ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಪ್ರಾರಂಭವಾದ ಹೊಸ ʻಏಮ್ಸ್ʼಗಳು ರಾಜ್ಯಗಳಲ್ಲಿ ಕೋವಿಡ್ ಸೋಂಕಿಗೆ ಸುಧಾರಿತ ಚಿಕಿತ್ಸೆ ಒದಗಿಸುತ್ತಿವೆ
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ತೃತೀಯ ಹಂತದ ಆರೈಕೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಿವೆ
ಸಂಕೀರ್ಣ ಮ್ಯೂಕೊರ್‌ಮೈಕೊಸಿಸ್ ಸೋಂಕಿಗೂ ಚಿಕಿತ್ಸೆ ನೀಡಲು ಸಮರ್ಥವಾಗಿವೆ
Posted On:
19 MAY 2021 9:28AM by PIB Bengaluru
ತೃತೀಯ ಹಂತದ ಆರೈಕೆ ಆಸ್ಪತ್ರೆಗಳ ಲಭ್ಯತೆಯಲ್ಲಿನ ಅಸಮತೋಲನವನ್ನು ಪರಿಹರಿಸಲು ಮತ್ತು ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಸುಧಾರಿಸಲು ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಸ್ವಾಸ್ಥ್ಯಸುರಕ್ಷಾ ಯೋಜನೆಯನ್ನು (ಪಿಎಂಎಸಸ್ಎಸ್ವೈ) ಆಗಸ್ಟ್ 2003ರಲ್ಲಿ ಘೋಷಿಸಲಾಯಿತು.
ಹಿಂದುಳಿದ ರಾಜ್ಯಗಳಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಸೌಲಭ್ಯವನ್ನು ಒದಗಿಸಬೇಕೆಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸಿನಿಂದಾಗಿ ಈ ಯೋಜನೆಗೆ ಹೊಸ ಇಂಬು ದೊರೆಯಿತು. ಇದರ ಅಂಗವಾಗಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಅನೇಕ ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು (ಏಮ್ಸ್) ಸ್ಥಾಪಿಸಲಾಗುತ್ತಿದೆ. ಇಲ್ಲಿಯವರೆಗೆ ಈ ಯೋಜನೆಯಡಿ 22 ಹೊಸ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ ಭೋಪಾಲ್, ಭುವನೇಶ್ವರ, ಜೋಧ್ಪುರ, ಪಟನಾ, ರಾಯ್ಪುರ ಮತ್ತು ಹೃಷಿಕೇಶದ ಆರು ಏಮ್ಸ್ಗಳು ಈಗಾಗಲೇ ಸಂಪೂರ್ಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಏಳು ಏಮ್ಸ್ ಗಳಲ್ಲಿ ಒಪಿಡಿ ಸೌಲಭ್ಯ ಮತ್ತು ಎಂಬಿಬಿಎಸ್ ತರಗತಿಗಳು ಪ್ರಾರಂಭವಾಗಿವೆ. ಇನ್ನೂ ಐದು ಸಂಸ್ಥೆಗಳಲ್ಲಿ ಕೇವಲ ಎಂಬಿಬಿಎಸ್ ತರಗತಿಗಳು ಮಾತ್ರ ಪ್ರಾರಂಭವಾಗಿವೆ.
ʻಪಿಎಂಎಸ್ಎಸ್ವೈʼ ಅಡಿಯಲ್ಲಿ ಸ್ಥಾಪಿಸಲಾದ ಅಥವಾ ಸ್ಥಾಪಿಸಲಾಗುತ್ತಿರುವ ಈ ಪ್ರಾದೇಶಿಕ ʻಏಮ್ಸ್ʼಗಳು, ಕಳೆದ ವರ್ಷದ ಆರಂಭದಲ್ಲಿ ಶುರುವಾದ ಕೋವಿಡ್ ಸಾಂಕ್ರಾಮಿಕದ ಆರಂಭ ಆದಾಗಿನಿಂದಲೂ ಅದರ ನಿರ್ವಹಣೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿವೆ. ಆರೋಗ್ಯ ಮೂಲಸೌಕರ್ಯ ದುರ್ಬಲವಾಗಿರುವ ಪ್ರದೇಶಗಳಿಗೆ ಅವುಗಳು ಸೇವೆ ಸಲ್ಲುಸುತ್ತಿದ್ದು, ಈ ನಿಟ್ಟಿನಲ್ಲಿ ನೋಡಿದಾಗ ಅವುಗಳ ಕೊಡುಗೆ ಮಹತ್ವದ್ದಾಗಿದೆ.
ಈ ವೈದ್ಯಕೀಯ ಸಂಸ್ಥೆಗಳು ತಮ್ಮ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ, ಎರಡನೇ ಅಲೆಯ ವೇಳೆಯೂ ಸವಾಲಿಗೆ ಸಮರ್ಥವಾಗಿ ಸ್ಪಂದಿಸಿವೆ. ಮಧ್ಯಮ ಮತ್ತು ತೀವ್ರ ಮಟ್ಟದ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆ ಸಾಮರ್ಥ್ಯವನ್ನು ವಿಸ್ತರಿಸುವ ಮೂಲಕ ಎರಡನೇ ಅಲೆಯ ಸವಾಲಿಗೆ ಸೂಕ್ತರೀತಿಯಲ್ಲಿ ಸ್ಪಂದಿಸಿವೆ. ಏಪ್ರಿಲ್ 2021ರ ಎರಡನೇ ವಾರದಿಂದ ಪ್ರಾರಂಭಿಸಿ, ಇದುವರೆಗೂ ಕೋವಿಡ್ ಚಿಕಿತ್ಸೆಗಾಗಿ ಮೀಸಲಾದ 1,300ಕ್ಕೂ ಹೆಚ್ಚು ಆಕ್ಸಿಜನ್ ಹಾಸಿಗೆಗಳು ಮತ್ತು ಸುಮಾರು 530 ಐಸಿಯು ಹಾಸಿಗೆಗಳನ್ನು ಈ ಸಂಸ್ಥೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಈ ಸಂಸ್ಥೆಗಳಲ್ಲಿ 1,900 ಆಮ್ಲಜನಕ ಹಾಸಿಗೆಗಳು ಮತ್ತು 900 ಐಸಿಯು ಹಾಸಿಗೆಗಳು ಜನರಿಗೆ ಲಭ್ಯವಿವೆ. ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಏಪ್ರಿಲ್-ಮೇ, 2021ರ ಅವಧಿಯಲ್ಲಿ ರಾಯ್ಬರೇಲಿ ಮತ್ತು ಗೋರಖ್ಪುರದ ʻಏಮ್ಸ್ʼನಲ್ಲೂ ಕೋವಿಡ್ ಚಿಕಿತ್ಸಾ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದೆ. ಇವುಗಳು ಉತ್ತರ ಪ್ರದೇಶ ರಾಜ್ಯದ ಫತೇಪುರ್, ಬಾರಾಬಂಕಿ, ಕೌಶಂಬಿ, ಪ್ರತಾಪಗಢ, ಸುಲ್ತಾನ್ಪುರ್, ಅಂಬೇಡ್ಕರ್ ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್ ಗಂಜ್, ಕುಶಿನಗರ್, ದಿಯೋರಿಯಾ, ಬಲ್ಲಿಯಾ, ಮವು ಮತ್ತು ಅಜಮ್ಗಢದಂತಹ ದೂರದ ಜಿಲ್ಲೆಗಳ ರೋಗಿಗಳಿಗೆ ಸಕ್ರಿಯಾತ್ಮಕವಾಗಿ ಸೇವೆ ಸಲ್ಲಿಸಲು ಸಹಾಯ ಮಾಡಿವೆ.
ಹೊಸ ʻಏಮ್ಸ್ʼನಲ್ಲಿ ಮೀಸಲಿರಿಸಲಾದ ಕೋವಿಡ್ ಹಾಸಿಗೆಗಳ ಪ್ರಸ್ತುತ ಲಭ್ಯತೆಯು ಹೀಗಿದೆ:
ಕ್ರಮ.ಸಂ.
|
ಸಂಸ್ಥೆ
|
ಹೊಸ ʻಏಮ್ಸ್ʼನಲ್ಲಿ ಮೀಸಲಾದ ಕೋವಿಡ್ ಹಾಸಿಗೆಗಳ ಪ್ರಸ್ತುತ ಲಭ್ಯತೆ
|
ಐಸಿಯುಯೇತರ ಆಕ್ಸಿಜನ್ ಹಾಸಿಗೆಗಳು
|
ವೆಂಟಿಲೇಟರ್ ಸೇರಿದಂತೆ ಐಸಿಯು ಹಾಸಿಗೆಗಳು
|
1
|
ಏಮ್ಸ್, ಭುವನೇಶ್ವರ
|
295
|
62
|
2
|
ಏಮ್ಸ್, ಭೋಪಾಲ್
|
300
|
200
|
3
|
ಏಮ್ಸ್, ಜೋಧಪುರ
|
120
|
190
|
4
|
ಏಮ್ಸ್, ಪಟನಾ
|
330
|
60
|
5
|
ಏಮ್ಸ್, ರಾಯ್ಪುರ
|
406
|
81
|
6
|
ಏಮ್ಸ್, ಹೃಷಿಕೇಶ್
|
150
|
250
|
7
|
ಏಮ್ಸ್, ಮಂಗಳಗಿರಿ
|
90
|
10
|
8
|
ಏಮ್ಸ್, ನಾಗ್ಪುರ
|
125
|
10
|
9
|
ಏಮ್ಸ್, ರಾಯ್ಬರೇಲಿ
|
30
|
20
|
10
|
ಏಮ್ಸ್, ಬಟಿಂಡಾ
|
45
|
25
|
11
|
ಏಮ್ಸ್, ಬೀಬಿನಗರ
|
24
|
0
|
12
|
ಏಮ್ಸ್, ಗೋರಖ್ಪುರ
|
10
|
0
|
|
ಒಟ್ಟು
|
1925
|
908
|
ಭಾರತ ಸರಕಾರವು ವೆಂಟಿಲೇಟರ್ಗಳು, ಆಕ್ಸಿಜನ್ ಕಾನ್ಸಂಟ್ರೇಟರ್ಗಳು, ಆಮ್ಲಜನಕ ಸಿಲಿಂಡರ್ಗಳು ಮುಂತಾದ ವೈದ್ಯಕೀಯ ಉಪಕರಣಗಳು ಮತ್ತು ಎನ್-95 ಮಾಸ್ಕ್ಗಳು, ಪಿಪಿಇ ಕಿಟ್ಗಳಂತಹ ವೈಯಕ್ತಿಕ ಸುರಕ್ಷತಾ ಸಾಮಗ್ರಿ ಹಾಗೂ ಫಾವಿಪಿರಾವೀರ್, ರೆಮ್ಡೆಸಿವಿರ್ ಮತ್ತು ಟೊಸಿಲಿಜುಮ್ಯಾಬ್ ಮುಂತಾದ ಅಗತ್ಯ ಔಷಧಗಳ ಹಂಚಿಕೆಯ ಮೂಲಕ ಕೋವಿಡ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಈ ಹೊಸ ʻಏಮ್ಸ್ʼಗಳ ಸಾಮರ್ಥ್ಯವನ್ನು ಬಲಪಡಿಸುತ್ತಿದೆ.
ತೃತೀಯ ಹಂತದ ಆರೈಕೆ ಕೇಂದ್ರಗಳಾಗಿ ಈ ಹೊಸ ಪ್ರಾದೇಶಿಕ ʼಏಮ್ಸ್ʼಗಳು, ಕೋವಿಡ್ ರೋಗಿಗಳ ಪೈಕಿ ಡಯಾಲಿಸಿಸ್ ಅಗತ್ಯವಿರುವಂಥವರಿಗೆ ಅಥವಾ ಗಂಭೀರ ಹೃದಯ ಕಾಯಿಲೆ ಇರುವವರು, ಗರ್ಭಿಣಿಯರು, ಮಕ್ಕಳ ಪ್ರಕರಣಗಳಲ್ಲೂ ನಿರ್ಣಾಯಕ ಕೋವಿಡೇತರ ಆರೋಗ್ಯ ಸೇವೆಗಳನ್ನೂ ಒದಗಿಸುತ್ತಿವೆ.
ಏಮ್ಸ್ ರಾಯ್ಪುರ ಒಂದರಲ್ಲೇ 2021 ಮಾರ್ಚ್ನಿಂದ ಮೇ 17, 2021ರವರೆಗೆ ಒಟ್ಟು 9664 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸಂಸ್ಥೆಯು 362 ಕೋವಿಡ್ ಪಾಸಿಟಿವ್ ಮಹಿಳೆಯರಿಗೆ ಆರೈಕೆ ಒದಗಿಸಿದೆ, ಅವರಲ್ಲಿ 223 ಮಹಿಳೆಯರ ಸುರಕ್ಷಿತ ಹೆರಿಗೆಗೆ ಸಹಾಯ ಮಾಡಿದೆ. 402 ಕೋವಿಡ್ ಸೋಂಕಿತ ಮಕ್ಕಳಿಗೆ ಮಕ್ಕಳ ಆರೈಕೆ ಒದಗಿಸಲಾಗಿದೆ. ತೀವ್ರ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ 898 ಕೋವಿಡ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದರೆ, 272 ರೋಗಿಗಳಿಗೆ ಅವರ ಡಯಾಲಿಸಿಸ್ ಗೆ ನೆರವು ನೀಡಲಾಗಿದೆ.
ಪ್ರಸ್ತುತ ದೇಶದ ವಿವಿಧ ರಾಜ್ಯಗಳಿಂದ ಮ್ಯೂಕೊರ್‌ಮೈಕೊಸಿಸ್ ಪ್ರಕರಣಗಳು ವರದಿಯಾಗುತ್ತಿವೆ. ಸಾಮಾನ್ಯವಾಗಿ ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿರುವ ಜನರಲ್ಲಿ ಮತ್ತು ಮಧುಮೇಹ ಹೊಂದಿರುವವರಲ್ಲಿ ಈ ಸೋಂಕು ಕಂಡುಬರುತ್ತದೆ. ಮಧುಮೇಹ ಇದ್ದವರಿಗೆ (ಕೋ-ಮೊರ್ಬಿಡಿಟಿ), ಕೋವಿಡ್ ಚಿಕಿತ್ಸೆಗಾಗಿ ದೇಹದ ರೋಗನಿರೋಧಕ-ಸ್ಪಂದನೆಯನ್ನು ಬದಲಾಯಿಸುವಂತಹ ಸ್ಟೀರಾಯ್ಡ್ಗಳ ಬಳಕೆಯ ಅಗತ್ಯವಿದೆ. ಈ ಅಪರೂಪದ ಸೋಂಕಿಗೆ ಚಿಕಿತ್ಸೆಯು ತುಂಬಾ ಸಂಕೀರ್ಣವಾಗಿದೆ. ಆದಾಗ್ಯೂ, ಈ ಸೋಂಕಿಗೂ ಸಹ ರಾಯ್ಪುರ, ಜೋಧಪುರ, ಪಟನಾ, ರಿಷಿಕೇಶ್, ಭುವನೇಶ್ವರ ಮತ್ತು ಭೋಪಾಲ್ನಲ್ಲಿ ʻಏಮ್ಸ್ʼನಿಂದ ಪರಿಣಾಮಕಾರಿ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಜೊತೆಗೆ ಇನ್ನೂ ಸಂಪೂರ್ಣವಾಗಿ ಕಾರ್ಯಾರಂಭ ಮಾಡದ ಇತರೆ ಏಮ್ಸ್ಗಳಲ್ಲೂ ಕೆಲವು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.
***
(Release ID: 1719912)
Visitor Counter : 287
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Odia
,
Tamil
,
Telugu
,
Malayalam