ಪ್ರಧಾನ ಮಂತ್ರಿಯವರ ಕಛೇರಿ

ಮಿಜೋರಂ ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಮಾತುಕತೆ ಮತ್ತು  ಅರಣ್ಯ ಅಗ್ನಿ ಆಕಸ್ಮಿಕ‌ ಸ್ಥಿತಿ ಮಾಹಿತಿ‌

ಪ್ರಕಟಣಾ ದಿನಾಂಕ: 26 APR 2021 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಮಿಜೋರಂನ ಮುಖ್ಯಮಂತ್ರಿ ಶ್ರೀ ಜೋರಂಥಂಗ ಅವರೊಂದಿಗೆ ಸಮಾಲೋಚನೆ ನಡೆಸಿದರು ಮತ್ತು ರಾಜ್ಯದ ಕೆಲವು ಅರಣ್ಯ ಭಾಗದಲ್ಲಿನ ಅಗ್ನಿ‌ಆಕಸ್ಮಿಕದಿಂದ ಉಂಟಾಗಿರುವ ಸ್ಥಿತಿಗತಿ  ಕುರಿತು ಮಾಹಿತಿ ಪಡೆದರು

ಶ್ರೀ ನರೇಂದ್ರ ಮೋದಿಯವರು ತಮ್ಮ ಟ್ವೀಟ್ ನಲ್ಲಿ "ಮಿಜೋರಂ ಮುಖ್ಯಮಂತ್ರಿ ಶ್ರೀ ಜೋರಂಥಂಗ ಅವರೊಂದಿಗೆ ಮಾತನಾಡಿದೆ ಮತ್ತು ರಾಜ್ಯದ ಕೆಲವು ಅರಣ್ಯ ಭಾಗದಲ್ಲಿನ ಅಗ್ನಿ‌ಆಕಸ್ಮಿಕದಿಂದ ಉಂಟಾಗಿರುವ ಸ್ಥಿತಿಗತಿ  ಕುರಿತು ಮಾಹಿತಿ ಪಡೆದೆ. ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸಾಧ್ಯವಾದ ಎಲ್ಲ‌ ನೆರವು ನೀಡುವ ಭರವಸೆ ನೀಡಿದ್ದೇನೆ. ನಾವೆಲ್ಲರೂ ಮಿಜೋರಂ ಜನರ ಸುರಕ್ಷತೆಗೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸೋಣ" ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1714154) ವಿಸಿಟರ್ ಕೌಂಟರ್ : 289