ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಳೆದ 24 ಗಂಟೆಗಳಲ್ಲಿ ಭಾರತವು 84,834 ಹೊಸ ಪ್ರಕರಣಗಳನ್ನು ವರದಿ ಮಾಡಿದೆ - ಇದು 71 ದಿನಗಳ ನಂತರ ವರದಿಯಾದ ಅತ್ಯಂತ ಕಡಿಮೆಯಾದ ಪ್ರಕರಣವಾಗಿದೆ.


ಭಾರತದ ಸಕ್ರಿಯ ಪ್ರಕರಣಗಳ ಹೊರೆಯು ಇನ್ನೂ 10,26,159ರಷ್ಟು ಕಡಿಮೆಯಾಗಿದೆ

ದೈನಂದಿನ ಚೇತರಿಕೆಯ ಪ್ರಮಾಣವು ಸತತ 31ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ

ಚೇತರಿಕೆಯ ದರ 95.26% ರಷ್ಟು ಹೆಚ್ಚಾಗಿದೆ

ದೈನಂದಿನ ದೃಢಪಟ್ಟ ಪ್ರಕರಣಗಳ ದರವು 4.25%ರಷ್ಟಿದೆ, ಇದು ನಿರಂತರವಾಗಿ 20 ದಿನಗಳವರೆಗೆ ದೃಢಪಟ್ಟ ಪ್ರಕರಣಗಳ ದರ 10% ಕ್ಕಿಂತ ಕಡಿಮೆಯಿದೆ

Posted On: 13 JUN 2021 11:28AM by PIB Bengaluru

ಭಾರತವು ಕಳೆದ 24    ದೈನಂದಿನ 80,834 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ದೇಶವು ಈಗ  ನಿರಂತರ ಆರು ದಿನಗಳವರೆಗೆ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳನ್ನು ದಾಖಲಿಸಿದೆ.  ಇದು ಕೇಂದ್ರ ಮತ್ತು ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

https://static.pib.gov.in/WriteReadData/userfiles/image/image001M1D9.jpg

ಭಾರತದ ಸಕ್ರಿಯ  ಪ್ರಕರಣಗಳ ಹೊರೆಯಲ್ಲಿ ನಿರಂತರವಾಗಿ ಕುಸಿತ ಕಂಡುಬರುತ್ತಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆಯು  ಇಂದು  10,26,159ರಷ್ಟಿದೆ. ಸತತ ಹದಿಮೂರು ದಿನಗಳವರೆಗೆ ಪ್ರಕರಣಗಳ ಹೊರೆಯು  20 ಲಕ್ಷಕ್ಕಿಂತ ಕಡಿಮೆಯಿದೆ.

ಕಳೆದ 24 ಗಂಟೆಗಳಲ್ಲಿ  54,531ರ ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ  3.49%ರಷ್ಟು ಮಾತ್ರ ಇದೆ.

https://static.pib.gov.in/WriteReadData/userfiles/image/image002MTIK.jpg

ಕೋವಿಡ್ ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವ ಕಾರಣ, ಭಾರತದ ದೈನಂದಿನ ಚೇತರಿಕೆಗಳ ಪ್ರಮಾಣವು  ಸತತ ಮೂವತ್ತೊಂದನೆಯ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 1,32,062 ಗುಣಮುಖರಾದ ಪ್ರಕರಣಗಳು ವರದಿಯಾಗಿವೆ. ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ  51,228 ಹೆಚ್ಚಿನ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ.

https://static.pib.gov.in/WriteReadData/userfiles/image/image003BRA6.jpg

ಸಾಂಕ್ರಾಮಿಕ ರೋಗದ ಆರಂಭದಿಂದಲೂ ಸೋಂಕಿತರಲ್ಲಿ 2,80,43,446 ಜನರು ಈಗಾಗಲೇ ಕೋವಿಡ್-19ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ   1,32,062 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 95.26% ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ.

https://static.pib.gov.in/WriteReadData/userfiles/image/image004TBDG.jpg

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ಕಳೆದ 24 ಗಂಟೆಗಳಲ್ಲಿ ಒಟ್ಟು   19,00,312   ಪರೀಕ್ಷೆಗಳನ್ನು ನಡೆಸಲಾಗಿದ್ದು,  ಇಲ್ಲಿಯವರೆಗೆ ಭಾರತದಲ್ಲಿ 37.81 ಕೋಟಿ (37,81,32,474) ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ, ಸಾಪ್ತಾಹಿಕ ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವು ಕಂಡುಬರುತ್ತಿದೆ. ಸಾಪ್ತಾಹಿಕ ಸೋಂಕು ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 4.74%ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 4.25% ರಷ್ಟಿದೆ.  ಈಗ ಇದು ಸತತ ಇಪ್ಪತ್ತು  ದಿನಗಳವರೆಗೆ 10% ಕ್ಕಿಂತ ಕಡಿಮೆಯಿದೆ.

https://static.pib.gov.in/WriteReadData/userfiles/image/image005EVUQ.jpg

ದೇಶಾದ್ಯಂತ ನೀಡಲಾದ ಕೋವಿಡ್ -19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ ಇಂದು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ 25ಕೋಟಿಯನ್ನು ದಾಟಿದೆ.  ಕಳೆದ 24 ಗಂಟೆಗಳಲ್ಲಿ 34,84,239 ಲಸಿಕೆ ಡೋಸ್ ಗಳನ್ನು ನೀಡಲಾಯಿತು.

ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 25,31,95,048 ಲಸಿಕೆ ಡೋಸ್ ಗಳನ್ನು 35,05,535  ಸೆಷನ್‌ಗಳ ಮೂಲಕ ನೀಡಲಾಗಿದೆ.

ಅವುಗಳ ವಿವರ ಹೀಗಿವೆ:

ಎಚ್‌ಸಿಡಬ್ಲ್ಯೂ

1 ನೇ ಡೋಸ್

1,00,48,183

2 ನೇ ಡೋಸ್

69,63,347

ಎಫ್‌ಎಲ್‌ಡಬ್ಲ್ಯೂ

1 ನೇ ಡೋಸ್

1,67,28,272

2 ನೇ ಡೋಸ್

88,42,292

 18 - 44 ವರ್ಷದವರು

1 ನೇ ಡೋಸ್

4,02,15,561

2 ನೇ ಡೋಸ್

6,77,853

 45 ರಿಂದ 60 ವರ್ಷದವರು

1 ನೇ ಡೋಸ್

7,54,28,713

2 ನೇ ಡೋಸ್

1,19,42,926

 60 ವರ್ಷಕ್ಕಿಂತ ಮೇಲ್ಪಟ್ಟವರು

1 ನೇ ಡೋಸ್

6,24,72,732

2 ನೇ ಡೋಸ್

1,98,75,169

ಒಟ್ಟು

25,31,95,048


(Release ID: 1726809) Visitor Counter : 270