ಹಣಕಾಸು ಸಚಿವಾಲಯ

ವಿದೇಶದಿಂದ ದೇಣಿಗೆ ಪಡೆದ ನಿರ್ದಿಷ್ಟ ಕೋವಿಡ್-19 ಪರಿಹಾರ ಸಾಮಗ್ರಿ ಆಮದು ಮೇಲಿನ ಐಜಿಎಸ್ ಟಿಯಿಂದ ತಾತ್ಕಾಲಿಕ ವಿನಾಯ್ತಿ


ಸೀಮಾ ಸುಂಕಕ್ಕೆ ಈಗಾಗಲೇ ವಿನಾಯ್ತಿ ನೀಡಲಾಗಿದ್ದು, ಈ ಆಮದುಗಳಿಗೆ ಯಾವುದೇ ಸೀಮಾ ಸುಂಕ ಅಥವಾ ಐಜಿಎಸ್ ಟಿ ಅನ್ವಯವಿಲ್ಲ

Posted On: 03 MAY 2021 3:02PM by PIB Bengaluru

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೀಮಿತ ಅವಧಿಗೆ ಕೋವಿಡ್-19 ಪರಿಹಾರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲಿನ ಮೂಲ ಸೀಮಾ ಸುಂಕ ಮತ್ತು/ ಅಥವಾ ಆರೋಗ್ಯ ಸೆಸ್ ನಿಂದ ವಿನಾಯ್ತಿ ನೀಡಿ ಆದೇಶ ಹೊರಡಿಸಿದೆ. ಅದರಲ್ಲಿ ಇವು ಸೇರಿವೆ.

ಕ್ರ.ಸಂ

ಅಧಿಸೂಚನೆ

ಉದ್ದೇಶ

  1.  

27/2021 ಸೀಮಾ ಸುಂಕ, ದಿನಾಂಕ 20.04.21 (ತಿದ್ದುಪಡಿ ಅಧಿಸೂಚನೆ ಸಂಖ್ಯೆ29/2021 ಸೀಮಾ ಸುಂಕ ದಿನಾಂಕ 30.4.21)

2021 ಅಕ್ಟೋಬರ್ 31ರವರೆಗೆ ರೆಮ್ ಡೆಸಿವಿರ್ ಇಂಜಕ್ಷನ್/ಎಪಿಐ ಮತ್ತು ಬೀರಾ ಸೈಕ್ಲೋಡೆಕ್ಸಟ್ರಿನ್ (ಎಸ್ ಬಿಇಬಿಸಿಡಿ), ಇನ್ ಫ್ಲೇಮಟೊರಿ ಡಯಾಗ್ನಾಸ್ಟಿಕ್ (ಮೇಕರ್ಸ್ ) ಕಿಟ್

  1.  

28/2021-ಸೀಮಾ ಸುಂಕ ದಿನಾಂಕ 24.04.21

2021 ಜುಲೈ 31 ರವರೆಗೆ ವೈದ್ಯಕೀಯ ದರ್ಜೆ ಆಮ್ಲಜನಕ, ಆಕ್ಸಿಜನ್ ಥೆರಪಿಗೆ ಸಂಬಂಧಿಸಿದ ಆಕ್ಸಿಜಲ್ ಕ್ರಾನ್ಸಟ್ರೆಟರ್, ಕ್ರಯೋಜೆನಿಕ್ ಟ್ರಾನ್ಸ್ ಪೋರ್ಟ್ ಟ್ಯಾಂಕ್ ಇತ್ಯಾದಿ ಮತ್ತು ಕೋವಿಡ್-19 ಲಸಿಕೆ

ಉಚಿತ ವಿತರಣೆಗಾಗಿ ಭಾರತದಿಂದ ಹೊರಗೆ ಸ್ವೀಕರಿಸಲಾದ/ದೇಣಿಗೆ ಪಡೆಯಲಾದ ಕೋವಿಡ್-19 ಪರಿಹಾರ ಸಾಮಗ್ರಿ (ಈಗಾಗಲೇ ಸೀಮಾ ಸುಂಕದಿಂದ ವಿನಾಯ್ತಿ ನೀಡಲಾಗಿದೆ)ಗಳಿಗೆ ಐಜಿಎಸ್ ಟಿ ನಿಂದ ವಿನಾಯ್ತಿ ನೀಡಬೇಕೆಂದು ಹಲವು ಚಾರಿಟಬಲ್ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು ಮತ್ತು ಇತರೆ ಸಂಘ/ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದ್ದವು.

ಅದರಂತೆ, ಕೇಂದ್ರ ಸರ್ಕಾರ 2021 ಮೇ 3ರಂದು ಆದೇಶ ಸಂಖ್ಯೆ 4/2021 ಹೊರಡಿಸಿದ್ದು, ಕೋವಿಡ್ ಪರಿಹಾರಕ್ಕೆ ಉಚಿತ ವಿತರಣೆಗಾಗಿ ಉಚಿತವಾಗಿ ಸ್ವೀಕರಿಸಲಾಗಿರುವ ಪರಿಹಾರ ಸಾಮಗ್ರಿಗಳ ಆಮದು ಮೇಲೆ ಐಜಿಎಸ್ ಟಿ ತಾತ್ಕಾಲಿಕ ವಿನಾಯ್ತಿ ನೀಡಿದೆ.

ವಿನಾಯ್ತಿ 2021 ಜೂನ್ 30ರವರೆಗೆ ಅನ್ವಯವಾಗಲಿದೆ. ಆದೇಶ ಈಗಾಗಲೇ ಆಮದು ಮಾಡಿಕೊಂಡಿರುವ, ಆದರೆ ದಿನದವರೆಗೆ ಅಂದರೆ ಇಂದಿನವರೆಗೆ ವಿತರಣೆಯಾಗದ ಸಾಮಗ್ರಿಗಳಿಗೂ ಸಹ ಅನ್ವಯವಾಗಲಿದೆ.

ವಿನಾಯ್ತಿ ಕೆಳಗಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ.

  1. ವಿನಾಯ್ತಿ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ಸೆಕ್ಷನ್ 2 (103) ರನ್ವಯ ರಾಜ್ಯ ಎಂದರೆ ಅದರಲ್ಲಿ ಶಾಸನಸಭೆ ಇರುವ ಕೇಂದ್ರಾಡಳಿತ ಪ್ರದೇಶವೂ ಸೇರಿದೆ.
  2. ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ವ್ಯಕ್ತಿ ಯಾವುದೇ ಸಂಸ್ಥೆ, ಯಾವುದೇ ಏಜೆನ್ಸಿ ಅಥವಾ ಶಾಸನಬದ್ಧ ಸಂಸ್ಥೆಯನ್ನು ಉಚಿತ ಕೋವಿಡ್ ಪರಿಹಾರ ಸಾಮಗ್ರಿ ವಿತರಣೆಗಾಗಿ ಅನುಮೋದಿಸಬೇಕು.
  3. ಆಂತಹ ಸರಕುಗಳನ್ನು ರಾಜ್ಯ ಸರ್ಕಾರದಿಂದ ಉಚಿತವಾಗಿ ಆಮದು ಮಾಡಿಕೊಳ್ಳಬೇಕು ಅಥವಾ ಯಾವುದೇ ಸಂಸ್ಥೆ/ಪರಿಹಾರ ನೀಡುವ ಏಜೆನ್ಸಿ/ ಶಾಸನಬದ್ಧ ಸಂಸ್ಥೆಯನ್ನು ನಿಟ್ಟಿನಲ್ಲಿ ದೇಶದ ಯಾವುದೇ ಭಾಗದಲ್ಲಿ ಉಚಿತ ವಿತರಣೆಗೆ ಅನುಮೋದಿಸುವ ಅಧಿಕಾರ ಹೊಂದಿದೆ.
  4. ಕಸ್ಟಮ್ಸ್ ಸರಕುಗಳನ್ನು ತೆರವುಗೊಳಿಸುವ ಮೊದಲು ಆಮದುದಾರರು ಕೋವಿಡ್ ಉಚಿತ ಪರಿಹಾರಕ್ಕಾಗಿ ಉಚಿತ ವಿತರಣೆಗೆ ಸರಕುಗಳನ್ನು ಹೊಂದಲಾಗಿದೆ ಎಂದು ನೋಡಲ್ ಅಧಿಕಾರಿಯಿಂದ ಪ್ರಮಾಣಪತ್ರವನ್ನು ಪಡೆಯಬೇಕು.
  5. ಆಮದು ಮಾಡಿಕೊಂಡ ನಂತರ ಆಮದು ಮಾಡಿಕೊಂಡ ದಿನಾಂಕದಿಂದ ಆರು ತಿಂಗಳ ಅವಧಿಯಲ್ಲಿ ಅಥವಾ 9 ತಿಂಗಳು ಮೀರದಂತೆ ವಿಸ್ತೃತ ಅವಧಿಯಲ್ಲಿ ಆಮದುದಾರರು ಬಂದರಿನಲ್ಲಿರುವ ಉಪ ಅಥವಾ ಸಹಾಯಕ ಕಸ್ಟಮ್ಸ್ ಆಯುಕ್ತರಿಗೆ ಆಮದು ಮಾಡಿಕೊಂಡ ಮತ್ತು ಉಚಿತವಾಗಿ ವಿತರಿಸಿದ ವಸ್ತುಗಳ ಸರಳ ಹೇಳಿಕೆಯನ್ನು ಸಲ್ಲಿಸಬೇಕು. ಹೇಳಿಕೆಯನ್ನು ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ನೋಡಲ್ ಅಧಿಕಾರಿ ಪ್ರಮಾಣೀಕರಿಸಬೇಕು.

ವಿನಾಯ್ತಿ, ಐಜಿಎಸ್ ಟಿ ಪಾವತಿಸದೆ ಉಚಿತ ವಿತರಣೆಗೆ ಉಚಿತ ಆಮದು ಮಾಡಿಕೊಳ್ಳುವ ಕೋವಿಡ್ ಪರಿಹಾರ ಸಾಮಗ್ರಿಗಳ ಪೂರೈಕೆ ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ( ವಿನಾಯ್ತಿ 2021 ಜೂನ್ 30ರವರೆಗೆ ಅನ್ವಯವಾಗುತ್ತದೆ).

ಸೀಮಾ ಸುಂಕ ಪಾವತಿಗೆ ಈಗಾಗಲೇ ವಿನಾಯ್ತಿ ನೀಡಲಾಗಿದ್ದು, ಆಮದುಗಳಿಗೆ ಯಾವುದೇ ರೀತಿಯ ಸೀಮಾ ಸುಂಕ ಅಥವಾ ಐಜಿಎಸ್ ಟಿ ಇರುವುದಿಲ್ಲ.

***



(Release ID: 1715727) Visitor Counter : 262