ಪ್ರಧಾನ ಮಂತ್ರಿಯವರ ಕಛೇರಿ

2021ರ ಏಪ್ರಿಲ್ 9ರಂದು ಡಾ. ಹರೇಕೃಷ್ಣ ಮಹ್ತಾಬ್‌ ಅವರ ʻಒಡಿಶಾ ಇತಿಹಾಸ್ʼ ಹಿಂದಿ ಆವೃತ್ತಿಯನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ

Posted On: 07 APR 2021 1:00PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಉತ್ಕಲ್ ಕೇಶರಿ' ಡಾ. ಹರೇಕೃಷ್ಣ ಮಹ್ತಾಬ್ ಅವರು ಬರೆದಿರುವ 'ಒಡಿಶಾ ಇತಿಹಾಸ್' ಪುಸ್ತಕದ ಹಿಂದಿ ಅವತರಣಿಕೆಯನ್ನು 2021ರ ಏಪ್ರಿಲ್ 9ರಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಜನಪಥ್‌ನಲ್ಲಿರುವ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದುವರೆಗೂ ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿದ್ದ ಈ ಪುಸ್ತಕವನ್ನು ಶ್ರೀ ಶಂಕರ್‌ಲಾಲ್‌ ಪುರೋಹಿತ್‌ ಅವರು  ಹಿಂದಿಗೆ ಅನುವಾದಿಸಿದ್ದಾರೆ. ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕಟಕ್ ಸಂಸದರಾದ ಶ್ರೀ ಭರ್ತೃಹರಿ ಮಹ್ತಾಬ್‌ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಹರೇಕೃಷ್ಣ ಮಹ್ತಾಬ್‌ ಪ್ರತಿಷ್ಠಾನ ಈ ಹಿಂದಿ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದೆ.

 

ಲೇಖಕರ ಬಗ್ಗೆ

ಡಾ. ಹರೇಕೃಷ್ಣ ಮಹ್ತಾಬ್‌ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖವಾಗಿ ಗುರುತಿಸಬಹುದಾದಂತ ವ್ಯಕ್ತಿ. ಅವರು 1946 ರಿಂದ 1950 ಮತ್ತು 1956 ರಿಂದ 1961 ರವರೆಗೆ ಒಡಿಶಾದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. 1942-1945ರ ಅವಧಿಯಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸದಲ್ಲಿದ್ದಾಗ ಅವರು ಅಹ್ಮದ್‌ನಗರ ಕೋಟೆ ಕಾರಾಗೃಹದಲ್ಲೇ 'ಒಡಿಶಾ ಇತಿಹಾಸ್' ಎಂಬ ಪುಸ್ತಕವನ್ನು ಬರೆದರು.

*****(Release ID: 1710110) Visitor Counter : 175