ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ  ಹಾಕಿ ತಂಡಕ್ಕೆ ಕಂಚು


ಒಲಿಂಪಿಕ್ಸ್ ನಲ್ಲಿ 41 ವರ್ಷಗಳ ನಂತರ ಭಾರತದ ಪುರುಷರ ಹಾಕಿ ತಂಡಕ್ಕೆ ಪದಕ

Posted On: 05 AUG 2021 2:05PM by PIB Bengaluru

ಪ್ರಮುಖ ಅಂಶಗಳು

  • ಆಸಕ್ತಿದಾಯಕ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ತಂಡವನ್ನು 5-4 ಗೋಲುಗಳ ಅಂತರದಲ್ಲಿ ಪರಾಭಗೊಳಿಸಿದ ಭಾರತ 
  • ಉತ್ತಮ ಪ್ರದರ್ಶನಕ್ಕಾಗಿ ಭಾರತದ ಹಾಕಿ ತಂಡವನ್ನು ಅಭಿನಂದಿಸಿದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
  • ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ : ಭಾರತೀಯ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್

ಟೊಕಿಯೋ ಒಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿಂದು ಭಾರತದ ಹಾಕಿ ತಂಡ ಐತಿಹಾಸಿಕ ಜಯ ಸಾಧಿಸಿ ಕಂಚಿನ ಪದಕ ಗಳಿಸಿದೆ. ಆಸಕ್ತಿದಾಯಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತದ ಪುರುಷರ ತಂಡ 5-4 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ.

ತಂಡದ ಸಾಧನೆಗಾಗಿ ಭಾರತದ ಪುರುಷರ ಹಾಕಿ ತಂಡಕ್ಕೆ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ದೇಶದ ಎಲ್ಲಾ ವಲಯಗಳಿಂದಲೂ ಅಭಿನಂದನೆಗಳು ಹರಿದು ಬಂದಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಪುರುಷರ ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್, ಮುಖ್ಯ ತರಬೇತುದಾರ ಗ್ರಹಾಮ್ ರೀಡ್ ಮತ್ತು ಸಹಾಯಕ ತರಬೇತುದಾರ ಪಿಯೂಷ್ ದುಬೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು ಮತ್ತು ಅಭಿನಂದನೆ ಸಲ್ಲಿಸಿದರು.

 

ರಾಷ್ಟ್ರಪತಿ ಶ್ರಿ ರಾಮ್ ನಾಥ್ ಕೋವಿಂದ್ ತಂಡವನ್ನು ಅಭಿನಂದಿಸಿದ್ದಾರೆ ಮತ್ತು ಟ್ವೀಟ್ ಮಾಡಿರುವ ಅವರು, “ನಮ್ಮ ಪುರುಷರ ಹಾಕಿ ತಂಡ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ 41 ವರ್ಷಗಳ ನಂತರ ಗೆಲುವು ಸಾಧಿಸಿದೆ. ತಂಡದ ಅಸಾಧಾರಣ ಕೌಶಲ್ಯ, ತಾಳಿಕೆಯ ಗುಣ ಮತ್ತು ಗೆಲ್ಲುವ ದೃಢ ನಿರ್ಧಾರವನ್ನು ಪ್ರದರ್ಶಿಸಿದೆ. ಐತಿಹಾಸಿಕ ಗೆಲುವಿನಿಂದ ಭಾರತದ ಹಾಕಿಯಲ್ಲಿ ಹೊಸ ಯುಗ ಆರಂಭವಾಗಲಿದೆ ಮತ್ತು ಯುವ ಜನತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಉತ್ಕೃಷ್ಟತೆ ಸಾಧಿಸಲು ಇದು ಸ್ಫೂರ್ತಿ ನೀಡುತ್ತದೆಎಂದು ಹೇಳಿದ್ದಾರೆ

 

ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಕಂಚು ಪದಕ ಗೆದ್ದ ಭಾರತದ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರುಐತಿಹಾಸಿಕ! ಇದು ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುವ ದಿನ. ಮನೆಗೆ ಕಂಚು ತಂದ ನಮ್ಮ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಸಾಧನೆಯೊಂದಿಗೆ ಅವರು ಇಡೀ ದೇಶದ, ಅದರಲ್ಲೂ ವಿಶೇಷವಾಗಿ ನಮ್ಮ ಯುವ ಸಮೂಹದ ಗಮನವನ್ನು ಸೆರೆ ಹಿಡಿದಿದ್ದಾರೆ. ನಮ್ಮ ಹಾಕಿ ತಂಡದ ಬಗ್ಗೆ ಭಾರತ ಹೆಮ್ಮೆಪಡುತ್ತದೆ " ಎಂದಿದ್ದಾರೆ.

 

ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಭಾರತ ತಂಡವನ್ನು ಅಭಿನಂದಿಸಿದ್ದಾರೆ ಮತ್ತು ಟ್ವೀಟ್ ಮಾಡಿರುವ ಅವರು, “ ಭಾರತದ ಹುಡುಗರೇ ನಿಮಗೆ ಶತಕೋಟಿ ವಂದನೆಗಳು. ನೀವು ಇದನ್ನು ಸಾಧಿಸಿದ್ದೀರಿ. ನಾವು ಸಂದರ್ಭದಲ್ಲಿ ಶಾಂತವಾಗಿರಲು ಸಾಧ್ಯವಿಲ್ಲ!. ಸಂಭ್ರಮಿಸುತ್ತಿದ್ದೇವೆ. ನಮ್ಮ ಪುರುಷರ ಹಾಕಿ ತಂಡ ಪ್ರಾಬಲ್ಯ ಹೊಂದಿದೆ ಮತ್ತು ಒಲಿಂಪಿಕ್ಸ್ ಇತಿಹಾಸದ ಪುಸ್ತಕದಲ್ಲಿಂದು ನಿಮ್ಮ ಭವಿಷ್ಯವನ್ನು ವ್ಯಾಖ್ಯಾನಿಸಲಾಗಿದೆ. ಮತ್ತೊಮ್ಮೆ ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ!” ಎಂದು ಹೇಳಿದ್ದಾರೆ.  

 

ಟಾಪ್ಸ್ ನಿಂದ ತಂಡಕ್ಕೆ ಬೆಂಬಲ:

  • ವಿವಿಧ ಅಂತಾರಾಷ್ಟ್ರೀಯ ಸ್ಪರ್ಧೆಗಳು ಮತ್ತು ವಿದೇಶಿ ತರಬೇತಿಗಳಿಗಾಗಿ ವೀಸಾ ನೆರವು
  • ಟಾಪ್ಸ್ ನಿಂದ ಆರ್ಥಿಕ ನೆರವು ಪಡೆದ ತಂಡದ ಫಿಸಿಯೋಥೆರಪಿಸ್ಟ್
  • 2018 ಏಷ್ಯನ್ ಕ್ರೀಡಾಕೂಟದಲ್ಲಿ 2 ತಿಂಗಳ ಅವಧಿಗೆ 50,000/ ರೂ ಕಿಸೆ ಹೊರಗಿನ ಭತ್ಯೆ
  • 2021 ಮಾರ್ಚ್ ನಿಂದ 2021 ಆಗಸ್ಟ್ ವರೆಗೆ 50,000/ ರೂ ಕಿಸೆ ಹೊರಗಿನ ಭತ್ಯೆ
  • ವಿದೇಶಿ ಮಾನ್ಯತೆ, ರಾಷ್ಟ್ರೀಯ ತರಬೇತಿ ಶಿಬಿರ, ತರಬೇತುದಾರರು, ಸಹಾಯಕ ಸಿಬ್ಬಂದಿ, ಮತ್ತು ಉಪಕರಣಗಳನ್ನು .ಸಿ.ಟಿ.ಸಿ ಅಡಿ ಒದಗಿಸಲಾಗಿದೆ.

ನೆರವು [2016 ರಿಂದ ವರೆಗೆ]

ಟಾಪ್ಸ್ ತಂಡ: 16,80,000

ಟಾಪ್ಸ್ ವೈಯಕ್ತಿಕ : 3,00,000

ಟಾಪ್ಸ್ ತಂಡ: ರೂ 50,00,00,000

ಒಟ್ಟು ರೂ:  50,19,80,000

***(Release ID: 1742767) Visitor Counter : 214