ಆಯುಷ್

7ನೇ ಅಂತರರಾಷ್ಟ್ರೀಯ ದಿನದಂದು ಪ್ರಧಾನಿ ಎಂ-ಯೋಗ ಆ್ಯಪ್ ನ ಲೋಕಾರ್ಪಣೆ ನೆರವೇರಿಸಿದರು


ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ  ಭಾರತ ಸರ್ಕಾರವು  ಎಂ-ಯೋಗ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ

Posted On: 21 JUN 2021 4:46PM by PIB Bengaluru

ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 7 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಡಬ್ಲ್ಯುಎಚ್ಒ ಎಂ-ಯೋಗಆ್ಯಪ್ ಅನ್ನು ಬಿಡುಗಡೆ ಮಾಡಿದರು. ಎಂ-ಯೋಗ ಆ್ಯಪ್ ಅನೇಕ ಭಾಷೆಗಳಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ಆಧರಿಸಿ ಯೋಗ ತರಬೇತಿ ಮತ್ತು ಅಭ್ಯಾಸದ ಅನೇಕ ವೀಡಿಯೊಗಳನ್ನು ಒದಗಿಸುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ವಿಜ್ಞಾನದ ಸಮ್ಮಿಲನಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಪ್ರಧಾನಿ ಹೇಳಿದರು, ಎಂ-ಯೋಗ ಆ್ಯಪ್ ಯೋಗವನ್ನು ಪ್ರಪಂಚದಾದ್ಯಂತ ಹರಡಲು ಸಹಾಯ ಮಾಡುತ್ತದೆ ಮತ್ತು ಒಂದು ವಿಶ್ವ, ಒಂದು ಆರೋಗ್ಯ ಪ್ರಯತ್ನಗಳಿಗೆ ಸಹಕಾರಿಯಾಗುತ್ತದೆ ಎಂದು ಆಶಿಸಿದರು.

ಪ್ರಧಾನಿಮಂತ್ರಿ ಹೇಳಿದರು:

ವಿಶ್ವಸಂಸ್ಥೆಯಲ್ಲಿ ಭಾರತವು ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದಾಗ, ಯೋಗ ವಿಜ್ಞಾನವನ್ನು ಇಡೀ ಜಗತ್ತಿಗೆ ಸಿಗುವಂತೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿತ್ತುಇಂದು, ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಭಾರತವು ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ.

ಈಗ ಜಗತ್ತು ಎಂ-ಯೋಗ ಆ್ಯಪ್ ಸಾಮರ್ಥ್ಯವನ್ನು ಪಡೆಯಲಿದೆ. ಆ್ಯಪ್ ನಲ್ಲಿ, ಸಾಮಾನ್ಯ ಯೋಗದ ನಿಯಮಗಳನ್ನು ಆಧರಿಸಿ ಯೋಗ ತರಬೇತಿಯ ಹಲವು ವೀಡಿಯೊಗಳು ವಿಶ್ವದ ವಿವಿಧ ಭಾಷೆಗಳಲ್ಲಿ ಲಭ್ಯವಿರುತ್ತವೆ. ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ವಿಜ್ಞಾನದ ಸಮ್ಮಿಲನಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಪ್ರಪಂಚದಾದ್ಯಂತ ಯೋಗವನ್ನು ಪ್ರಚಾರ ಮಾಡುವಲ್ಲಿ ಮತ್ತು ಒಂದು ವಿಶ್ವ, ಒಂದು ಆರೋಗ್ಯಧ್ಯೇಯದ ಪ್ರಯತ್ನಗಳನ್ನು ಯಶಸ್ವಿಗೊಳಿಸುವಲ್ಲಿ ಎಂ-ಯೋಗ ಆ್ಯಪ್ ದೊಡ್ಡ ಪಾತ್ರ ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ.

 

ಮೊಬೈಲ್ ಆ್ಯಪ್ ವಿಶ್ವದಾದ್ಯಂತ ಜನರಲ್ಲಿ ಯೋಗ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸಲು ಅಪಾರ ಸಹಾಯ ಮಾಡುತ್ತದೆ, ವಿಶೇಷವಾಗಿ ಈಗಿರುವ ಸಾಂಕ್ರಾಮಿಕ ಸಮಯದಲ್ಲಿ. ಕೋವಿಡ್-19ರಿಂದ ಗುಣಮುಖಗೊಂಡ ರೋಗಿಗಳ ಆರೋಗ್ಯದ   ಚೇತರಿಕೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಹಿನ್ನೆಲೆ:

ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಜಂಟಿಯಾಗಿ ಮೊಬೈಲ್-ಯೋಗವನ್ನು ಕೇಂದ್ರೀಕರಿಸಿ 2019 ಮಧ್ಯದಲ್ಲಿ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿದ್ದವು. 2030 ವೇಳೆಗೆ  ವಿಶ್ವವ್ಯಾಪಿ ಆರೋಗ್ಯ ಪ್ರಸಾರ ವ್ಯಾಪ್ತಿಯನ್ನು ಸಾಧಿಸಲು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಅಡಿಯಲ್ಲಿ 'ಬಿ ಹೆಲ್ತಿ, ಬಿ ಮೊಬೈಲ್' (ಬಿಎಚ್ಬಿಎಂ) ಎನ್ನುವ ಪರಿಕಲ್ಪನೆಯನ್ನು ಇದು ರೂಪಿಸಿದೆ. 'ಬಿ ಹೆಲ್ತಿ, ಬಿ ಮೊಬೈಲ್' (ಬಿಎಚ್ಬಿಎಂ) ಉಪಕ್ರಮವು ಡಬ್ಲ್ಯುಎಚ್ಒ ನೇತೃತ್ವದ ಜಾಗತಿಕ ಸಹಭಾಗಿತ್ವವಾಗಿದ್ದು, ಇದು ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು (ಎನ್ಸಿಡಿ) ಎದುರಿಸಲು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಮೊಬೈಲ್ ಆರೋಗ್ಯ (ಎಂ-ಹೆಲ್ತ್) ತಂತ್ರಜ್ಞಾನವನ್ನು ಉನ್ನತ ಮಟ್ಟಕ್ಕೇರಿಸುವುದು.

ಮೇಲಿನ ಉದ್ದೇಶಗಳನ್ನು ಸಾಧಿಸುವ ಸಲುವಾಗಿ, ವಿಶ್ವ ಆರೋಗ್ಯ ಸಂಸ್ಥೆ  ಮತ್ತು ಆಯುಷ್ ಸಚಿವಾಲಯದ ನಡುವೆ 2019 ಜುಲೈನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಎಂ-ಯೋಗ ಯೋಜನೆ ನಾಲ್ಕು ಕ್ಷೇತ್ರಗಳನ್ನು ಕೇಂದ್ರೀಕರಿಸಿದೆ:

(1) ಸಾಮಾನ್ಯ ಆರೋಗ್ಯಕ್ಕಾಗಿ ಸಾಮಾನ್ಯ ಯೋಗ ನಿಯಮಗಳು;

(2) ಮಾನಸಿಕ ಆರೋಗ್ಯ ಮತ್ತು  ಚೇತರಿಸಿಕೊಳ್ಳುವುದಕ್ಕಾಗಿ   ಯೋಗ;

(3) ಹದಿಹರೆಯದವರಿಗೆ ಯೋಗ; ಮತ್ತು

(4) ಮಧುಮೇಹದ ಆರಂಭಿಕ ಹಂತದಲ್ಲಿರುವವರಿಗೆ ಯೋಗ.

ಇದರ ಆಧಾರದ ಮೇಲೆ, ಡಬ್ಲ್ಯುಎಚ್ಒ ತಂತ್ರಜ್ಞಾನ ಪಾಲುದಾರರೊಂದಿಗೆ ಸಮಾಲೋಚಿಸಿ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ (ಎಂಡಿಎನ್ಐವೈ) ದಿಂದ ಅಗತ್ಯವಾದ ಕೈಪಿಡಿ ಮತ್ತು ಮೊಬೈಲ್  ಆ್ಯಪ್ ಗಳನ್ನು ಅಭಿವೃದ್ಧಿಪಡಿಸಬೇಕಾಗಿತ್ತು. ಕೈಪಿಡಿಯ ಕಾರ್ಯವು ಅಂತಿಮ ಹಂತದಲ್ಲಿದೆ ಮತ್ತು ಪ್ರಸ್ತುತ ಪ್ರಾರಂಭಿಸಲಾದ ಆ್ಯಪ್ ವಿಶ್ವಸಂಸ್ಥೆಯ ಆರು ಅಧಿಕೃತ ಭಾಷೆಗಳಲ್ಲಿ ಎರಡು ಭಾಷೆಗಳಾದ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ, ಭಾರತ ಸರ್ಕಾರದ ಆಯುಷ್  ಸಚಿವಾಲಯದ ನಿರ್ದೇಶನದ ಮೇರೆಗೆ ಕೃತಿಯಲ್ಲಿ, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ (ಎಂಡಿಎನ್ಐವೈ) ವಿವಿಧ ಅವಧಿಯ ಸಾಮಾನ್ಯ ಸ್ವಾಸ್ಥ್ಯಕ್ಕಾಗಿ ಸಾಮಾನ್ಯ ಯೋಗ ನಿಯಮಗಳ ವಿಡಿಯೋಗಳನ್ನು (45 ನಿಮಿಷಗಳು, 20 ನಿಮಿಷಗಳು ಮತ್ತು 10 ನಿಮಿಷಗಳು), ಸಾಮಾನ್ಯ ಯೋಗ ನಿಯಮಗಳ  ಕಿರುಪುಸ್ತಕಗಳು, ವಿಡಿಯೋಗಳುಆರು ಪ್ರಮುಖ ವಿಶ್ವಸಂಸ್ಥೆಯ ಭಾಷೆಗಳಲ್ಲಿ ಅವುಗಳ ಅನುವಾದಗಳು ಮತ್ತು ಕಿರುಪುಸ್ತಕಗಳ ವಿನ್ಯಾಸಗಳನ್ನು ರಚಿಸಲು ಅನುಕೂಲವಾಗುವಂತೆ ಪ್ರಮುಖ ಪಾತ್ರ ವಹಿಸಿದೆ

***


(Release ID: 1729226) Visitor Counter : 291