ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೋರಾಟದಲ್ಲಿ ಭಾರತಕ್ಕೆ ಜಾಗತಿಕವಾಗಿ ಆಮ್ಲಜನಕ ಸಾಂದ್ರಕಗಳು, ಸಿಲಿಂಡರ್ ಗಳು, ಉತ್ಪಾದನಾ ಘಟಕಗಳು ಮತ್ತು 3 ಲಕ್ಷ ರೆಮೆಡಿಸಿವಿಯರ್ ವೈಯಲ್ಸ್ ಗಳ ಪೂರೈಕೆ : ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19 ಹೋರಾಟಕ್ಕೆ ಚುರುಕು
ಭಾರತದ ಒಟ್ಟಾರೆ ಲಸಿಕೆ ವ್ಯಾಪ್ತಿ 17 ಕೋಟಿ ಡೋಸ್ ಗೆ: ಸಾಧನೆಯಲ್ಲಿ ಹೊಸ ಹೆಗ್ಗುರುತು
17 ಕೋಟಿ ಲಸಿಕೆ ಡೋಸ್ ಗಳನ್ನು ನೀಡಿಕೆ: ಜಾಗತಿಕವಾಗಿ ವೇಗದಿಂದ ಮುನ್ನಡೆದ ಭಾರತ
18-44 ವಯೋಮಿತಿಯ 20.31 ಲಕ್ಷ ಫಲಾನುಭವಿಗಳಿಗೆ ಲಸಿಕೆ
ಕಳೆದ 10 ದಿನಗಳಲ್ಲಿ ಸರಾಸರಿ 3.28 ಲಕ್ಷ ಸೋಂಕಿತರ ಚೇತರಿಕೆ
Posted On:
10 MAY 2021 10:49AM by PIB Bengaluru
ಜಾಗತಿಕ ನೆರವಿನ ಮೂಲಕ 6,738 ಆಮ್ಲಜನಕ ಸಾಂದ್ರಕಗಳು, 3,856 ಆಮ್ಲಜನಕ ಸಿಲಿಂಡರ್ ಗಳು, 16 ಆಮ್ಲಜನಕ ಉತ್ಪಾದನಾ ಘಟಕಗಳು, 4,668 ವೆಂಟಿಲೇಟರ್ ಗಳು/ ಬಿ ಪ್ಯಾಪ್/ ಸಿ ಪ್ಯಾಪ್ ಮತ್ತು 3 ಲಕ್ಷಕ್ಕೂ ಹೆಚ್ಚು ರೆಮೆಡಿಸಿವಿಯರ್ ವೈಯಲ್ಸ್ ಗಳನ್ನು ಭಾರತ ಸ್ವೀಕರಿಸಿದೆ. ಇದನ್ನು ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಿದ್ದು, ಮೂಲ ಸೌಕರ್ಯ ಹೆಚ್ಚಳಕ್ಕೆ ನೆರವಾಗಿದೆ. ಕಸ್ಟಮ್ಸ್ ನ ತ್ವರಿತ ಅನುಮತಿ ಪಡೆದು ವಾಯು ಮತ್ತು ರಸ್ತೆ ಮಾರ್ಗದ ಮೂಲಕ ತ್ವರಿತವಾಗಿ ತಲುಪಿಸುತ್ತಿರುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿದೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ದೇಶಾದ್ಯಂತ 3 ನೇ ಹಂತದ ಲಸಿಕಾ ಅಭಿಯಾನ ಮುಂದುವರೆದಿದ್ದು, ಕೇವಲ 114 ದಿನಗಳಲ್ಲಿ 17 ಕೋಟಿ ಕೋವಿಡ್ – 19 ಲಸಿಕೆ ಡೋಸ್ ಗಳನ್ನು ದಾಟಿ ಹೆಗ್ಗುರುತು ದಾಖಲಿಸಿದೆ. ಈ ಮೂಲಕ ಲಸಿಕಾ ಅಭಿಯಾನ ಮತ್ತಷ್ಟು ವಿಸ್ತಾರಗೊಂಡಿದೆ. ಜಾಗತಿಕವಾಗಿ ಅತ್ಯಂತ ತ್ವರಿತವಾಗಿ 17 ಕೋಟಿ ಕೋವಿಡ್ ಲಸಿಕೆ ಹಾಕಿದ ಸಾಧನೆಯನ್ನು ಭಾರತ ಮಾಡಿದೆ. ಚೈನಾ 119 ದಿನಗಳಲ್ಲಿ ಮತ್ತು ಅಮೆರಿಕ 115 ದಿನಗಳಲ್ಲಿ ಈ ಸಾಧನೆ ಮಾಡಿತ್ತು.
ಇಂದು ಬೆಳಿಗ್ಗೆ 7 ಗಂಟೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 24,70, 799 ಅವಧಿಯಲ್ಲಿ 17,01,76,603 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಈ ಪೈಕಿ 95,47,102 ಎಚ್.ಸಿ.ಡಬ್ಲ್ಯೂಗಳು ಮೊದಲ ಡೋಸ್ ಪಡೆದಿದ್ದಾರೆ ಮತ್ತು 64,71,385 ಎಚ್.ಸಿ.ಡಬ್ಲ್ಯೂಗಳು ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. 1,39,72,612 ಎಫ್.ಎಲ್.ಡಬ್ಲ್ಯೂ ಗಳು [ಮೊದಲ ಡೋಸ್], 77,55,283 ಎಫ್.ಎಲ್.ಡಬ್ಲ್ಯೂ ಗಳು [ಎರಡನೇ ಡೋಸ್], 18-45 ವಯೋಮಿತಿಯ 20,31,854 ಫಲಾನುಭವಿಗಳು [ಮೊದಲ ಡೋಸ್], 45 ರಿಂದ 60 ವಯೋಮಿತಿಯ 5,51,217 ಮಂದಿ [ಮೊದಲ ಡೋಸ್] ಮತ್ತು 65,61,851 ಮಂದಿ [ಎರಡನೇ ಡೋಸ್], 60 ವರ್ಷ ಮೇಲ್ಪಟ್ಟ ಫಲಾನುಭವಿಗಳು 5,36,74,082 ಮೊದಲ ಡೋಸ್ ಮತ್ತು 1,49,83,217 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
ಎಚ್.ಸಿ.ಡಬ್ಲ್ಯೂಗಳು
|
ಮೊದಲ ಡೋಸ್
|
95,47,102
|
ಎರಡನೇ ಡೋಸ್
|
64,71,385
|
ಎಫ್.ಎಲ್.ಡಬ್ಲ್ಯೂ ಗಳು
|
ಮೊದಲ ಡೋಸ್
|
1,39,72,612
|
ಎರಡನೇ ಡೋಸ್
|
77,55,283
|
18-44 ವಯೋಮಿತಿ
|
ಮೊದಲ ಡೋಸ್
|
20,31,854
|
45 ರಿಂದ 60 ವಯೋಮಿತಿ
|
ಮೊದಲ ಡೋಸ್
|
5,51,79,217
|
ಎರಡನೇ ಡೋಸ್
|
65,61,851
|
60 ವರ್ಷ ಮೇಲ್ಪಟ್ಟವರು
|
ಮೊದಲ ಡೋಸ್
|
5,36,74,082
|
ಎರಡನೇ ಡೋಸ್
|
1,49,83,217
|
|
ಒಟ್ಟು
|
17,01,76,603
|
ದೇಶದಲ್ಲಿ ಈವರೆಗೆ ನೀಡಲಾದ ಸಂಚಿತ ಪ್ರಮಾಣದಲ್ಲಿ 10 ರಾಜ್ಯಗಳ ಪಾಲು ಶೇ 66.79 ರಷ್ಟಿದೆ.
ಇಂದು 18-44 ವಯೋಮಿತಿಯ 2,46,269 ಫಲಾನುಭವಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 30 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 20,31,854 ಲಸಿಕೆ ಹಾಕಲಾಗಿದೆ. 18-44 ವಯೋಮಿತಿಯವರ ಲಸಿಕೆ ಮಾಹಿತಿ ಈ ಕೆಳಕಂಡ ಆವರನದಲ್ಲಿದೆ.
ಕ್ರಮ ಸಂಖ್ಯೆ
|
ರಾಜ್ಯಗಳು
|
ಒಟ್ಟು
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
|
904
|
2
|
ಆಂಧ್ರ ಪ್ರದೇಶ
|
520
|
3
|
ಅಸ್ಸಾಂ
|
80,796
|
4
|
ಬಿಹಾರ
|
88,743
|
5
|
ಚಂಡಿಘರ್
|
2
|
6
|
ಚತ್ತೀಸ್ ಘರ್
|
1,026
|
7
|
ದೆಹಲಿ
|
3,02,153
|
8
|
ಗೋವಾ
|
1,126
|
9
|
ಗುಜರಾತ್
|
2,94,785
|
10
|
ಹರ್ಯಾಣ
|
2,54,811
|
11
|
ಹಿಮಾಚಲ ಪ್ರದೇಶ
|
14
|
12
|
ಜಮ್ಮು ಮತ್ತು ಕಾಶ್ಮೀರ
|
28,658
|
13
|
ಜಾರ್ಖಂಡ್
|
82
|
14
|
ಕರ್ನಾಟಕ
|
10,782
|
15
|
ಕೇರಳ
|
209
|
16
|
ಲದ್ದಾಕ್
|
86
|
17
|
ಮಧ್ಯ ಪ್ರದೇಶ
|
29,322
|
18
|
ಮಹಾರಾಷ್ಟ್ರ
|
4,36,302
|
19
|
ಮೇಘಾಲಯ
|
2
|
20
|
ನಾಗಾಲ್ಯಾಂಡ್
|
2
|
21
|
ಒಡಿಶಾ
|
42,979
|
22
|
ಪುದುಚೇರಿ
|
1
|
23
|
ಪಂಜಾಬ್
|
3,531
|
24
|
ರಾಜಸ್ಥಾನ್
|
3,16,767
|
25
|
ತಮಿಳುನಾಡು
|
14,153
|
26
|
ತೆಲಂಗಾಣ
|
500
|
27
|
ತ್ರಿಪುರ
|
2
|
28
|
ಉತ್ತರ ಪ್ರದೇಶ
|
1,18,008
|
29
|
ಉತ್ತರಾಖಂಡ್
|
21
|
30
|
ಪಶ್ಚಿಮಬಂಗಾ
|
5,567
|
ಒಟ್ಟು
|
20,31,854
|
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6.8 ಲಕ್ಷ ಕೋವಿಡ್ ಲಸಿಕೆ ಹಾಕಲಾಗಿದೆ. ಲಸಿಕೆ ಅಭಿಯಾನದ 114 ದಿನದಂದು [ಮೇ 9, 2021] 5,685 ಅವಧಿಯಲ್ಲಿ 6,89,652 ಲಸಿಕೆ ಹಾಕಲಾಗಿದೆ. 4,05,325 ಮೊದಲ ಡೋಸ್ ಪಡೆದುಕೊಂಡಿದ್ದಾರೆ ಮತ್ತು 2,84,327 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
ದಿನಾಂಕ 9 ನೇ ಮೇ, 2021 (ದಿನ-114)
ಎಚ್.ಸಿ.ಡಬ್ಲ್ಯೂಗಳು
|
ಮೊದಲ ಡೋಸ್
|
4,897
|
ಎರಡನೇ ಡೋಸ್
|
7,192
|
ಎಫ್.ಎಲ್.ಡಬ್ಲ್ಯೂ ಗಳು
|
ಮೊದಲ ಡೋಸ್
|
26,082
|
ಎರಡನೇ ಡೋಸ್
|
21,599
|
18-44 ವಯೋಮಿತಿ
|
ಮೊದಲ ಡೋಸ್
|
2,46,269
|
45 to 60 ವಯೋಮಿತಿ
|
ಮೊದಲ ಡೋಸ್
|
92,769
|
ಎರಡನೇ ಡೋಸ್
|
1,38,198
|
60 ಮೇಲ್ಪಟ್ಟವರು
|
ಮೊದಲ ಡೋಸ್
|
35,308
|
ಎರಡನೇ ಡೋಸ್
|
1,17,338
|
ಒಟ್ಟು ಸಾಧನೆ
|
ಮೊದಲ ಡೋಸ್
|
4,05,325
|
ಎರಡನೇ ಡೋಸ್
|
2,84,327
|
ಭಾರತದಲ್ಲಿ ಒಟ್ಟು 1,86,71,222 ಚೇತರಿಸಿಕೊಂಡಿದ್ದಾರೆ. ರಾಷ್ಟ್ರೀಯ ಚೇತರಿಕೆ ದರ ಶೇ 82.39 ರಷ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 3,53,818 ಸೋಂಕಿತರು ಚೇತರಿಕೆ ಕಂಡಿದ್ದಾರೆ. ಹತ್ತು ರಾಜ್ಯಗಳ ಒಟ್ಟು ಚೇತರಿಕೆ ದರ ಶೇ 74.38 ರಷ್ಟಿದೆ.
ಕಳೆದ ಹತ್ತು ದಿನಗಳ ಅವಧಿಯಲ್ಲಿ ಸರಾಸರಿ 3.28 ಲಕ್ಷ ಪ್ರಕರಣಗಳ ಚೇತರಿಕೆ ದಾಖಲು
ಕಳೆದ 24 ಗಂಟೆಗಳಲ್ಲಿ 3,66,161 ಹೊಸ ಕೋವಿಡ್ ಸೋಂಕು ಪ್ರಕರಣಗಳು ದಾಖಲು. ಹತ್ತು ರಾಜ್ಯಗಳಲ್ಲಿ 24 ಗಂಟೆಗಳಲ್ಲಿ ಶೇ 73.91 ಲಕ್ಷ ಪ್ರಕರಣಗಳು ದಾಖಲು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 48,401 ಪ್ರಕರಣಗಳು, ನಂತರ ಕರ್ನಾಟಕ 47,930 ಪ್ರಕರಣಗಳು, ಕೇರಳದಲ್ಲಿ 35,801 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 37,45,237 ಕ್ಕೆ ತಲುಪಿದೆ. ಇದು ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಶೇ 16.53 ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 8,589 ಪ್ರಕರಣಗಳು ಇಳಿಕೆ ಕಂಡು ಬಂದಿವೆ. 13 ರಾಜ್ಯಗಳಿಂದ ಒಟ್ಟು ಸಕ್ರಿಯ ಪ್ರಕರಣಗಳ ಪಾಲು ಶೇ 82.89 ರಷ್ಟಿದೆ.
ರಾಷ್ಟ್ರೀಯ ಮರಣದರದಲ್ಲಿ ಇಳಿಕೆಯಾಗುತ್ತಿದೆ ಮತ್ತು ಪ್ರಸ್ತುತ ಶೇ 1.09 ರಷ್ಟಿದೆ. 24 ಗಂಟೆಗಳಲ್ಲಿ 3,754 ಸಾವುಗಳು ದಾಖಲಾಗಿವೆ. ಹತ್ತು ರಾಜ್ಯಗಳಲ್ಲಿ ಶೇ 72.86 ರಷ್ಟು ಹೊಸ ಮರಣಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು (572) ಸಾವು ಸಂಭವಿಸಿದ್ದು, ಕರ್ನಾಟಕದಲ್ಲಿ 490 ಮಂದಿ ಮೃತಪಟ್ಟಿದ್ದಾರೆ.
24 ಗಂಟೆಗಳಲ್ಲಿ ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಕೋವಿಡ್-19 ಸಾವುಗಳು ಸಂಭವಿಸಿಲ್ಲ. ಇವುಗಳೆಂದರೆ ಡಿ ಅಂಡ್ ಡಿ ಮತ್ತು ಡಿ ಅಂಡ್ ಎನ್, ಅರುಣಾಚಲ ಪ್ರದೇಶ ಮತ್ತು ಲಕ್ಷದ್ವೀಪ
(Release ID: 1717479)
Visitor Counter : 282
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam