ಸಂಪುಟ
ಡಿಪಿಐಐಟಿ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮಹಾಪಾತ್ರ ನಿಧನಕ್ಕೆ ಸಂಪುಟ ಕಾರ್ಯದರ್ಶಿ ಸಂತಾಪ
ಪ್ರಕಟಣಾ ದಿನಾಂಕ:
19 JUN 2021 11:07AM by PIB Bengaluru
ಕೇಂದ್ರ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು ಡಿಪಿಐಐಟಿ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮಹಾಪಾತ್ರ ಅವರ ಅಕಾಲಿಕ ನಿಧನಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಶ್ರೀ ಗೌಬಾ ಅವರು ತಮ್ಮ ಸಂತಾಪ ಸಂದೇಶದಲ್ಲಿ “ಮಹಾಪಾತ್ರ ಅವರು ಆತ್ಮೀಯ ಸಹೋದ್ಯೋಗಿಯಾಗಿದ್ದರು ಮತ್ತು ನಾಯಕತ್ವ ಹಾಗೂ ಕಾರ್ಯತಾಂತ್ರಿಕ ಚಿಂತನೆಗಳ ಅಸಾಧಾರಣ ಗುಣಗಳನ್ನು ಹೊಂದಿದ್ದ ನಾಗರಿಕ ಸೇವೆಯ ಅತ್ಯುತ್ತಮ ದಕ್ಷ ಅಧಿಕಾರಿಯಾಗಿದ್ದರು.
ಕೋವಿಡ್-19 ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಒಂದು ಉನ್ನತಾಧಿಕಾರ ಸಮಿತಿಯ ಮುಖ್ಯಸ್ಥರಾಗಿದ್ದ ಅವರು ಅತ್ಯಂತ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಅವರಿಗೆ ಸೋಂಕು ತಗುಲಿ, ಅನಾರೋಗ್ಯಕ್ಕೆ ಒಳಗಾದರೂ ಕೂಡ ಅವರು ಅಧಿಕ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದರು. ಸವಾಲಿನ ಸಂದರ್ಭದಲ್ಲೂ ಅವರು ದೇಶಾದ್ಯಂತ ಆಕ್ಸಿಜನ್ ಪೂರೈಕೆ ಕುರಿತು ನಿಗಾವಹಿಸುತ್ತಿದ್ದರು.
ಸಾರ್ವಜನಿಕ ಸೇವೆಗೆ ಅವರ ಬದ್ಧತೆ ಮತ್ತು ಸಕ್ರಿಯ ಮನೋಭಾವದಿಂದಾಗಿ ಅವರು ಸದಾ ನೆನಪಾಗುತ್ತಾರೆ. ಅವರ ಅಕಾಲಿಕ ನಿಧನ ನಮ್ಮೆಲ್ಲರಿಗೂ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರಿಗೆ ನಾನು ಸಂತಾಪಗಳನ್ನು ಸೂಚಿಸಲು ಬಯಸುತ್ತೇನೆ’’ ಎಂದು ಹೇಳಿದ್ದಾರೆ.
****
(ಪ್ರಕಟಣೆ ಐ.ಡಿ.: 1728626)
ವಿಸಿಟರ್ ಕೌಂಟರ್ : 233
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam