ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಜನರ ಪಾಲ್ಗೊಳ್ಳುವಿಕೆಯ ಉತ್ಸಾಹದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ


ಡಿಡಿ ಮತ್ತು ಆಕಾಶವಾಣಿಯ ಜಾಲಗಳಲ್ಲಿ ಸ್ವಾತಂತ್ರ್ಯ ದಿನದ ವಿಶೇಷ ಪೂರ್ಣದಿನದ ಪ್ರಸಾರ

“ಸ್ವಾತಂತ್ರ್ಯದ ಪಯಣ, ಆಕಾಶವಾಣಿಯ ಜೊತೆಗೆ” ಕಾರ್ಯಕ್ರಮ ಎ.ಐ.ಐರ್-ಆಲ್‌ ಇಂಡಿಯಾ ರೇಡಿಯೋದಲ್ಲಿ ಆಗಸ್ಟ್ 16ರಿಂದ ಪ್ರಸಾರ

ಡಿಡಿ ನ್ಯೂಸ್ ನಲ್ಲಿ ವಲಯವಾರು ವಿಶೇಷ ಕಾರ್ಯಕ್ರಮ 

ಭಾರತದ ದೇಶಪ್ರೇಮದ ಚಿತ್ರಗಳನ್ನು ಪ್ರದರ್ಶಿಸುವ ಮೂರು ದಿನಗಳ ಚಲನಚಿತ್ರೋತ್ಸವ

Posted On: 13 AUG 2021 3:00PM by PIB Bengaluru

ಭಾರತೀಯ ಸ್ವಾತಂತ್ರ್ಯದ 75 ವರ್ಷಗಳ ಅಂಗವಾಗಿ ಸ್ವಾತಂತ್ರ್ಯದ  ಅಮೃತ ಮಹೋತ್ಸವದಲ್ಲಿ ವ್ಯಾಪಕ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿಯನ್ನು ಖಾತ್ರಿಪಡಿಸಲು, ವಾರ್ತಾ ಮತ್ತು ಪ್ರಸಾರ ಸಚಿವಾಲಯ "ಜನರ ಪಾಲ್ಗೊಳ್ಳುವಿಕೆ ಮತ್ತು ಜನಾಂದೋಲನ" ಒಟ್ಟಾರೆ ಸ್ಫೂರ್ತಿಯ ಅಡಿಯಲ್ಲಿ ಮಹೋತ್ಸವವನ್ನು ಆಚರಿಸಲು ಹಲವಾರು ನಾವಿನ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿದೆ. ನವ ಭಾರತದತ್ತ ಪಯಣದಲ್ಲಿ ತ್ಯಾಗ ಮತ್ತು ದೇಶಭಕ್ತಿಯ ಮನೋಭಾವವನ್ನು ಸ್ಮರಿಸುವಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವುದು ಇದರ ಉದ್ದೇಶವಾಗಿದೆ. ವಿವಿಧ ವಿಧಾನಗಳು ಮತ್ತು ಮಾಧ್ಯಮಗಳ ಮೂಲಕ ಮಾಧ್ಯಮ ಘಟಕಗಳು ದೇಶಾದ್ಯಂತ ಕ್ರಿಯಾತ್ಮಕ ಕಾರ್ಯಕ್ರಮಗಳ ಸರಣಿಯನ್ನು ರೂಪಿಸಿವೆ.

ಸ್ವಾತಂತ್ರ್ಯ ಹೋರಾಟದ 'ಎಲೆಮರೆಯ ಕಾಯಿಯಂತಹ ವೀರರು'ಗಳು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ನೀಡಿದ ಕೊಡುಗೆಯನ್ನು ಸ್ಮರಿಸುವುದು ಕ್ರಿಯಾತ್ಮಕ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಆಕಾಶವಾಣಿ 2021 ಆಗಸ್ಟ್ 16 ರಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಾಹಿನಿಗಳಲ್ಲಿ "ಸ್ವಾತಂತ್ರ್ಯದ ಪಯಣ ಆಕಾಶವಾಣಿಯ ಜೊತೆಗೆ" ಎಂಬ ವಿಶಿಷ್ಟ ನಾವಿನ್ಯಪೂರ್ಣ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಪ್ರಸಿದ್ಧ ಸ್ವಾತಂತ್ರ್ಯ ಸೇನಾನಿಗಳ ಆಧರಿತ ಐದು ನಿಮಿಷಗಳ ದೈನಿಕ ಶಬ್ದಚಿತ್ರಗಳು ಮತ್ತು ದಿನದ ಪ್ರಮುಖ ಐತಿಹಾಸಿಕ ಮತ್ತು ರಾಜಕೀಯ ಘಟನೆಗಳ ವಿವರಣೆಯನ್ನು ಬೆಳಗ್ಗೆ 8:2 (ಹಿಂದಿ) ಮತ್ತು ಬೆಳಗ್ಗೆ 8:5 ಕ್ಕೆ (ಇಂಗ್ಲಿಷ್) ಪ್ರಸಾರ ಮಾಡಲಾಗುತ್ತದೆ. ಜನರ ಪಾಲ್ಗೊಳ್ಳುವಿಕೆಯ ಸ್ಫೂರ್ತಿಯನ್ನು ಮುಂದೆ ತೆಗೆದುಕೊಂಡು ಹೋಗಲು, ಆಕಾಶವಾಣಿ "ರಾಷ್ಟ್ರೀಯ ಮತ್ತು ಪ್ರಾದೇಶಿಕ  ವಾಹಿನಿಗಳಲ್ಲಿ ಅಮೃತ ಮಹೋತ್ಸವ ವಿಷಯಾಧಾರಿತ ರಸಪ್ರಶ್ನೆಯನ್ನು 2021 ಆಗಸ್ಟ್ 16ರಿಂದ (ಹಿಂದಿ: ಬೆಳಗ್ಗೆ 8 ರಿಂದ 8:30 ಮತ್ತು ಇಂಗ್ಲಿಷ್: ಬೆಳಗ್ಗೆ 8:30 ರಿಂದ 9 ರವರೆಗೆ) ಆಯೋಜಿಸುತ್ತಿದೆ.

ಡಿಡಿ ಜಾಲದಲ್ಲಿ 2021 ಆಗಸ್ಟ್ 16ರಿಂದ ಪ್ರಾರಂಭವಾಗುವ ದಿನದ ಪ್ರಮುಖ ಐತಿಹಾಸಿಕ ಮತ್ತು ರಾಜಕೀಯ ಘಟನೆಗಳ ವಿವರಣೆಯನ್ನು ನೀಡುವ ಐದು ನಿಮಿಷಗಳ ದೈನಿಕ ಸುದ್ದಿಚಿತ್ರವನ್ನು ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಡಿಡಿ ನ್ಯೂಸ್ ಪ್ರತಿದಿನ ಬೆಳಗ್ಗೆ 8:55ಕ್ಕೆ ಮತ್ತು ಡಿಡಿ ಇಂಡಿಯಾ ಬೆಳಗ್ಗೆ 8:3೦ಕ್ಕೆ ಪ್ರಸಾರ ಮಾಡುತ್ತದೆ. ದೂರದರ್ಶನವು ದೇಶಭಕ್ತಿ ಮತ್ತು ತ್ಯಾಗದ ಮನೋಭಾವವನ್ನು ಎತ್ತಿ ತೋರಿಸುವ ಚಲನಚಿತ್ರಗಳ ಗುಚ್ಛವನ್ನೇ ಮಾಡಿದೆ. ʼಹಿಂದೂಸ್ತಾನ್ ಕಿ ಕಸಮ್ʼ ಮತ್ತು ತಿರಂಗಾದಂತಹ ಚಲನಚಿತ್ರಗಳನ್ನು 2021 ಆಗಸ್ಟ್ 15ರಂದು ಪ್ರದರ್ಶಿಸಲಾಗುವುದು. ನವೋದ್ಯಮಗಳು, ರಕ್ಷಣೆ, ಬಾಹ್ಯಾಕಾಶ ಮತ್ತು ಹೆಗ್ಗುರುತಿನ ಶಾಸನಗಳಂತಹ ವಿಷಯಗಳ ಮೇಲೆ ವಿಶೇಷ ವಲಯವಾರು ಕಾರ್ಯಕ್ರಮಗಳ ಸರಣಿಯ ಪ್ರಸಾರವನ್ನೂ ಪ್ರಾರಂಭಿಸಲಿದೆ. ದೂರದರ್ಶನ ವಾಹಿನಿ  ಸ್ವಾತಂತ್ರ್ಯ ದಿನದಂದು ವಿಶೇಷ ಪ್ರಸಾರವನ್ನು ದಿನವಿಡೀ ಮಾಡಲಿದೆ, ಇದರಲ್ಲಿ ಕೆಂಪು ಕೋಟೆಯಿಂದ ನೇರ ಪ್ರಸಾರವೂ ಸೇರಿದಂತೆ, ಪ್ರಮುಖ ಸಂದರ್ಭವನ್ನು ಗುರುತಿಸುವ ವಿಶೇಷ ಪ್ರದರ್ಶನಗಳು ಸೇರಿವೆ.

ಎನ್.ಎಫ್.ಡಿ.ಸಿ. ತನ್ನ ಒಟಿಟಿ ವೇದಿಕೆಯಲ್ಲಿ ಗಾಂಧಿ, ಮೇಕಿಂಗ್ ಆಫ್ ಮಹಾತ್ಮಾ, ಘರೆ ಬೈರೆ, ನಂತಹ ಅಪ್ರತಿಮ ಚಲನಚಿತ್ರಗಳನ್ನು 2021 ಆಗಸ್ಟ್ 15 ರಿಂದ 17ರವರೆಗೆ www.cinemasofindia.comನಲ್ಲಿ ಪ್ರಸಾರ ಮಾಡಲಿದೆ. ಇದೇ ಅವಧಿಯಲ್ಲಿ, ಚಲನಚಿತ್ರ ವಿಭಾಗವು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂರು ದಿನಗಳ ಚಲನಚಿತ್ರೋತ್ಸವದ ಮೂಲಕ ಸಂಭ್ರಮವನ್ನು ಸ್ಮರಿಸುತ್ತದೆ. ವ್ಯಾಪಕ ಪ್ರೇಕ್ಷಕರನ್ನು ತಲುಪಲು ದೇಶಾದ್ಯಂತದ ಸಂಸ್ಥೆಗಳೊಂದಿಗೆ ಸಮನ್ವಯದೊಂದಿಗೆ ಚಲನಚಿತ್ರೋತ್ಸವಗಳನ್ನು ಆಯೋಜಿಸಲಾಗುತ್ತಿದೆ.

ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಅಂಶಗಳ ಬಗ್ಗೆ ಮಾಹಿತಿಯುಕ್ತ ಎವಿ ವಸ್ತುವಿಷಯದ ಮೂಲಕ ಜನರನ್ನು ತಲುಪಲಿವೆ. ಯುವಕರು ಮತ್ತು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ, ಇದು ತನ್ನ ವೇದಿಕೆಗಳಲ್ಲಿ ಪ್ರಸಾರ ಮಾಡಲು, ವಿವಿಧ ವಿಷಯಗಳ ಮೇಲೆ ಇಂಟರ್ನೆಟ್ ಬಳಕೆದಾರರಿಂದ ವೀಡಿಯೊಗಳನ್ನು ಆಹ್ವಾನಿಸುತ್ತಿದೆ.

***



(Release ID: 1745470) Visitor Counter : 409