ಪ್ರಧಾನ ಮಂತ್ರಿಯವರ ಕಛೇರಿ
ಲೋಕಮಾನ್ಯ ತಿಲಕರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
23 JUL 2021 9:54AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಮಾನ್ಯ ತಿಲಕರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ನಾನು ಮಹಾ ಮಹಿಮ ಲೋಕಮಾನ್ಯ ತಿಲಕರಿಗೆ ಅವರ ಜಯಂತಿಯಂದು ನಮನ ಸಲ್ಲಿಸುತ್ತೇನೆ. ಆರ್ಥಿಕವಾಗಿ ಸಮೃದ್ಧವಾದ ಮತ್ತು ಸಾಮಾಜಿಕವಾಗಿ ಪ್ರಗತಿ ಹೊಂದಿದ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ 130 ಕೋಟಿ ಭಾರತೀಯರು ನಿರ್ಧರಿಸಿರುವ ಪ್ರಸಕ್ತ ಸನ್ನಿವೇಶದಲ್ಲಿ ಅವರ ಚಿಂತನೆಗಳು ಮತ್ತು ತತ್ವಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ.
ಲೋಕಮಾನ್ಯ ತಿಲಕರು ಭಾರತೀಯ ಮೌಲ್ಯ ಮತ್ತು ತತ್ವಗಳಲ್ಲಿ ದೃಢ ನಂಬಿಕೆ ಇಟ್ಟಿದ್ದರು. ಶಿಕ್ಷಣ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳಲ್ಲಿನ ಅವರ ಅಭಿಪ್ರಾಯಗಳು ಅನೇಕ ಜನರನ್ನು ಪ್ರೇರೇಪಿಸುತ್ತವೆ. ಅವರು ಸಾಂಸ್ಥಿಕ ನಿರ್ಮಾತೃವಾಗಿದ್ದರು, ಹಲವಾರು ಉನ್ನತ-ಗುಣಮಟ್ಟದ ಸಂಸ್ಥೆಗಳನ್ನು ಪೋಷಿಸಿದ್ದರು, ಅವು ಹಲವು ವರ್ಷಗಳಿಂದ ಪ್ರವರ್ತಕ ಕಾರ್ಯ ಮಾಡಿದೆ." ಎಂದು ತಿಳಿಸಿದ್ದಾರೆ.
***
(रिलीज़ आईडी: 1738021)
आगंतुक पटल : 239
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam