ಪ್ರಧಾನ ಮಂತ್ರಿಯವರ ಕಛೇರಿ

ಹಿರಿಯ ಅಥ್ಲೀಟ್, ಕ್ರೀಡಾ ದಿಗ್ಗಜ ಶ್ರೀ ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 19 JUN 2021 8:16AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿರಿಯ ಆಥ್ಲೀಟ್, ಕ್ರೀಡಾದಿಗ್ಗಜ ಶ್ರೀ ಮಿಲ್ಖಾ ಸಿಂಗ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು, ಮಿಲ್ಕಾ ಸಿಂಗ್ ಅವರನ್ನು ಇಡೀ ರಾಷ್ಟ್ರದ ಕಲ್ಪನೆಯನ್ನು ಸೆರೆಹಿಡಿದ ಮತ್ತು ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದ ಹಿರಿಯ ಕ್ರೀಡಾದಿಗ್ಗಜ ಎಂದು ಬಣ್ಣಿಸಿದ್ದಾರೆ. 
ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ “ಶ್ರೀ ಮಿಲ್ಕಾ ಸಿಂಗ್ ಜಿ ಅವರ ನಿಧನದಿಂದ ನಾವು ಹಿರಿಯ ಕ್ರೀಡಾದಿಗ್ಗಜರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರು ಇಡೀ ರಾಷ್ಟ್ರದ ಕಲ್ಪನೆಯನ್ನು ಸೆರೆಹಿಡಿದಿದ್ದರು ಮತ್ತು ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದರು. ಲಕ್ಷಾಂತರ ಜನರಿಗೆ ಅವರೇ ಸ್ವಯಂ ಸ್ಫೂರ್ತಿ ತುಂಬುವ ವ್ಯಕ್ತಿಯಾಗಿದ್ದರು. ಅವರ ನಿಧನದಿಂದ ದುಃಖವಾಗಿದೆ.
ಕೆಲವು ದಿನಗಳ ಹಿಂದೆ ಶ್ರೀ ಮಿಲ್ಕಾ ಸಿಂಗ್ ಜಿ ಅವರ ಜೊತೆ ಮಾತನಾಡಿದೆ. ಅದೇ ನಮ್ಮ ಕೊನೆಯ ಸಂಭಾಷಣೆ ಯಾಗುತ್ತದೆಂದು ತಿಳಿದಿರಲಿಲ್ಲ. ಹಲವು ಉದಯೋನ್ಮುಖ ಕ್ರೀಡಾಪಟುಗಳು ಅವರ ಜೀವನ ಪಯಣದಿಂದ ಶಕ್ತಿಯನ್ನು ಪಡೆಯುತ್ತಾರೆ. ಅವರು ಕುಟುಂಬದವರಿಗೆ ಮತ್ತು ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳು ‘’ಎಂದು ಹೇಳಿದ್ದಾರೆ. 

 

****
 


(रिलीज़ आईडी: 1728476) आगंतुक पटल : 235
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam