ್ನು ಸ್ವಲ್ಪ ಸಮಯದ ನಂತರ ಮುಗಿಸಿದರು. 46.42 ಸೆಕೆಂಡುಗಳಲ್ಲಿ ಓಡುವ ಮೂಲಕ ಭರತ್ ಮತ್ತು ಕಪಿಲ್ ಅವರ ಪ್ರಯತ್ನಗಳು ವ್ಯರ್ಥವಾಗದಂತೆ ನೋಡಿಕೊಂಡರು.
ಫೆಡರೇಷನ್ ಕಪ್ ಜೂನಿಯರ್ ಚಾಂಪಿಯನ್‌ಶಿಪ್ ವಿಜೇತರಾದ ಭರತ್ ಅವರು ಲೀಡ್-ಆಫ್ ಲೆಗ್‌ಗಾಗಿ 47.12ರ ಸಮಯವನ್ನು ಪಡೆದ ಕೀರ್ತಿಗೆ ಪಾತ್ರರಾದರು ಮತ್ತು ದಕ್ಷಿಣ ಆಫ್ರಿಕಾದ ಹಿಂದೆ ಎರಡನೇ ಸ್ಥಾನದಲ್ಲಿ ಪ್ರಿಯಾಗೆ ರಿಲೇ ದಂಡವನ್ನು ಹಸ್ತಾಂತರಿಸಿದರು. ಪ್ರಿಯಾ ತಮ್ಮೆಲ್ಲಾ ಶಕ್ತಿಯನ್ನು ಬಳಸಿ 52.77 ಸಮಯದೊಂದಿಗೆ, ಎರಡನೇ ಹಂತವನ್ನು ಓಡಿದವರಲ್ಲಿ ಮೂರನೇ ಅತ್ಯುತ್ತಮ ವ್ಯಕ್ತಿಯಾಗಿ ಸಾಧನೆ ಮಾಡಿದರು. ಸುಮ್ಮಿ 54.29 ಸಮಯದಲ್ಲಿ ಓಡುವ ಮೂಲಕ ಭಾರತದ ಪದಕ ಬೇಟೆಯನ್ನು ಜೀವಂತವಾಗಿರಿಸಿದರು.
ಕಪಿಲ್ ಅವರು ಕಠಿಣ ಪ್ರಯತ್ನ ಮಾಡಿದರು, ಆದರೆ ಫೈನಲ್‌ನಲ್ಲಿ ಅತ್ಯಂತ ವೇಗದ ಓಟಗಾರರಾಗಿದ್ದರೂ ಪೋಲೆಂಡ್ ಮತ್ತು ನೈಜೀರಿಯಾದೊಂದಿಗಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ತಮ್ಮ ಮೂವರು ತಂಡದ ಸಹ ಆಟಗಾರರ ಪ್ರಯತ್ನದಿಂದ ಪ್ರೇರಿತರಾಗಿ 46.42 ಸೆಕೆಂಡುಗಳಲ್ಲಿ ತಮ್ಮ ಓಟವನ್ನು ಮುಗಿಸಿದ ಕೀರ್ತಿಗೆ ಅವರು ಪಾತ್ರರಾದರು.
***
(Release ID: 1748918)
Visitor Counter : 384
Read this release in:
English
,
Tamil
,
Odia
,
Urdu
,
Marathi
,
Hindi
,
Bengali
,
Punjabi
,
Gujarati
,
Telugu
,
Malayalam