ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಲಸಿಕೆ ಪ್ರಮಾಣ (ಡೋಸ್) ಪೂರೈಕೆ ಲಭ್ಯತೆಯ ಬಗ್ಗೆ ಭಾರತ ಸರ್ಕಾರವು 2021 ರ ಜೂನ್ 15 ರವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಗಡ ಮಾಹಿತಿಯನ್ನು ಒದಗಿಸುತ್ತದೆ
ಕೋವಿಡ್ ಲಸಿಕೆಗಳ ನೀಡುವುದಕ್ಕಾಗಿ ಜಿಲ್ಲಾವಾರು, ಕೋವಿಡ್ ಲಸಿಕಾ ಕೇಂದ್ರ (ಸಿವಿಸಿ) ಸಮಂಜಸ ಯೋಜನೆಯನ್ನು ಸಿದ್ಧಪಡಿಸಲು ಮತ್ತು ಅದನ್ನು ಪ್ರಚಾರ ಮಾಡಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ
ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ತಡೆಗಟ್ಟಲು ಸಿವಿಸಿಗಳು ಮುಂಚಿತವಾಗಿ ಕೋವಿನ್ನಲ್ಲಿ ವೇಳಾಪಟ್ಟಿಗಳನ್ನು ಪ್ರಕಟಿಸಲಿವೆ
Posted On:
19 MAY 2021 12:13PM by PIB Bengaluru
ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕಾ ತಂತ್ರ ವನ್ನು ಮೇ 1, 2021 ರಿಂದ ಜಾರಿಗೆ ತರಲಾಗಿದೆ. ಇದರ ಭಾಗವಾಗಿ, ಪ್ರತಿ ತಿಂಗಳು ಒಟ್ಟು ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ತೆರವುಗೊಳಿಸಿದ ಲಸಿಕೆ ಪ್ರಮಾಣವನ್ನು 50% ಸರ್ಕಾರವು ಖರೀದಿಸುತ್ತದೆ ನಂತರ ಭಾರತ ಸರ್ಕಾರದ ವತಿಯಿಂದ ಮೊದಲಿನಂತೆಯೆ ರಾಜ್ಯಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುವುದು. ಇದಲ್ಲದೆ ಪ್ರತಿ ತಿಂಗಳು ಬಾಕಿ ಇರುವ ಸಿಡಿಎಲ್ 50% ಲಸಿಕೆಯು ರಾಜ್ಯ ಸರ್ಕಾರಗಳ ಮತ್ತು ಖಾಸಗಿ ಆಸ್ಪತ್ರೆಗಳ ನೇರ ಸಂಗ್ರಹಣೆಗೆ ಲಭ್ಯವಿರುತ್ತವೆ.
ಕೇಂದ್ರ ಆರೋಗ್ಯ ಸಚಿವಾಲಯವು ತಿಂಗಳ ಎರಡು ಪಾಕ್ಷಿಕದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಬೇಕಾದ ಕೋವಿಡ್ ಲಸಿಕೆ ಡೋಸ್ ಗಳ ಲಭ್ಯತೆಯ ಬಗ್ಗೆ ಮುಂಗಡ ಮಾಹಿತಿಯನ್ನು ಒದಗಿಸುತ್ತಿದೆ ಮತ್ತು ಉತ್ಪಾದಕರಿಂದ ರಾಜ್ಯಗಳು ಮತ್ತು ಖಾಸಗಿಯವರು ರಾಜ್ಯಗಳಿಂದ ನೇರ ಸಂಗ್ರಹಣೆಗೆ ಲಭ್ಯವಿರುವ ಪ್ರಮಾಣವನ್ನು ಸಹ ನೀಡುತ್ತಿದೆ. ಆಸ್ಪತ್ರೆಗಳು. ಕೋವಿಡ್-19ರ ಪರಿಸ್ಥಿತಿ ಕುರಿತು ನಿನ್ನೆ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಧಾನಮಂತ್ರಿ ಈ ವಿಷಯವನ್ನು ಹೇಳಿದರು.
ಕೋವಿಡ್ ಲಸಿಕೆ ಪ್ರಮಾಣವನ್ನು (ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎರಡಕ್ಕೂ) ಮೇ 2021 ರಲ್ಲಿ ಮತ್ತು ಜೂನ್ 2021 ರ ಜೂನ್ ಮೊದಲ ಹದಿನೈದು ದಿನಗಳಲ್ಲಿ ಭಾರತ ಸರ್ಕಾರದ ಚಾನೆಲ್ನಿಂದ (ಇದು ಉಚಿತವಾಗಿ ಲಭ್ಯವಿದೆ), ಮತ್ತು ಲಸಿಕೆ ಪ್ರಮಾಣಗಳ ಲಭ್ಯತೆ (ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡಕ್ಕೂ) ಮೇ ಮತ್ತು ಜೂನ್ 2021 ರ ತಿಂಗಳುಗಳಲ್ಲಿ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಸಂಗ್ರಹಿಸಬಹುದು. ಈ ಮುನ್ಸೂಚನೆಯು ರಾಜ್ಯಗಳು ಮಾಡುವ ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾದ ಯೋಜನೆಯನ್ನು ಶಕ್ತಗೊಳಿಸುತ್ತದೆ.
ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರ ಮುಂಚಿತವಾಗಿಯೇ ನೀಡುವ ಸೂಚನೆಯ ಪ್ರಕಾರ, ಒಟ್ಟು 5 ಕೋಟಿ 86 ಲಕ್ಷ ಮತ್ತು 29 ಸಾವಿರ ಡೋಸೇಜ್ ಗಳನ್ನು ಭಾರತ ಸರ್ಕಾರವು 2021 ಮೇ 1 ರಿಂದ 2021 ಜೂನ್ 15 ರವರೆಗೆ ಉಚಿತವಾಗಿ ನೀಡಲಿದೆ.
ಇದಲ್ಲದೆ, ಲಸಿಕೆ ತಯಾರಕರಿಂದ ಪಡೆದ ಮಾಹಿತಿಯ ಪ್ರಕಾರ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ನೇರ ಸಂಗ್ರಹಣೆಗಾಗಿ ಒಟ್ಟು 20 ಕೋಟಿ, 87 ಲಕ್ಷ ಮತ್ತು 55 ಸಾವಿರ ಡೋಸ್ ಗಳು ಜೂನ್ 2021 ರ ಅಂತ್ಯದವರೆಗೆ ಲಭ್ಯವಿರುತ್ತವೆ.
ಜೂನ್ 2021 ರವರೆಗೆ ಸ್ಪಷ್ಟ ಪೂರೈಕೆ ಸಮಯದೊಂದಿಗೆ ಮೇಲಿನ ಲಸಿಕೆಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮತ್ತು ಕೋವಿಡ್-19 ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಲಭ್ಯವಿರುವ ಪ್ರಮಾಣಗಳ (ಡೋಸ್) ಸಮರ್ಥ ಮತ್ತು ನ್ಯಾಯಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕೆಳಗಿನಂತೆ ಸೂಚಿಸಲಾಗಿದೆ:
- ಕೋವಿಡ್-19 ಲಸಿಕೆಯನ್ನು ಕೊಡುವುದಕ್ಕಾಗಿ ಜಿಲ್ಲಾವಾರು, ಕೋವಿಡ್ ಲಸಿಕಾ ಕೇಂದ್ರ (ಸಿವಿಸಿ) - ಯೋಜನೆಯನ್ನು ರಚಿಸುವುದು.
- ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಇಂತಹ ಯೋಜನೆಯ ಪ್ರಸಾರಕ್ಕಾಗಿ ಅನೇಕ ಮಾಧ್ಯಮ ವೇದಿಕೆಗಳನ್ನು ಬಳಸುವುದು.
- ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಿವಿಸಿಗಳು ಕೋವಿನ್ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಲಸಕಾ ವೇಳಾ ಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸುವುದು.
- ರಾಜ್ಯಗಳು ಮತ್ತು ಖಾಸಗಿ ಸಿವಿಸಿಗಳು ಒಂದೇ ದಿನದ ಲಸಕಾ ವೇಳಾ ಪಟ್ಟಿಯನ್ನು ಪ್ರಕಟಿಸುವುದನ್ನು ತಡೆಯುವುದು.
- ಸಿವಿಸಿಗಳಲ್ಲಿ ಯಾವುದೇ ಜನದಟ್ಟಣೆ ಇಲ್ಲದಿರುವುದನ್ನು ಎಂದು ಖಚಿತಪಡಿಸಿಕೊಳ್ಳಬೇಕು.
- ಕೋವಿನ್ನಲ್ಲಿ ಕಾಯ್ದಿರಿಸುವ ಪ್ರಕ್ರಿಯೆಯು ಸರಾಗವಾಗಿರಬೇಕು ಎಂದು ಖಚಿತಪಡಿಸಿಕೊಳ್ಳಬೇಕು.
ಕೋವಿಡ್-19 ಲಸಿಕೆ ಹಾಕುವುದಕ್ಕೆ 2021 ರ ಜೂನ್ 15 ರವರೆಗೆ ಮುಂಗಡ ಯೋಜನೆಯನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.
ಕೋವಿಡ್-19 ರಿಂದ ದೇಶದ ಅತ್ಯಂತ ದುರ್ಬಲ ಜನರನ್ನು ರಕ್ಷಿಸುವ ಸಾಧನವಾಗಿ ಲಸಿಕಾ ಕಾರ್ಯಕ್ರಮವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ.
***
(Release ID: 1719876)
Visitor Counter : 279
Read this release in:
Malayalam
,
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu