ಸಂಪುಟ

ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 02 JUN 2021 12:51PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಜಪಾನ್ ಸರ್ಕಾರದ ಭೂ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ನಡುವೆ ಸುಸ್ಥಿರ ನಗರಾಭಿವೃದ್ಧಿ ಕುರಿತು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ. ಒಪ್ಪಂದವು ಅಸ್ತಿತ್ವದಲ್ಲಿರುವ ನಗರಾಭಿವೃದ್ಧಿ ಕುರಿತ 2007 ಒಪ್ಪಂದವನ್ನು ಹಿಂತೆಗೆದುಕೊಳ್ಳುತ್ತದೆ.

ಅನುಷ್ಠಾನ ತಂತ್ರ

ಸಹಕಾರ ಒಪ್ಪಂದದ ಚೌಕಟ್ಟಿನಡಿಯಲ್ಲಿ ಸಹಕಾರದ ಕಾರ್ಯಕ್ರಮಗಳನ್ನು ಕಾರ್ಯತಂತ್ರಗೊಳಿಸಲು ಮತ್ತು ಅನುಷ್ಠಾನಗೊಳಿಸಲು ಜಂಟಿ ಕಾರ್ಯ ತಂಡವನ್ನು (ಜೆಡಬ್ಲ್ಯೂಜಿ) ರಚಿಸಲಾಗುವುದು. ಜಂಟಿ ಕಾರ್ಯ ತಂಡವು ವರ್ಷಕ್ಕೊಮ್ಮೆ ಜಪಾನ್ ಮತ್ತು ಭಾರತದಲ್ಲಿ ಪರ್ಯಾಯವಾಗಿ ಸಭೆ ಸೇರಲಿದೆ.

ಒಪ್ಪಂದದ ಅಡಿಯಲ್ಲಿನ ಸಹಕಾರವು ಒಪ್ಪಂದದ ಸಹಿಯ ದಿನಾಂಕದಿಂದ ಪ್ರಾರಂಭವಾಗುತ್ತದೆ ಮತ್ತು 5 ವರ್ಷಗಳ ಅವಧಿಗೆ ಮುಂದುವರಿಯುತ್ತದೆ. ಅದರ ನಂತರ, 5 ವರ್ಷಗಳ ನಂತರದ ಅವಧಿಗೆ ಅದನ್ನು ಸ್ವಯಂಚಾಲಿತವಾಗಿ ನವೀಕರಿಸಬಹುದು.

ಪ್ರಮುಖ ಪರಿಣಾಮ

ಸಹಕಾರ ಒಪ್ಪಂದವು ಉಭಯ ದೇಶಗಳ ನಡುವೆ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಬಲವಾದ, ಗಾಢವಾದ ಮತ್ತು ದೀರ್ಘಕಾಲೀನ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುತ್ತದೆ.

ಪ್ರಯೋಜನಗಳು

ನಗರ ಯೋಜನೆ, ಸ್ಮಾರ್ಟ್ ನಗರಗಳ ಅಭಿವೃದ್ಧಿ, ಕೈಗೆಟುಕುವ ವಸತಿ, (ಬಾಡಿಗೆ ವಸತಿ ಸೇರಿದಂತೆ), ನಗರಗಳ ಪ್ರವಾಹ ನಿರ್ವಹಣೆ, ಒಳಚರಂಡಿ ಮತ್ತು ತ್ಯಾಜ್ಯ ನೀರು ನಿರ್ವಹಣೆ, ನಗರ ಸಾರಿಗೆ (ಸುಧಾರಿತ ಸಾರಿಗೆ ನಿರ್ವಹಣೆ ವ್ಯಸವಸ್ಥೆ, ಟ್ರಾನ್ಸಿಟ್-ಓರಿಯೆಂಟೆಡ್ ಅಭಿವೃದ್ಧಿ ಮತ್ತು ಮಲ್ಟಿಮೋಡಲ್ ಇಂಟಿಗ್ರೇಷನ್ ಒಳಗೊಂಡು) ಮತ್ತು ವಿಪತ್ತು ಸ್ಥಿತಿಸ್ಥಾಪಕ ಅಭಿವೃದ್ಧಿ ಸೇರಿದಂತೆ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಒಪ್ಪಂದವು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ವಿವರಗಳು

ನಗರ ಯೋಜನೆ, ಸ್ಮಾರ್ಟ್ ನಗರಗಳ ಅಭಿವೃದ್ಧಿ, ಕೈಗೆಟುಕುವ ವಸತಿ, (ಬಾಡಿಗೆ ವಸತಿ ಸೇರಿದಂತೆ), ನಗರಗಳ ಪ್ರವಾಹ ನಿರ್ವಹಣೆ, ಒಳಚರಂಡಿ ಮತ್ತು ತ್ಯಾಜ್ಯ ನೀರು ನಿರ್ವಹಣೆ, ನಗರ ಸಾರಿಗೆ (ಸುಧಾರಿತ ಸಾರಿಗೆ ನಿರ್ವಹಣೆ ವ್ಯಸವಸ್ಥೆ, ಟ್ರಾನ್ಸಿಟ್-ಓರಿಯೆಂಟೆಡ್ ಅಭಿವೃದ್ಧಿ ಮತ್ತು ಮಲ್ಟಿಮೋಡಲ್ ಇಂಟಿಗ್ರೇಷನ್ ಒಳಗೊಂಡು) ಮತ್ತು ವಿಪತ್ತು ಸ್ಥಿತಿಸ್ಥಾಪಕ ಅಭಿವೃದ್ಧಿ ಸೇರಿದಂತೆ ಸುಸ್ಥಿರ ನಗರ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ-ಜಪಾನ್ ತಾಂತ್ರಿಕ ಸಹಕಾರವನ್ನು ಸುಲಭಗೊಳಿಸುವುದು ಮತ್ತು ಬಲಪಡಿಸುವುದು ಸಹಕಾರ ಒಪ್ಪಂದದ ಉದ್ದೇಶಗಲಾಗಿವೆ. ಪ್ರಸ್ತಾವಿತ ಒಪ್ಪಂದವು  ಮೇಲೆ ತಿಳಿಸಿದ ಪ್ರದೇಶಗಳಲ್ಲಿ ಪ್ರಮುಖ ಕಲಿಕೆಗಳು ಮತ್ತು ಉತ್ತಮ ಅಭ್ಯಾಸಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ.

***



(Release ID: 1723680) Visitor Counter : 209