ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದ ಸಕ್ರಿಯ ಪ್ರಕರಣಗಳ ಹೊರೆ 22,28,724 ಕ್ಕೆ ಇಳಿಕೆ, ಕಳೆದ 24 ಗಂಟೆಗಳಲ್ಲಿ 1,14,428ರಷ್ಟು ಇಳಿಕೆ
1.73 ಲಕ್ಷ ಪ್ರಕರಣಗಳಿರುವಾಗ, ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಕಳೆದ 45 ದಿನಗಳಲ್ಲಿ ಅತ್ಯಂತ ಕನಿಷ್ಟ
ಕಳೆದ ಎರಡು ದಿನಗಳಿಂದ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತಲೂ ಕಡಿಮೆ
ದೈನಂದಿನ ಚೇತರಿಕೆ ಪ್ರಕರಣಗಳ ಸಂಖ್ಯೆ ಸತತ 16 ನೇ ದಿನವೂ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚು
ಗುಣಮುಖ ದರ ಇನ್ನಷ್ಟು ಏರಿಕೆಯಾಗಿ 90.80% ಗೆ
ದೈನಂದಿನ ಪಾಸಿಟಿವಿಟಿ ದರ 8.36 %; ಸತತ 5 ದಿನಗಳಿಂದ 10 % ಗಿಂತಲೂ ಕಡಿಮೆ
ಪರೀಕ್ಷಾ ಸಾಮರ್ಥ್ಯವನ್ನು ವ್ಯಾಪಕವಾಗಿ ಹೆಚ್ಚಿಸಲಾಗಿದೆ, ಇದುವರೆಗೆ ಮಾಡಲಾದ ಪರೀಕ್ಷೆಗಳ ಒಟ್ಟು ಸಂಖ್ಯೆ 34.1 ಕೋಟಿ
Posted On:
29 MAY 2021 10:20AM by PIB Bengaluru
ಭಾರತದ ಸಕ್ರಿಯ ಪ್ರಕರಣಗಳ ಹೊರೆ ಇಂದು 22,28,724 ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳು 2021 ರ ಮೇ 10 ರಂದು ಗರಿಷ್ಟ ಸಂಖ್ಯೆಯಲ್ಲಿದ್ದವು, ಈಗ ಅವುಗಳ ಸಂಖ್ಯೆ ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ನಿವ್ವಳ 1,14,428 ಇಳಿಕೆಯಾಗಿದೆ ಮತ್ತು ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆಯ 8.04% ನಷ್ಟಿದೆ.
ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದರ ಅಂಗವಾಗಿ ಈಗ ಸತತ ಹದಿಮೂರು ದಿನಗಳಿಂದ ದೈನಿಕ 3 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗುತ್ತಿವೆ. ಕಳೆದ ಎರಡು ದಿನಗಳಿಂದ ದೈನಿಕ 2 ಲಕ್ಷಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 1,73,790 ದೈನಿಕ ಹೊಸ ಪ್ರಕರಣಗಳು ದಾಖಲಾಗಿವೆ.
ಭಾರತದ ದೈನಂದಿನ ಗುಣಮುಖ ಪ್ರಕರಣಗಳ ಸಂಖ್ಯೆಯು ಸತತವಾಗಿ ಕಳೆದ 16 ದಿನಗಳಿಂದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ ಕಳೆದ 24 ಗಂಟೆಗಳಲ್ಲಿ 2,84,601 ಮಂದಿ ಚೇತರಿಸಿಕೊಂಡಿದ್ದಾರೆ/ ಗುಣಮುಖರಾಗಿದ್ದಾರೆ.
ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 1,10,811 ಹೆಚ್ಚು ಚೇತರಿಕೆ ಪ್ರಕರಣಗಳು ವರದಿಯಾಗಿವೆ.
ಜಾಗತಿಕ ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಸೋಂಕು ತಗಲಿದವರಲ್ಲಿ 2,51,78,011 ಮಂದಿ ಕೋವಿಡ್ -19 ರಿಂದ ಈಗಾಗಲೇ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 2,84,601 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖ ದರ 90.80%.ರಷ್ಟಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 20,80,048 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತದಲ್ಲಿ ಇದುವರೆಗೆ ಒಟ್ಟು 34.11 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆಯಾದರೆ, ಸಾಪ್ತಾಹಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.ಪ್ರಸ್ತುತ ಸಾಪ್ತಾಹಿಕ ಪಾಸಿಟಿವ್ ದರ 9.84% ಆಗಿದ್ದು, ದೈನಿಕ ಪಾಸಿಟಿವ್ ದರ ಕಡಿಮೆಯಾಗಿದೆ ಮತ್ತು ಇಂದು ಅದು 8.36% ಆಗಿದೆ. ಇದು ಸತತ 5 ನೇ ದಿನವೂ 10% ಗಿಂತ ಕೆಳಗಿದೆ.
ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಡಿಯಲ್ಲಿ ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ -19 ಲಸಿಕೆ ಡೋಸ್ ಗಳ ಸಂಖ್ಯೆ ಇಂದು 20.89 ಕೋಟಿ ದಾಟಿದೆ. ಅಮೆರಿಕಾದ ಬಳಿಕ 20 ಕೋಟಿ ಲಸಿಕೆ ಗುರಿಯನ್ನು ಸಾಧಿಸಿದ ಎರಡನೇ ರಾಷ್ಟ್ರ ಭಾರತವಾಗಿದೆ.
ಇಂದು ಬೆಳಿಗ್ಗೆ 7 ಗಂಟೆಯವರೆಗಿನ ತಾತ್ಕಾಲಿಕ ವರದಿಯ ಪ್ರಕಾರ 29,72,971 ಅಧಿವೇಶನಗಳ ಮೂಲಕ ಒಟ್ಟು 20,89,02,445 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ.
ಅದರ ವಿವರ ಇಂತಿದೆ.
ಎಚ್.ಸಿ.ಡಬ್ಲ್ಯು.ಗಳು
|
1ನೇ ಡೋಸ್
|
98,43,534
|
2ನೇ ಡೋಸ್
|
67,60,010
|
ಎಫ್.ಎಲ್.ಡಬ್ಲ್ಯು.ಗಳು
|
1ನೇ ಡೋಸ್
|
1,54,62,813
|
2ನೇ ಡೋಸ್
|
84,63,622
|
18 ರಿಂದ 44 ವರ್ಷದೊಳಗಿನ ವಯೋಮಾನದ ಗುಂಪು
|
1ನೇ ಡೋಸ್
|
1,67,66,581
|
|
2ನೇ ಡೋಸ್
|
298
|
45ರಿಂದ 60 ವರ್ಷದವರೆಗಿನ ವಯೋಮಾನದ ಗುಂಪು
|
1ನೇ ಡೋಸ್
|
6,45,90,833
|
2ನೇ ಡೋಸ್
|
1,03,52,228
|
60 ವರ್ಷಕ್ಕಿಂತ ಮೇಲ್ಪಟ್ಟವರು.
|
1ನೇ ಡೋಸ್
|
5,81,15,492
|
2ನೇ ಡೋಸ್
|
1,85,47,034
|
ಒಟ್ಟು
|
20,89,02,445
|
***
(Release ID: 1722739)
Visitor Counter : 211
Read this release in:
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam