ಪ್ರಧಾನ ಮಂತ್ರಿಯವರ ಕಛೇರಿ

ನಾಲ್ಕು ಭಾರತೀಯ ತಾಣಗಳು ʻರಾಮ್‌ಸರ್ʼ ಮಾನ್ಯತೆ ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ: ಪ್ರಧಾನಿ

प्रविष्टि तिथि: 14 AUG 2021 6:54PM by PIB Bengaluru

ನಾಲ್ಕು ಭಾರತೀಯ ತಾಣಗಳು ರಾಮ್‌ಸರ್‌ ಮಾನ್ಯತೆ ಪಡೆದಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಪರಿಸರ ಖಾತೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರ ಸರಣಿ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿಯವರು, "ನಾಲ್ಕು ಭಾರತೀಯ ತಾಣಗಳು ʻರಾಮ್‌ಸರ್‌ʼ ಮಾನ್ಯತೆ ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವ, ಸಸ್ಯ ಮತ್ತು ಪ್ರಾಣಿ ಸಂಕುಲದ ರಕ್ಷಣೆಯಲ್ಲಿ ತೊಡಗುವ ಮತ್ತು ಹಸಿರು ಭೂಮಿಯನ್ನು ನಿರ್ಮಿಸುವ ಭಾರತದ ಶತಮಾನಗಳ ಹಳೆಯ ತತ್ವವನ್ನು ಇದು ಮತ್ತೊಮ್ಮೆ ಸಾಕಾರಗೊಳಿಸಿದೆ," ಎಂದಿದ್ದಾರೆ.

***


(रिलीज़ आईडी: 1746644) आगंतुक पटल : 231
इस विज्ञप्ति को इन भाषाओं में पढ़ें: Urdu , English , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam