ಪ್ರಧಾನ ಮಂತ್ರಿಯವರ ಕಛೇರಿ

ಟೋಕಿಯೊ ಒಲಿಂಪಿಕ್ಸ್ 2020ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ ಪ್ರಧಾನಿ

Posted On: 07 AUG 2021 6:00PM by PIB Bengaluru

ʻಟೋಕಿಯೊ ಒಲಿಂಪಿಕ್ಸ್ 2020ʼನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ನೀರಜ್ ಅವರು ಅದಮ್ಯ ಉತ್ಸಾಹದಿಂದ ಆಡಿದ್ದಾರೆ ಮತ್ತು ಅಪ್ರತಿಮ ದಿಟ್ಟತನ ತೋರಿದ್ದಾರೆ ಎಂದೂ ಮೋದಿ ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು,

"ಟೋಕಿಯೊದಲ್ಲಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ! ನೀರಜ್ ಚೋಪ್ರಾ @Neeraj_chopra1 ಅವರ ಇಂದಿನ ಸಾಧನೆ ಇನ್ನು ಎಂದೆಂದಿಗೂ ನೆನಪಿನಲ್ಲಿ ಚಿರಸ್ಥಾಯಿಗಲಿದೆ. ಯುವ ನೀರಜ್ ಅವರದ್ದು ಅಸಾಧಾರಣ ಪ್ರದರ್ಶನ. ಅವರು ಅದಮ್ಯ ಉತ್ಸಾಹದಿಂದ ಆಡಿದರು ಮತ್ತು ಅಪ್ರತಿಮ ದಿಟ್ಟತನ ತೋರಿಸಿದರು. ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. #ಟೋಕಿಯೋ 2020," ಎಂದಿದ್ದಾರೆ.

 

***
 (Release ID: 1743645) Visitor Counter : 192