ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಸುಂದರಲಾಲ್ ಬಹುಗುಣ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ.
ಪ್ರಕಟಣಾ ದಿನಾಂಕ:
21 MAY 2021 1:56PM by PIB Bengaluru
ಪ್ರಖ್ಯಾತ ಪರಿಸರವಾದಿ ಶ್ರೀ ಸುಂದರಲಾಲ್ ಬಹುಗುಣ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಶ್ರೀ ಸುಂದರಲಾಲ್ ಬಹುಗುಣ ಜೀ ಅವರ ನಿಧನ ನಮ್ಮ ದೇಶಕ್ಕೆ ಬಲು ದೊಡ್ಡ ನಷ್ಟ, ಅವರು ನಿಸರ್ಗದೊಂದಿಗೆ ಸೌಹಾರ್ದದಿಂದ ಬದುಕುವ ನಮ್ಮ ಶತಮಾನಗಳಷ್ಟು ಹಳೆಯ ಮೌಲ್ಯಯುತ ಗುಣಗಳನ್ನು ಸ್ಪಷ್ಟಪಡಿಸಿದವರು. ಅವರ ಸರಳತೆ ಮತ್ತು ಅನುಭೂತಿಯ ಸ್ಪೂರ್ತಿಯನ್ನು ಎಂದೂ ಮರೆಯಲಾಗದು. ಅವರ ಕುಟುಂಬ ಮತ್ತು ಅವರ ಅಭಿಮಾನಿಗಳೊಂದಿಗೆ ನಾನೂ ದುಃಖದಲ್ಲಿ ಭಾಗಿ. ಓಂ ಶಾಂತಿ” ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1720741)
ವಿಸಿಟರ್ ಕೌಂಟರ್ : 215
ಪ್ರಕಟಣೆಯನ್ನು ಇದರಲ್ಲಿ ಓದಿ:
Tamil
,
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam