ಪ್ರಧಾನ ಮಂತ್ರಿಯವರ ಕಛೇರಿ
ಒಲಿಂಪಿಕ್ ದಿನದ ಅಂಗವಾಗಿ ದೇಶದ ಎಲ್ಲ ಒಲಿಂಪಿಕ್ ಕ್ರೀಡಾಪಟುಗಳಿಗೆ ಪ್ರಧಾನ ಮಂತ್ರಿ ಶ್ಲಾಘನೆ
ಟೋಕಿಯೊ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ದೇಶದ ಅಥ್ಲೀಟ್’ಗಳಿಗೆ ಶುಭಾಶಯ ಕೋರಿದ ಶ್ರೀ ನರೇಂದ್ರ ಮೋದಿ
ಮೈಗವ್ ಒಲಿಂಪಿಕ್ ಕ್ವಿಜ್(ರಸಪ್ರಶ್ನೆ ಸ್ಪರ್ಧೆ)ನಲ್ಲಿ ಪಾಲ್ಗೊಳ್ಳುವಂತೆ ಯುವ ಸಮುದಾಯಕ್ಕೆ ಆಹ್ವಾನ
Posted On:
23 JUN 2021 8:45AM by PIB Bengaluru
ಒಲಿಂಪಿಕ್ ದಿನದ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ಅಥ್ಲೀಟ್’ಗಳನ್ನು ಅಭಿನಂದಿಸಿದ್ದಾರೆ. ಹಲಾವಾರು ವರ್ಷಗಳಿಂದ ವಿಶ್ವಾದ್ಯಂತ ನಡೆದಿರುವ ವಿವಿಧ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ನಮ್ಮ ಒಲಿಂಪಿಕ್ ಕ್ರೀಡಾಪಟುಗಳು ನಮ್ಮೆಲ್ಲರ ಹೆಮ್ಮೆ, ದೇಶದ ಹೆಮ್ಮೆಯಾಗಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್’ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಅಥ್ಲೀಟ್’ಗಳಿಗೆ ಅವರು ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಇಂದು ವಿಶ್ವ ಒಲಿಂಪಿಕ್ ದಿನ. ಇದರ ಅಂಗವಾಗಿ, ಹಲವಾರು ವರ್ಷಗಳಿಂದ ವಿವಿಧ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ, ಪ್ರತಿನಿಧಿಸುತ್ತಾ ಬಂದಿರುವ ಎಲ್ಲಾ ಕ್ರೀಡಾಳುಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಶ್ಲಾಘಿಸುತ್ತೇನೆ. ಕ್ರೀಡಾ ರಂಗದಲ್ಲಿ ಅವರು ನೀಡಿರುವ ಅದ್ಭುತ ಕೊಡುಗೆಯಿಂದ ಇಡೀ ದೇಶವೇ ಹೆಮ್ಮೆಯಿಂದ ಬೀಗುತ್ತಿದೆ. ಅವರ ನಿರಂತರ ಕ್ರೀಡಾ ಪ್ರಯತ್ನಗಳು ಇತರೆ ಅಥ್ಲೀಟ್’ಗಳಿಗೆ ಸದಾ ಸ್ಫೂರ್ತಿದಾಯಕವಾಗಿದೆ.”
“ಇನ್ನು ಕೆಲವೇ ವಾರಗಳಲ್ಲಿ ಟೋಕಿಯೊ ಒಲಿಂಪಿಕ್ಸ್ – 2020 ಆರಂಭವಾಗಲಿದೆ. ಭಾರತೀಯ ಅಥ್ಲೀಟ್ ತಂಡಕ್ಕೆ ನಾನು ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ತಂಡದಲ್ಲಿ ನಾಲ್ವರು ಅತ್ಯುತ್ತಮ ಅಥ್ಲೀಟ್’ಗಳು ಟೋಕಿಯೊ ಒಲಿಂಪಿಕ್ಸ್’ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬುದು ಸಂತಸದ ವಿಷಯ. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ -2020ರ ಅಂಗವಾಗಿ ಮೈ ಗೌ ರಸಪ್ರಶ್ನೆ ಸಂವಾದ ಸ್ಪರ್ಧೆ ಏರ್ಪಡಿಸಲಾಗಿದ್ದು, ಯುವ ಸಮುದಾಯ ಈ ಸಂವಾದದಲ್ಲಿ ಪಾಲ್ಗೊಳ್ಳಬೇಕು” ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಆಹ್ವಾನ ನೀಡಿದರು.
https://quiz.mygov.in/quiz/road-to-tokyo-2020/
****
(Release ID: 1729729)
Visitor Counter : 288
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam