ಪ್ರಧಾನ ಮಂತ್ರಿಯವರ ಕಛೇರಿ

ವಿಮಾನ ವಾಹಕ ನೌಕೆ 'ವಿಕ್ರಾಂತ್' ಚೊಚ್ಚಲ ಸಮುದ್ರಯಾನಕ್ಕಾಗಿ ಭಾರತೀಯ ನೌಕಾಪಡೆ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಪ್ರಧಾನಿ ಅಭಿನಂದನೆ

Posted On: 04 AUG 2021 9:01PM by PIB Bengaluru

ದೇಶೀಯ ವಿಮಾನ ವಾಹಕ ನೌಕೆ 'ವಿಕ್ರಾಂತ್' ಮೊದಲ ಸಮುದ್ರ ಯಾನಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೇಕ್ ಇನ್ ಇಂಡಿಯಾಕ್ಕೆ ಇದೊಂದು ಅದ್ಭುತ ಉದಾಹರಣೆ ಎಂದೂ ಪ್ರಧಾನಿ ಹೇಳಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಭಾರತೀಯ ನೌಕಾಪಡೆಯ ವಿನ್ಯಾಸ ತಂಡ ಅಭಿವೃದ್ಧಿಪಡಿಸಿದ ಮತ್ತು ಸಿಎಸ್‌ಎಲ್‌ ಕೊಚಿನ್‌@cslcochin ನಿರ್ಮಿಸಿದ ದೇಶೀಯ ವಿಮಾನ ವಾಹಕ ನೌಕೆ 'ವಿಕ್ರಾಂತ್' ಬುಧವಾರ ತನ್ನ ಮೊದಲ ಸಮುದ್ರ ಯಾನ ಕೈಗೊಂಡಿತು. ಮೇಕ್‌ ಇನ್‌ ಇಂಡಿಯಾಕ್ಕೆ @makeinindia ಇದೊಂದು ಅದ್ಭುತ ಉದಾಹರಣೆ. ಐತಿಹಾಸಿಕ ಮೈಲಿಗಲ್ಲಿಗಾಗಿ ಭಾರತೀಯ ನೌಕಾಪಡೆ @indiannavy ಮತ್ತು ಸಿಎಸ್‌ಎಲ್‌ಗೆ@cslcochin ಅಭಿನಂದನೆಗಳು," ಎಂದಿದ್ದಾರೆ.

***



(Release ID: 1742629) Visitor Counter : 222