ಪ್ರಧಾನ ಮಂತ್ರಿಯವರ ಕಛೇರಿ

ಕ್ಯು.ಎಸ್. ಜಗತ್ತಿನ ವಿಶ್ವವಿದ್ಯಾಲಯಗಳ ಶ್ರೇಯಾಂಕ 2022ರ ಮೊದಲ -200ರಲ್ಲಿ ಸ್ಥಾನ ಪಡೆದ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಎಸ್ಸಿ ಬೆಂಗಳೂರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

ಸಂಶೋಧನೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದ ಐಐಎಸ್ಸಿ ಬೆಂಗಳೂರು

Posted On: 09 JUN 2021 7:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ಯು.ಎಸ್. ಜಗತ್ತಿನ ವಿಶ್ವವಿದ್ಯಾಲಯಗಳ ಶ್ರೇಯಾಂಕ 2022ರ ಮೊದಲ 200ರಲ್ಲಿ ಸ್ಥಾನ ಪಡೆದಿರುವ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಎಸ್ಸಿ ಬೆಂಗಳೂರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು:
“@ಐಐಎಸ್ಸಿ ಬೆಂಗಳೂರು, @ಐಐಟಿಬಾಂಬೆ ಮತ್ತು @ಐಐಟಿ ದೆಹಲಿಗೆ ಅಭಿನಂದನೆಗಳು. ಭಾರತದ ಇನ್ನೂ ಹಲವು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಜಾಗತಿಕ ಔನ್ನತ್ಯ ಖಾತ್ರಿಪಡಿಸಲು ಮತ್ತು ಯುವಕರಲ್ಲಿನ ಬೌದ್ಧಿಕ ಶಕ್ತಿಯನ್ನು ಬೆಂಬಲಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

https://pib.gov.in/PressReleasePage.aspx?PRID=1725638

 

****
 (Release ID: 1725805) Visitor Counter : 36