ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆಗಳ ಪೂರೈಕೆಗಾಗಿ ಕೇಂದ್ರವು ಯಾವುದೇ ಹೊಸ ಖರೀದಿ ಆದೇಶ ನೀಡಿಲ್ಲ ಎಂದು ಆರೋಪಿಸಿರುವ ಮಾಧ್ಯಮ ವರದಿಗಳು ಸುಳ್ಳು ಮತ್ತು ಆಧಾರರಹಿತ

Posted On: 03 MAY 2021 1:50PM by PIB Bengaluru

ಕೋವಿಡ್-19 ಲಸಿಕೆಗಳ ಪೂರೈಕೆಗಾಗಿ ಕೇಂದ್ರವು ಯಾವುದೇ ಹೊಸ ಖರೀದಿ ಆದೇಶ ನೀಡಿಲ್ಲ ಎಂದು ಆರೋಪಿಸಿ ಕೆಲವು ಮಾಧ್ಯಮ ವರದಿಗಳು ಪ್ರಕಟವಾಗಿವೆ. ಎರಡು ಲಸಿಕಾ ತಯಾರಕ ಸಂಸ್ಥೆಗಳಿಗೆ (ಎಸ್ಐಐಗೆ 100 ದಶಲಕ್ಷ ಡೋಸ್ಗಳು ಮತ್ತು ಭಾರತ್ ಬಯೋಟೆಕ್ ಗೆ 20 ದಶಲಕ್ಷ ಡೋಸ್ಗಳು) 2021 ಮಾರ್ಚ್ನಲ್ಲಿ ಬೇಡಿಕೆ ಇರಿಸಿದ್ದೇ ಕೊನೆ, ಬಳಿಕ ಯಾವುದೇ ಬೇಡಿಕೆ ಇರಿಸಲಾಗಿಲ್ಲ ಎಂದು ವರದಿಗಳಲ್ಲಿ ಹೇಳಲಾಗಿದೆ.

ಮಾಧ್ಯಮ ವರದಿಗಳು ಸಂಪೂರ್ಣ ಸುಳ್ಳು ಮತ್ತು ವಾಸ್ತವಾಂಶಗಳಿಂದ ದೂರವಾದಂಥವು.

ಮೂಲಕ ಸ್ಪಷ್ಟಪಡಿಸುವುದೇನೆಂದರೆ ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಕೋವಿಶೀಲ್ಡ್ ಲಸಿಕೆಯ 11 ಕೋಟಿ ಡೋಸ್ಗಳಿಗಾಗಿ 28.04.2021ರಂದು ʻಸೀರಮ್ ಇನ್ಸ್ಟಿಟ್ಯೂಟ್ಆಫ್ ಇಂಡಿಯಾʼಗೆ(ಎಸ್ಐಐ) 1732.50 ಕೋಟಿ  ರೂ.ಗಳ (ಟಿಡಿಎಸ್ ನಂತರ 1699.50  ಕೋಟಿ ರೂ.) ಶೇ. 100 ಪ್ರತಿಶತ ಮುಂಗಡವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಅದನ್ನು 28.04.2021 ರಂದು ಸಂಸ್ಥೆಯು ಸ್ವೀಕರಿಸಿದೆ. 10 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಯ ಪೂರೈಕೆಗಾಗಿ ಇರಿಸಲಾಗಿದ್ದ ಕೊನೆಯ ಖರೀದಿ ಆದೇಶದ ಅಂಗವಾಗಿ 03.05.2021ರವರೆಗೆ 8.744 ಕೋಟಿ ಡೋಸ್ಗಳನ್ನು ವಿತರಿಸಲಾಗಿದೆ.

ಹೆಚ್ಚುವರಿಯಾಗಿ, ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ 05 ಕೋಟಿ ಕೊವಾಕ್ಸಿನ್ ಡೋಸ್ಗಳ ಪೂರೈಕೆಗಾಗಿ ʻಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ʼಗೆ(ಬಿಬಿಎಲ್) 28.04.2021 ರಂದು 787.50 ಕೋಟಿ ರೂ.ಗಳ (ಟಿಡಿಎಸ್ ನಂತರ 772.50 ಕೋಟಿ ರೂ.)  ಶೇ. 100ರಷ್ಟು ಮುಂಗಡವನ್ನು   ಬಿಡುಗಡೆ ಮಾಡಲಾಗಿದೆ ಮತ್ತು 28.04.2021ರಂದು ಸಂಸ್ಥೆಯು ಅದನ್ನು ಸ್ವೀಕರಿಸಿದೆ. 02 ಕೋಟಿ ಕೊವಾಕ್ಸಿನ್ ಲಸಿಕೆ ಡೋಸ್ಗಳ ಪೂರೈಕೆಗಾಗಿ ಇರಿಸಲಾದ ಕೊನೆಯ ಖರೀದಿ ಆದೇಶದ ಭಾಗವಾಗಿ 03.05.2021ರವರೆಗೆ 0.8813 ಕೋಟಿ ಡೋಸ್ಗಳನ್ನು ವಿತರಿಸಲಾಗಿದೆ.

ಆದ್ದರಿಂದ ಭಾರತ ಸರಕಾರವು ಹೊಸ ಖರೀದಿ ಆದೇಶಗಳನ್ನು ನೀಡಿಲ್ಲ ಎಂದು ಹೇಳುವುದು ಸರಿಯಲ್ಲ.

2021 ಮೇ 2ರವರೆಗೆ ಭಾರತ ಸರಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 16.54 ಕೋಟಿ ಲಸಿಕೆ ಡೋಸ್ಗಳನ್ನು ಉಚಿತವಾಗಿ ಒದಗಿಸಿದೆ. 78 ಲಕ್ಷಕ್ಕೂ ಹೆಚ್ಚು ಡೋಸ್ಗಳು ಇನ್ನೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆಇದರ ಜೊತೆಗೆ 56 ಲಕ್ಷಕ್ಕೂ ಹೆಚ್ಚು ಡೋಸ್ಗಳನ್ನು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ರಾಜ್ಯಗಳು ಪಡೆಯಲಿವೆ.

ʻಉದಾರೀಕೃತ ದರ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯತಂತ್ರʼ ಭಾಗವಾಗಿ, ಭಾರತ ಸರಕಾರವು ʻಕೇಂದ್ರ ಔಷಧ ಪ್ರಯೋಗಾಲಯʼ(ಸಿಡಿಎಲ್) ಅನುಮೋದನೆ ಪಡೆದಿರುವ ಲಸಿಕೆಗಳ ಉತ್ಪಾದನೆಯಲ್ಲಿ ತನ್ನ ಮಾಸಿಕ ಶೇ. 50% ರಷ್ಟು ಪಾಲಿನ ಖರೀದಿಯನ್ನು ಮುಂದುವರಿಸಲಿದೆ ಮತ್ತು ಹಿಂದಿನಂತೆಯೇ ರಾಜ್ಯ ಸರಕಾರಗಳಿಗೆ ಸಂಪೂರ್ಣ ಉಚಿತವಾಗಿ ಲಸಿಕೆ ಲಭ್ಯವಾಗುವಂತೆ  ನೋಡಿಕೊಳ್ಳಲಿದೆ.

***(Release ID: 1715795) Visitor Counter : 179