ಪ್ರಧಾನ ಮಂತ್ರಿಯವರ ಕಛೇರಿ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಂಸ್ಥಾಪನಾ ದಿನ; ಸಿಐಎಸ್’ಎಫ್ ಸಿಬ್ಬಂದಿಗೆ ಪ್ರಧಾನ ಮಂತ್ರಿ ಅವರಿಂದ ಶುಭಾಶಯ

प्रविष्टि तिथि: 10 MAR 2021 10:58AM by PIB Bengaluru

ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ (ಸಿಐಎಸ್ಎಫ್) ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಿಐಎಸ್ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಶುಭಾಶಯ ಕೋರಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಸಿಐಎಸ್ಎಫ್ ಸಂಸ್ಥಾಪನಾ ದಿನದ ನೆನಪಲ್ಲಿ ನಮ್ಮ ಕೆಚ್ಚೆದೆಯ ಧ್ಯೆರ್ಯಶಾಲಿ ಸಿಬ್ಬಂದಿ ಮತ್ತು ಅವರ ಎಲ್ಲಾ ಕುಟುಂಬ ಸದಸ್ಯರಿಗೆ ಶುಭ ಕಾಮನೆಗಳು. ನಮ್ಮ ದೇಶದ ರಾಷ್ಟ್ರೀಯ ಸುರಕ್ಷತೆ ಮತ್ತು ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಸಿಐಎಸ್ಎಫ್ ಸಿಬ್ಬಂದಿ ನಿರ್ವಹಿಸುತ್ತಿರುವ ಪಾತ್ರ ಅತ್ಯಂತ ಮೌಲ್ಯಯುತವಾಗಿದೆ. 2019ರಲ್ಲಿ ನಡೆದ ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ (ಸಿಐಎಸ್ಎಫ್) ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ. ನಾನು ಅಲ್ಲಿ ಸ್ಮರಿಸಿದ್ದ ಸಿಐಎಸ್ಎಫ್ ಸಿಬ್ಬಂದಿಯ ದೇಶ ಪ್ರೇಮ, ನಿಸ್ವಾರ್ಥ ಸೇವೆ ಮತ್ತು ತ್ಯಾಗವನ್ನು ಇಲ್ಲಿ ಪುನರುಚ್ಚರಿಸುತ್ತಿದ್ದೇನೆ.” ಎಂದು ತಿಳಿಸಿದ್ದಾರೆ.

***


(रिलीज़ आईडी: 1704158) आगंतुक पटल : 206
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Manipuri , Bengali , Punjabi , Gujarati , Odia , Tamil , Telugu , Malayalam