ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ 9 ಕೋಟಿ ದಾಟಿದ ಕೋವಿಡ್-19 ಲಸಿಕೆ ಡೋಸ್ ವಿತರಣೆ
ನಿನ್ನೆ ಒಂದೇ ದಿನ ಸುಮಾರು 30 ಲಕ್ಷ ಜನರಿಗೆ ಲಸಿಕೆ ನೀಡಿಕೆ
ಪ್ರತಿದಿನ ಸರಾಸರಿ 34 ಲಕ್ಷಕ್ಕಿಂತ ಹೆಚ್ಚಿನ ಡೋಸ್ ಲಸಿಕೆ ನೀಡಿಕೆ; ಜಾಗತಿಕ ಮಟ್ಟದಲ್ಲಿ ಭಾರತ ಮುಂದು
ದೇಶದ 10 ರಾಜ್ಯಗಳಲ್ಲಿ ಕೊರೊನಾ ಹೊಸ ಪ್ರಕರಣಗಳ ಹೆಚ್ಚಳ; ಪಾಸಿಟಿವ್ ಪ್ರಕರಣಗಳ ರಾಷ್ಟ್ರೀಯ ದರ 2.19%ನಿಂದ 8.40%ಗೆ ಏರಿಕೆ
Posted On:
08 APR 2021 11:29AM by PIB Bengaluru
ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ವಿರುದ್ಧ ಸಂಘಟಿತ ಮತ್ತು ಸಾಮೂಹಿಕ ಹೋರಾಟ ನಡೆಸುತ್ತಿರುವ ಭಾರತ, ಜನವರಿ 16ರಿಂದ ಆರಂಭಿಸಿರುವ ವಿಶ್ವದ ಅತಿದೊಡ್ಡ ಲಸಿಕಾ ಆಂದೋಲನದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ದೇಶಾದ್ಯಂತ ನೀಡಲಾಗಿರುವ ಕೋವಿಡ್-19 ಲಸಿಕೆ ಡೋಸ್ ಇಂದಿಗೆ 9 ಕೋಟಿ ದಾಟಿದೆ.
ಇಂದು ಬೆಳಗ್ಗೆ 7 ಗಂಟೆಗೆ ಸಿಕ್ಕಿರುವ ತಾತ್ಕಾಲಿಕ ವರದಿಯ ಪ್ರಕಾರ, ದೇಶಾದ್ಯಂತ ಒಟ್ಟಾರೆ, 9,01,98,673 ಲಸಿಕಾ ಡೋಸ್’ಗಳನ್ನು ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್ ಪಡೆದ 89,68,151 ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು, 2ನೇ ಡೋಸ್ ಪಡೆದ 54,18,084 ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು, ಮೊದಲ ಡೋಸ್ ಪಡೆದ 97,67,538 ಮುಂಚೂಣಿ ಕಾರ್ಯಕರ್ತರು ಮತ್ತು 2ನೇ ಡೋಸ್ ಪಡೆದ 44,11,609 ಮುಂಚೂಣಿ ಕಾರ್ಯಕರ್ತರು, ಮೊದಲ ಡೋಸ್ ಪಡೆದ 3,63,32,851 ಅರವತ್ತು ವರ್ಷ ದಾಟಿದ ಫಲಾನುಭವಿಗಳು ಹಾಗೂ 2ನೇ ಡೋಸ್ ಪಡೆದ 11,39,291 ಅರವತ್ತು ವರ್ಷ ದಾಟಿದ ಫಲಾನುಭವಿಗಳು ಮತ್ತು 45ರಿಂದ 60 ವರ್ಷದೊಳಗಿನ ಮೊದಲ ಡೋಸ್ ಪಡೆದ 2,36,94,487 ಹಾಗೂ 2ನೇ ಡೋಸ್ ಪಡೆದ 4,66,662 ಫಲಾನುಭವಿಗಳು ಸೇರಿದ್ದಾರೆ.
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
ಮುಂಚೂಣಿ ಕಾರ್ಯಕರ್ತರು
|
45 ವರ್ಷ ದಾಟಿದ ಫಲಾನುಭವಿಗಳು
|
60 ವರ್ಷ ದಾಟಿದ ಫಲಾನುಭವಿಗಳು
|
ಒಟ್ಟು
|
ಮೊದಲ ಡೋಸ್
|
2ನೇ ಡೋಸ್
|
ಮೊದಲ ಡೋಸ್
|
2ನೇ ಡೋಸ್
|
ಮೊದಲ ಡೋಸ್
|
2ನೇ ಡೋಸ್
|
ಮೊದಲ ಡೋಸ್
|
2ನೇ ಡೋಸ್
|
89,68,151
|
54,18,084
|
97,67,538
|
44,11,609
|
2,36,94,487
|
4,66,662
|
3,63,32,851
|
11,39,291
|
9,01,98,673
|
ಇದುವರೆಗೆ ದೇಶಾದ್ಯಂತ ನೀಡಿರುವ ಒಟ್ಟು 9 ಕೋಟಿ ಡೋಸ್’ಗಳ ಪೈಕಿ 8 ರಾಜ್ಯಗಳಲ್ಲೇ 60% ಲಸಿಕೆ ಹಾಕಲಾಗಿದೆ.
ಕಳೆದ 24 ತಾಸುಗಳಲ್ಲಿ ಸುಮಾರು 30 ಲಕ್ಷ ಲಸಿಕಾ ಡೋಸ್’ಗಳನ್ನು ನೀಡಲಾಗಿದೆ.
ದೇಶಾದ್ಯಂತ ನಡೆಯುತ್ತಿರುವ 82ನೇ ದಿನದ ಲಸಿಕಾ ಆಂದೋಲನದಲ್ಲಿ (ಏಪ್ರಿಲ್ 7, 2021), 29,79,292 ಲಸಿಕೆ ಡೋಸ್’ಗಳನ್ನು ವಿತರಿಸಲಾಗಿದೆ. ಅದರಲ್ಲಿ 26,90,031 ಫಲಾನುಭವಿಗಳಿಗೆ 38,760 ಆಂದೋಲನಗಳಲ್ಲಿ (ಕಾರ್ಯಕ್ರಮಗಳಲ್ಲಿ) ಮೊದಲ ಡೋಸ್ ಲಸಿಕೆ ಮತ್ತು 2,89,261 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆ ಹಾಕಲಾಗಿದೆ.
ಜಾಗತಿಕ ಮಟ್ಟದಲ್ಲಿ ದಿನನಿತ್ಯ ಹಾಕಲಾಗುತ್ತಿರುವ ಲಸಿಕೆ ಡೋಸ್’ಗಳಿಗೆ ಹೋಲಿಕೆ ಮಾಡಿದಾಗ, ಭಾರತ ಅಗ್ರಸ್ಥಾನದಲ್ಲಿ ನಿಂತಿದೆ. ದೈನಂದಿನ ಸರಾಸರಿ 34,30,502 ಡೋಸ್ ಲಸಿಕೆ ನೀಡಲಾಗುತ್ತಿದೆ.
ಈ ನಡುವೆ, ಭಾರತದಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ದಿನೇದಿನೆ ಏರಿಕೆ ಕಾಣುತ್ತಿದ್ದು, ಕಳೆದ 24 ತಾಸುಗಳಲ್ಲಿ 1,26,789 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.
ಮಹಾರಾಷ್ಟ್ರ, ಛತ್ತೀಸ್’ಗಢ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಮಧ್ಯ ಪ್ರದೇಶ, ತಮಿಳುನಾಡು, ಗುಜರಾತ್, ಕೇರಳ ಮತ್ತು ಪಂಜಾಬ್ ಸೇರಿದಂತೆ 10 ರಾಜ್ಯಗಳಲ್ಲಿ ಒಟ್ಟು ಹೊಸ ಪ್ರಕರಣಗಳು 84.21% ಪ್ರಮಾಣ ದಿನನಿತ್ಯ ಏರಿಕೆ ಆಗುತ್ತಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ 59,907 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾದರೆ, ಛತ್ತೀಸ್’ಗಢದಲ್ಲಿ 10,310 ಮತ್ತು ಕರ್ನಾಟಕದಲ್ಲಿ 6,976 ಜನರಿಗೆ ಸೋಂಕು ಹರಡಿದೆ.
12 ರಾಜ್ಯಗಳಲ್ಲಿ ದೈನಂದಿನ ಹೊಸ ಕೊರೊನಾ ಪ್ರಕರಣಗಳು ಏರುಗತಿಯಲ್ಲಿವೆ.
ಕೆಳಗಿನ ನಕ್ಷೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ವಾರದಲ್ಲಿ (ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮೊದಲ ಏಳು ದಿನಗಳು) ಪತ್ತೆಯಾಗಿರುವ ಪಾಸಿಟಿವ್ ಪ್ರಕರಣಗಳ ಪ್ರಮಾಣವನ್ನು ಹೋಲಿಕೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣ 2.19%ನಿಂದ 6.21%ಗೆ ಏರಿಕೆ ಆಗಿ, ಅದು 8.40%ಗೆ ಹೆಚ್ಛಳವಾಗಿದೆ.
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9,10,319ಕ್ಕೆ ಏರಿಕೆ ಆಗಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳ ಶೇಕಡ 7.04% ಸಕ್ರಿಯ ಪ್ರಕರಣಗಳಿವೆ. ಕಳೆದ 24 ತಾಸುಗಳಲ್ಲಿ 66,846 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ದೇಶಾದ್ಯಂತ ದಾಖಲಾಗಿರುವ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರ, ಛತ್ತೀಸ್’ಗಢ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲೇ 74.13% ಪ್ರಮಾಣ ದಾಖಲಾಗಿದೆ. ಮಹಾರಾಷ್ಟ್ರ ಒಂದರಲ್ಲೇ 55.26% ಸಕ್ರಿಯ ಪ್ರಕರಣಗಳಿವೆ.
ಭಾರತದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,18,51,393ಕ್ಕೆ ಏರಿಕೆ ಕಂಡಿದೆ. ರಾಷ್ಟ್ರೀಯ ಸರಾಸರಿ ಚೇತರಿಕೆ ದರ 91.67% ಇದೆ.
ಕಳೆದ 24 ತಾಸುಗಳಲ್ಲಿ 59,258 ಸೋಂಕಿತರು ಗುಣಮುಖರಾಗಿದ್ದಾರೆ.
ಕಳೆ 24 ತಾಸುಗಳಲ್ಲಿ ದೇಶಾದ್ಯಂತ 685 ಸಾವುಗಳು ಸಂಭವಿಸಿವೆ.
10 ರಾಜ್ಯಗಳಲ್ಲಿ 87.59% ಸಾವುಗಳು ಜನನ ಸಾವುಗಳು ಸಂಭವಿಸಿವೆ.
ಕಳೆದ 24 ತಾಸುಗಳಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ. ಅಸ್ಸಾಂ, ಲಡಾಖ್, ಡಿಯು ಮತ್ತು ದಮನ್, ದಾದ್ರಾ ಮತ್ತು ನಗರ್ ಹವೇಲಿ, ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ, ಸಿಕ್ಕಿಂ, ಮಣಿಪುರ, ಲಕ್ಷದ್ವೀಪ, ಮಿಜೋರಾಂ, ಅಂಡೊಮಾನ್ ಮತ್ತು ನಿಕೋಬಾರ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಸಾವುಗಳು ವರದಿಯಾಗಿಲ್ಲ.
***
(Release ID: 1710408)
Visitor Counter : 333
Read this release in:
Bengali
,
Tamil
,
English
,
Urdu
,
Marathi
,
Hindi
,
Assamese
,
Punjabi
,
Gujarati
,
Odia
,
Telugu
,
Malayalam