ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಭಾರತದ ಒಲಿಂಪಿಕ್ಸ್ ಪದಕ ವಿಜೇತರಿಗೆ ಭವ್ಯ ಸ್ವಾಗತ: ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರಿಂದ ಸನ್ಮಾನ


ಟೋಕಿಯೊ 2020 ಭಾರತದ ಹಲವು ಪ್ರಥಮಗಳನ್ನು ದಾಖಲಿಸಿದ  ಒಲಿಂಪಿಕ್ಸ್: ಶ್ರೀ ಅನುರಾಗ್ ಠಾಕೂರ್

ಭಾರತ ತಂಡದ ಯಶಸ್ಸು ಹೇಗೆ ನವ ಭಾರತ ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಿದೆ ಎಂಬುದರ ಪ್ರತಿಬಿಂಬವಾಗಿದೆ: ಶ್ರೀ ಅನುರಾಗ್ ಠಾಕೂರ್

Posted On: 09 AUG 2021 8:24PM by PIB Bengaluru

ರಾಷ್ಟ್ರೀಯ ರಾಜಧಾನಿ ಇಂದು ಸಂಜೆ ಮಾಮೂಲಿಯಾಗಿರಲಿಲ್ಲ, ಟೋಕಿಯೊದಲ್ಲಿ ತಮ್ಮ ವಿರೋಚಿತ ಹೋರಾಟದ ನಂತರ ಒಲಿಂಪಿಕ್ಸ್ ತಾರೆಗಳ ಆಗಮನದಿಂದ ರಂಗೇರಿತ್ತು.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಒಲಿಂಪಿಕ್ಸ್ ನಲ್ಲಿ 7 ಪದಕಗಳನ್ನು ಗೆದ್ದ ನೀರಜ್ ಚೋಪ್ರಾ, ರವಿಕುಮಾರ್ ದಹಿಯಾ, ಮೀರಾಬಾಯಿ ಚಾನು, ಪಿ.ವಿ. ಸಿಂಧು, ಭಜರಂಗ್ ಪುನಿಯಾ, ಲವ್ಲಿನಾ ಬಾರ್ಗೋಹೈನ್ ಮತ್ತು ಪುರುಷರ ಹಾಕಿ ತಂಡವನ್ನು ನವದೆಹಲಿಯ ಅಶೋಕ ಹೊಟೇಲ್ ನಲ್ಲಿಂದು ನಡೆದ ಬೃಹತ್ ಸನ್ಮಾನ ಕಾರ್ಯಕ್ರಮದಲ್ಲಿ ಗೌರವಿಸಿದರು. ಸನ್ಮಾನ ಸಮಾರಂಭದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಯುವಜನ ವ್ಯವಹಾರ ಮತ್ತು ಕ್ರೀಡಾ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಮಾಣಿಕ್, ಕ್ರೀಡಾ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್ ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಾದ ಶ್ರೀ ಸಂದೀಪ್ ಪ್ರಧಾನ್ ಅವರು ಭಾಗವಹಿಸಿದ್ದರು.

ಚಿನ್ನದ ಪದಕ ವಿಜೇತ ನೀರಜ್, ಬೆಳ್ಳಿ ಪದಕ ವಿಜೇತರಾದ ರವಿ, ಕಂಚಿನ ಪದಕ ವಿಜೇತರಾದ ಭಜರಂಗ್, ಲವ್ಲಿನಾ ಮತ್ತು ಮನ್ ಪ್ರೀತ್ ಅವರುಗಳು ಕಳೆದ ರಾತ್ರಿ ಟೋಕಿಯೊ 2020 ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸುದೀರ್ಘ ವಿಮಾನ ಪ್ರಯಾಣದ ಮೂಲಕ ವಾಪಸ್ಸಾದರು. ಅವರು ಇತರೆ ಪದಕ ವಿಜೇತರಾದ ಮೀರಾಬಾಯಿ ಮತ್ತು ಸಿಂಧು ಅವರ ಜೊತೆ ಅದ್ಧೂರಿ ಸನ್ಮಾನ ಕಾರ್ಯಕ್ರಮದಲ್ಲಿ ಸೇರ್ಪಡೆಯಾದರು.

ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, “ಟೋಕಿಯೊ 2020 ಭಾರತದ ಹಲವು ಪ್ರಥಮಗಳನ್ನು ದಾಖಲಿಸಿದ ಒಲಿಂಪಿಕ್ ಕ್ರೀಡಾಕೂಟವಾಗಿದೆ. ಒಲಿಂಪಿಕ್ಸ್ ನಲ್ಲಿ ಭಾರತ ತಂಡದ ಯಶಸ್ಸು ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲಿ  ಇಡೀ ವಿಶ್ವದಲ್ಲಿ ಪ್ರಾಬಲ್ಯ ಸಾಧಿಸುವ ಬಯಕೆ ಮತ್ತು ಆಕಾಂಕ್ಷೆಯನ್ನು ಹೊಂದಿರುವ ನವ ಭಾರತದ ಪ್ರತಿಬಿಂಬವಾಗಿದೆ. ಒಲಿಂಪಿಕ್ಸ್ ನಮಗೆ ಸ್ವಯಂ ಶಿಸ್ತು ಮತ್ತು ಸಮರ್ಪಣೆಯೊಂದಿಗೆ ನಾವು ಚಾಂಪಿಯನ್ ಆಗಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಭಾರತ ತಂಡ ಶ್ರೇಷ್ಠ ಸಾಧನೆ ನೀಡಿದೆ ಮತ್ತು ಎಲ್ಲರಿಗೂ ಸ್ಫೂರ್ತಿತುಂಬಿದೆ. ಎಲ್ಲ ಭಾರತೀಯರು ಅತ್ಯುತ್ಸಾಹದಿಂದ ಎಲ್ಲೆಡೆ ಸಂಭ್ರಮಿಸಿದ್ದಾರೆ. ನಮ್ಮ ಅಥ್ಲೀಟ್ ಗಳು ಗ್ರಾಮಗಳು ಅಥವಾ ನಗರಗಳು, ಉತ್ತರದಿಂದ ದಕ್ಷಿಣ ಮತ್ತು ಪೂರ್ವಪಶ್ಚಿಮ ಎಲ್ಲಿಂದ ಬಂದಿದ್ದರೂ ಅವರೆಲ್ಲಾ ಒಂದೇ, ನಿಜವಾಗಿಯೂ ಕ್ರೀಡೆ ಎಲ್ಲರನ್ನು ಒಗ್ಗೂಡಿಸುವಂತಹದು. ಅವರ ಪಯಣವು ಸ್ಥಿತ್ಯಂತರ ಮತ್ತು ಕ್ರೀಡಾ ಶ್ರೇಷ್ಠತೆಯ ಅದ್ಬುತ ಕತೆಯಾಗಿದೆಎಂದರು.

ಅಲ್ಲದೆ ಕ್ರೀಡಾ ಸಚಿವರು, ಹಲವು ಪ್ರಥಮಗಳನ್ನು ಒಲಿಂಪಿಕ್ಸ್ ನಲ್ಲಿ ದಾಖಲಿಸಲಾಗಿದೆ. ಅವುಗಳೆಂದರೆ 128 ಸದಸ್ಯರ ಭಾರತೀಯ ತಂಡ, ಏಳು ಒಲಿಂಪಿಕ್ ಪದಕಗಳು, ಅಥ್ಲಿಟಿಕ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ, ಪಿ.ವಿ. ಸಿಂಧು ಸತತ ಎರಡು ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ಗಳಿಸಿದ್ದು ಮತ್ತು 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡ ಪದಕ(ಕಂಚು) ಗೆದ್ದಿದ್ದು ಹಾಗೂ ಮಹಿಳೆಯರ ಹಾಕಿ ತಂಡ ಸೆಮಿಫೈನಲ್ ತಲುಪುವ ಮೂಲಕ ಇತಿಹಾಸ ರೂಪಿಸಿದ್ದು. ಅಂತೆಯೇ ನೇತ್ರ ಕುಮಾನನ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಮೊದಲ ಸೈಲರ್ ಎನಿಸಿದ್ದು, ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದ ಭಾರತದ ಮೊದಲ ಫೆನ್ಸರ್ ಭವಾನಿದೇವಿ, ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಭಾರತದ ಫೌದಾ ಮಿರ್ಜಾ ಅವರಿಂದ ಉತ್ತಮ ಸಾಧನೆ, ಭಾರತೀಯ ರೋವರ್ಸ್ ಗಳಿಂದ ಉತ್ತಮ ಆಟ ಪ್ರದರ್ಶನ, ಗಾಲ್ಫ್ ನಲ್ಲಿ ಭಾರತದ ಅದಿತಿ ಅವರು ಗರಿಷ್ಠ ಸ್ಥಾನಗಳಿಸಿದ್ದು, ಸ್ಟೀಪಲ್ ಚೇಸ್ ನಲ್ಲಿ ಭಾರತದ ಅವಿನಾಶ್ ಸಬ್ಲೆ ಅವರಿಂದ ರಾಷ್ಟ್ರೀಯ ದಾಖಲೆ ನಿರ್ಮಾಣವಾಯಿತು ಮತ್ತು ಭಾರತದಲ್ಲಿನ ಕ್ರೀಡಾ ಫೌಂಡೇಷನ್ ಗಳು ಅತ್ಯಂತ ದೃಢವಾಗಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಟಿಒಪಿಎಸ್ ಮತ್ತು ಖೇಲೋ ಇಂಡಿಯಾದಂತಹ ಹಲವು ಯೋಜನೆಗಳ ಫಲಿತಾಂಶ ಪ್ರದರ್ಶನಗೊಂಡಿದೆ. ನಾವು ನಮ್ಮ ಕ್ರೀಡಾ ವ್ಯಕ್ತಿಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಮತ್ತು ಭಾರತದ ಕ್ರೀಡೆಯ ಶಕ್ತಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಸಚಿವರು ಪುನರುಚ್ಚರಿಸಿದರು

ಶ್ರೀ ಕಿರಣ್ ರಿಜಿಜು ಅವರು ಎಲ್ಲ ಅಥ್ಲೀಟ್ ಗಳ ಸಾಧನೆಯನ್ನು ಶ್ಲಾಘಿಸಿದರು ಮತ್ತು 2028 ಒಲಿಂಪಿಕ್ಸ್ ವೇಳೆಗೆ ಭಾರತ ಒಂದು ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು  ಪುನರುಚ್ಚರಿಸಿದರು. “ನಮ್ಮ ಚಾಂಪಿಯನ್ ಅಥ್ಲೀಟ್ ಗಳೊಂದಿಗೆ ಇಂದು ಇಲ್ಲಿ ಸ್ಥಳ ಹಂಚಿಕೊಳ್ಳುತ್ತಿರುವುದರಿಂದ ನನಗೆ ಥ್ರಿಲ್ ಆಗಿದೆ. ಪದಗಳೇ ಹೊರಡುತ್ತಿಲ್ಲ, ಒಲಿಂಪಿಕ್ಸ್ ನಲ್ಲಿ ಭಾರತ ಹಿಂದೆಂದಿಗಿಂತಲೂ ಅತ್ಯುತ್ತಮ ಸಾಧನೆ ಮಾಡುವುದರೊಂದಿಗೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. 41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದಿದ್ದೇವೆ ಮತ್ತು ಅಥ್ಲೆಟಿಕ್ಸ್ ನಲ್ಲಿ ಮೊದಲ ಚಿನ್ನದ ಪದಕ ಪಡೆದಿರುವುದಕ್ಕೆ ನಾವು ಹೆಮ್ಮೆಪಡಬೇಕು. ಇದು ನಮ್ಮ  ಕೇವಲ ಪದಕ ವಿಜೇತರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಅಥ್ಲೀಟ್ ಗಳು ಟೋಕಿಯೋದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ಕೇವಲ ಆರಂಭವಷ್ಟೆ. ಏಕೆಂದರೆ ಭಾರತದ ಕ್ರೀಡೆಯ ಪುನರುಜ್ಜೀವನ ಈಗಷ್ಟೇ ಸ್ಪಷ್ಟವಾಗಿ ಗೋಚರಿಸುತ್ತಿದೆ ಮತ್ತು 2028 ಒಲಿಂಪಿಕ್ಸ್ ವೇಳೆಗೆ ಭಾರತ ಒಂದು ಶಕ್ತಿಯಾಗಲಿದೆಎಂದು ಶ್ರೀ ರಿಜಿಜು ಹೇಳಿದರು

ಶ್ರೀ ನಿಶಿತ್ ಪ್ರಮಾಣಿಕ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್ ಗಳ ಸಾಧನೆಯನ್ನು ಶ್ಲಾಘಿಸಿದರು ಮತ್ತು ನೀವು ಭಾರತಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಹೇಳಿದರು. ಎಲ್ಲ ಪದಕ ವಿಜೇತರನ್ನು ಅಭಿನಂದಿಸಿದ ಶ್ರೀ ಪ್ರಮಾಣಿಕ್, ಭಾರತೀಯ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಏಳು ಪದಕಗಳನ್ನು ಗೆದ್ದಿದೆ. ಇದು ಒಲಿಂಪಿಕ್ಸ್ ನಲ್ಲಿ ಈವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಇದು ಐತಿಹಾಸಿಕ ಮತ್ತು ಸ್ಮರಣಾರ್ಹ ಕಾರ್ಯಕ್ರಮವಾಗಿದ್ದು, ಮೂಲಕ ಮುಂದಿನ ಪೀಳಿಗೆಗೆ ಸ್ಪರ್ಧಾತ್ಮಕ ಕ್ರೀಡೆಗಳನ್ನು ಕೈಗೊಳ್ಳಲು ಮತ್ತು ಭಾರತಕ್ಕೆ ಹೆಮ್ಮೆತರಲು ಸ್ಫೂರ್ತಿ ಸೆಲೆಯಾಗಲಿದೆ ಎಂದರು.

ಹಲವು ಪ್ರಥಮಗಳು ಮತ್ತು ಟೋಕಿಯೊ 2020ಯಲ್ಲಿ ಹಲವು ಪ್ರಮುಖಾಂಶಗಳು ಭಾರತದ ಪಾಲಿಗೆ ಗಟಿಸಿದವು. ನೀರಜ್ ಚೋಪ್ರಾ, ಪುರುಷರ ಜಾವೆಲಿಂಗ್ ಥ್ರೋ ಫೈನಲ್ ನಲ್ಲಿ 87.58 ಮೀಟರ್ ದೂರ ಭರ್ಜಿಯನ್ನು ಎಸೆದು, ಅಥ್ಲೀಟ್ ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಒಲಿಂಪಿಕ್ಸ್ ನಲ್ಲಿ ಅಥ್ಲೀಟ್ ವಿಭಾಗದಲ್ಲಿ ಸ್ವತಂತ್ರ ಭಾರತ ಗಳಿಸಿದ ಮೊದಲ ಚಿನ್ನದ ಪದಕ ಇದಾಗಿದೆ ಮತ್ತು ಭಾರತೀಯ ಅಥ್ಲೀಟ್ ಗಳು ಗಳಿಸಿರುವ ಮೊದಲ ಪದಕವೂ ಇದಾಗಿದೆಪಿ.ವಿ. ಸಿಂಧು ಸತತ ಎರಡು ಒಲಿಂಪಿಕ್ಸ್ ನಲ್ಲಿರಿಯೊ 2016ನಲ್ಲಿ ಬೆಳ್ಳಿ ಮತ್ತು ಟೋಕಿಯೊ 2020ಯಲ್ಲಿ ಕಂಚು ಗೆದ್ದ ಏಕೈಕ ಭಾರತದ ಮಹಿಳಾ ಕ್ರೀಡಾಪಟುವಾಗಿದ್ದಾರೆ. ಮೀರಾಬಾಯಿ ಚಾನು ದೇಶಕ್ಕೆ ವೇಯ್ಟ್ ಲಿಫ್ಟಿಂಗ್ ನಲ್ಲಿ ಎರಡನೇ ಪದಕ ತಂದುಕೊಟ್ಟ ಮಹಿಳೆಯಾಗಿದ್ದಾರೆ. ಮೊದಲು ಕರ್ಣಮ್ ಮಲ್ಲೇಶ್ವರಿ ಪದಕ ಗೆದ್ದು, ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೊದಲ ವೇಯ್ಟ್ ಲಿಫ್ಟರ್ ಆಗಿದ್ದರು.

ಭಾರತೀಯ ಪುರುಷರ ಹಾಕಿ ತಂಡ 1980 ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಂತರ ಈವರೆಗೆ ಯಾವುದೇ ಪದಕ ಗೆದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಕಂಚಿನ ಪದಕ ಗೆದ್ದಿದೆ. ಜೊತೆಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದಿಂದ ದಾಖಲೆಯ 128 ಅಥ್ಲೀಟ್ ಗಳು ಪ್ರತಿನಿಧಿಸಿದ್ದರು ಮತ್ತು 7 ಪದಕಗಳನ್ನು ಗೆಲ್ಲುವ ಮೂಲಕ ಇತರೆ ಒಲಿಂಪಿಕ್ಸ್ ಗಿಂತ ಹೆಚ್ಚು ಪದಕಗಳನ್ನು ಪಡೆದಂತಾಗಿದೆ.

ರವಿ ದಹಿಯಾ ದೇಶಕ್ಕೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ತಂದುಕೊಟ್ಟ ಎರಡನೇ ಕುಸ್ತಿಪಟುವಾಗಿದ್ದಾರೆ. ಅಂತೆಯೇ ಲೊಲ್ವಿನಾ ಬರ್ ಗೋಹೈನ್, ಶ್ರೇಷ್ಠ ಮೇರಿಕೋಮ್ ನಂತರ ಒಲಿಂಪಿಕ್ಸ್ ನಲ್ಲಿ ಎರಡನೇ ಕಂಚಿನ ಪದಕ ತಂದುಕೊಟ್ಟ ಮಹಿಳಾ ಆಟಗಾರ್ತಿಯಾಗಿದ್ದಾರೆ ಮತ್ತು ಒಟ್ಟಾರೆ ಒಲಿಂಪಿಕ್ಸ್ ಪದಕ ಪಡೆದವರಲ್ಲಿ ಮೂರನೇ ಭಾರತೀಯ ಬಾಕ್ಸರ್ ಆಗಿದ್ದಾರೆ. ಕ್ರೀಡಾಕೂಟದ ಇತರೆ ಪ್ರಮುಖಾಂಶಗಳೆಂದರೆ ಭವಾನಿದೇವಿ, ನೇತ್ರಾ ಕುಮಾನನ್ ಮತ್ತು ಅದಿತಿ ಅಶೋಕ್ ಅವರುಗಳು. ಕತ್ತಿವರಸೆ ಕ್ರೀಡೆ ಪರಿಚಯಿಸಿದ ನಂತರ ಮೊದಲ ಬಾರಿಗೆ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಭವಾನಿದೇವಿ ಆಗಿದ್ದಾರೆ. ಅಂತೆಯೇ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಲಾ ಸೈಲರ್ ನೇತ್ರಾ ಅವರಾಗಿದ್ದಾರೆ. ಮಧ್ಯೆ ಅದಿತಿ ಅಶೋಕ್ ಗಾಲ್ಫ್ ನಲ್ಲಿ ನಾಲ್ಕನೇ ಸ್ಥಾನಗಳಿಸಿದ್ದಾರೆ ಮತ್ತು ಒಲಿಂಪಿಕ್ಸ್ ಕ್ರೀಡೆಯಲ್ಲಿ ಯಾವುದೇ ಭಾರತೀಯರು ಗಳಿಸಿದ ಅತ್ಯುನ್ನತ ಸ್ಥಾನ ಇದಾಗಿದೆ

***



(Release ID: 1744328) Visitor Counter : 299