ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಬ್ಯಾಟರಿ ಚಾಲಿತ ವಾಹನಗಳಿಗೆ (ಬಿಒವಿ) ನೋಂದಣಿ ಪ್ರಮಾಣಪತ್ರ (ಆರ್ಸಿ) ವಿತರಣೆ ಅಥವಾ ನವೀಕರಣಕ್ಕಾಗಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
Posted On:
01 JUN 2021 10:45AM by PIB Bengaluru
ಬ್ಯಾಟರಿ ಚಾಲಿತ ವಾಹನಗಳಿಗೆ(ಬಿಒವಿ) ನೋಂದಣಿ ಪ್ರಮಾಣಪತ್ರ (ಆರ್ಸಿ) ವಿತರಣೆ ಅಥವಾ ನವೀಕರಣ ಹಾಗೂ ಹೊಸ ನೋಂದಣಿ ಗುರುತು ನಿಯೋಜನೆಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಒಳಗೊಂಡ ಕರಡು ಅಧಿಸೂಚನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2021ರ ಮೇ 27ರಂದು ಹೊರಡಿಸಿದೆ. ಈ ವಿನಾಯಿತಿ ಕಲ್ಪಿಸಲು ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989ಕ್ಕೆ ತಿದ್ದುಪಡಿ ತರಲು ಸಚಿವಾಲಯ ಪ್ರಸ್ತಾಪಿಸಿದೆ. ವಿದ್ಯುತ್ಚಾಲಿತ ವಾಹನಗಳ ಸಂಚಾರವನ್ನು (ಇ-ಮೊಬಿಲಿಟಿ) ಉತ್ತೇಜಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಈ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಜನಸಾಮಾನ್ಯರು ಮತ್ತು ಸಂಬಂಧಪಟ್ಟ ಎಲ್ಲಾ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಗಳನ್ನು ಕೋರಲಾಗಿದೆ.
***
(Release ID: 1723380)
Visitor Counter : 226