ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕಪ್ಪು ಶಿಲೀಂಧ‍್ರ ಚಿಕಿತ್ಸೆಗೆ ಅಗತ್ಯ ಪ್ರಮಾಣದಲ್ಲಿ ಲಿಪೋಸೊಮಲ್ ಅಂಪೊಟೆರಿಸಿನ್ ಬಿ ‍ಔಷಧ ದಾಸ್ತಾನು: ಶ್ರೀ ಮನ್ಸೂಖ್ ಮಾಂಡವಿಯಾ


ರಾಜ್ಯಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ 2021, ಜೂನ್ 17ರ ವರೆಗೆ ಒಟ್ಟು 7,28,045 ಲಿಪೋಸೋಮಲ್ ಅಂಪೊಟೆರಿಸಿನ್ ಬಿ ವಯಲ್ಸ್ ಪೂರೈಕೆ

Posted On: 18 JUN 2021 2:16PM by PIB Bengaluru

2021 ರ ಜೂನ್ 16 ರ ಮಾಹಿತಿಯಂತೆ ದೇಶದಲ್ಲಿ 27,142 ಸಕ್ರಿಯ ಕಪ್ಪು ಶಿಲೀಂಧ್ರ ಪ್ರಕರಣಗಳಿವೆ. ಭವಿಷ್ಯದಲ್ಲಿ ಮ್ಯೂಕರ್ ಮೈಕೋಸಿಸ್ ಪ್ರಕರಣಗಳು ಹೆಚ್ಚಾದರೂ ಇದಕ್ಕೆ ಭಾರತ ಸಿದ್ಧವಾಗಿದ್ದು,  ಅಂಪೊಟೆರಿಸಿನ್ ಬಿ ಹಾಗೂ ಕಪ್ಪು ಶಿಲೀಂಧ್ರ ರೋಗಿಗಳಿಗೆ ಚಿಕಿತ್ಸೆ ನೀಡಲು ಇತರ ಔಷಧಗಳು ಅಗತ್ಯಕ್ಕಿಂತಲೂ ಹೆಚ್ಚು ಲಭ್ಯವಿದೆ.

ಭಾರತದಲ್ಲಿ ದೇಶೀಯ ಉತ್ಪಾದನೆಯನ್ನು ಗಣನೀಯವಾಗಿ ಐದು ಪಟ್ಟು ಹೆಚ್ಚಿಸಲಾಗಿದೆ. 2021 ರ ಏಪ್ರಿಲ್ ನಲ್ಲಿ ಅಂಪೋಟೆರಿಸಿನ್ ಬಿ ಔಷಧಗಳನ್ನು ಕೇವಲ 62,000 ವಯಲ್ಸ್ ಉತ್ಪಾದಿಸಲಾಗುತ್ತಿತ್ತು ಮತ್ತು ಇದು 2021 ರ ಜೂನ್ ನಲ್ಲಿ 3.75 ಲಕ್ಷ ವಯಲ್ಸ್ ಗೆ ಏರಿಕೆಯಾಗಿದೆ.  ದೇಶೀಯ ಉತ್ಪಾದನೆ ಹೆಚ್ಚಿಸಿರುವ ಜತೆಗೆ 9,05,000 ಲಿಪೋಸೋಮಲ್ ಆಂಫೋಟೆರಿಸಿನ್ ಬಿ ವಯಲ್ಸ್ ಗಳನ್ನು ಮಿಸಸ್ ಮೈಲಾನ್ ಸಂಸ್ಥೆ ಮೂಲಕ ಆಮದು ಮಾಡಿಕೊಳ್ಳಲು ಬೇಡಿಕೆ ಸಲ್ಲಿಸಲಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸೂಖ್ ಮಾಂಡವೀಯ ಮಾತನಾಡಿ, ಭಾರತದಲ್ಲಿ ಅಂಪೊಟೆರಿಸಿನ್ ಬಿ ಔಷಧವನ್ನು ಹೆಚ್ಚಿಸಲು ಸರ್ಕಾರ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

https://twitter.com/mansukhmandviya/status/1405803653877813248?s=19

ಕೇಂದ್ರ ಔಷಧ ಇಲಾಖೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ 2021 ರ ಜೂನ್ 17 ರವರೆಗೆ ರಾಜ್ಯಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ 7,28,045 ಲಿಪ್ಸೊಮಲ್ ಅಂಪೊಟೆರಿಸಿನ್ ಬಿ ವಯಲ್ಸ್ ಗಳನ್ನು  ಮಂಜೂರು ಮಾಡಿದೆ. ಅಂಪೊಟೆರಿಸಿನ್ ಬಿ ಔಷಧವನ್ನು ಸಾಮಾನ್ಯವಾಗಿ ಮ್ಯೂಕರ್ ಮೈಕೋಸಿಸ್ ಅಂದರೆ ಸಾಮಾನ್ಯವಾಗಿ ಕರೆಯಲ್ಪಡುವ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬಳಸಲಾಗುತ್ತದೆ.

2021 ರ ಮೇ 11 ರಿಂದ 2021 ಜೂನ್ 17 ವರೆಗೆ ರಾಜ್ಯವಾರು ಲಿಪೋಸೋಮಲ್ ಅಂಪೊಟೆರಿಸಿನ್ ಬಿ ವಯಲ್ಸ್ ಹಂಚಿಕೆ

ಕ್ರಮ ಸಂಖ್ಯೆ

ರಾಜ್ಯಗಳು/

ಕೇಂದ್ರಾಡಳಿತ ಪ್ರದೇಶಗಳು ಒಟ್ಟು ವಯಲ್ಸ್ ಗಳು

ಒಟ್ಟು ವಯಲ್ಸ್

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

0

2

ಆಂಧ್ರ ಪ್ರದೇಶ

47510

3

ಅರುಣಾಚಲ ಪ್ರದೇಶ

0

4

ಅಸ್ಸಾಂ

200

5

ಬಿಹಾರ

8540

6

ಚಂಡಿಘರ್

2800

7

ಚತ್ತೀಸ್ ಘರ್

4720

8

ದಾದ್ರಾ ನಾಗರ್ ಹವೇಲಿ ಮತ್ತು

ದಯು ಹಾಗೂ ಡಾಮನ್

500

9

ದೆಹಲಿ

21610

10

ಗೋವಾ

740

11

ಗುಜರಾತ್

148410

12

ಹರಿಯಾಣ

25560

13

ಹಿಮಾಚಲ ಪ್ರದೇಶ

470

14

ಜಮ್ಮು ಮತ್ತು ಕಾಶ್ಮೀರ [ಯುಟಿ]

600

15

ಜಾರ್ಖಂಡ್

2030

16

ಕರ್ನಾಟಕ

52620

17

ಕೇರಳ

2030

18

ಲದ್ಧಾಖ್ [ಯುಟಿ]

0

19

ಲಕ್ಷ ದ್ವೀಪ

0

20

ಮಧ್ಯ ಪ್ರದೇಶ

49770

21

ಮಹಾರಾಷ್ಟ್ರ

150265

22

ಮಣಿಪುರ

150

23

ಮೇಘಾಲಯ

0

24

ಮಿಜೋರಾಂ

0

25

ನಾಗಾಲ್ಯಾಂಡ್

100

26

ಒಡಿಶಾ

1260

27

ಪುದುಚೇರಿ

460

28

ಪಂಜಾಬ್

8280

29

ರಾಜಸ್ಥಾನ್

63070

30

ಸಿಕ್ಕಿಂ

0

31

ತಮಿಳುನಾಡು

25260

32

ತೆಲಂಗಾಣ

34350

33

ತ್ರಿಪುರ

150

34

ಉತ್ತರ ಪ್ರದೇಶ

39290

35

ಉತ್ತರಾಖಂಡ್

3380

36

ಪಶ್ಚಿಮ ಬಂಗಾಳ

2640

37

ಕೇಂದ್ರೀಯ ಸಂಸ್ಥೆಗಳು

31280

 

ಒಟ್ಟು

728045

***



(Release ID: 1728219) Visitor Counter : 231