ಪ್ರಧಾನ ಮಂತ್ರಿಯವರ ಕಛೇರಿ

ಟೈಮ್ಸ್ ಸಮೂಹದ ಅಧ್ಯಕ್ಷೆ ಶ್ರೀಮತಿ ಇಂದು ಜೈನ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 13 MAY 2021 11:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಟೈಮ್ಸ್ ಸಮೂಹದ ಅಧ್ಯಕ್ಷೆ ಶ್ರೀಮತಿ ಇಂದು ಜೈನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ನಲ್ಲಿ, ಶ್ರೀ ಮೋದಿ ಅವರು: "ಟೈಮ್ಸ್ ಸಮೂಹದ ಅಧ್ಯಕ್ಷೆ ಶ್ರೀಮತಿ ಇಂದು ಜೈನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ತಮ್ಮ ಸಮುದಾಯ ಸೇವಾ ಉಪಕ್ರಮಗಳು, ಭಾರತದ ಪ್ರಗತಿಯ ಬಗ್ಗೆ ಅವರಿಗಿದ್ದ  ಉತ್ಸಾಹ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಆಳವಾಗಿ ಬೇರೂರಿದ್ದ ಆಸಕ್ತಿಯಿಂದ ಸ್ಮರಣೆಯಲ್ಲಿರುತ್ತಾರೆ. ನಾನು ಅವರೊಂದಿಗಿನ ನನ್ನ ಭೇಟಿಗಳನ್ನು ಸ್ಮರಿಸುತ್ತೇನೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ." ಎಂದು ತಿಳಿಸಿದ್ದಾರೆ.

***



(Release ID: 1718504) Visitor Counter : 120