ಪ್ರಧಾನ ಮಂತ್ರಿಯವರ ಕಛೇರಿ
ಮಾರ್ಚ್ 7ರಂದು “ಜನೌಷಧಿ ದಿವಸ’ ಆಚರಣೆಯದಂದು ಭಾಷಣ ಮಾಡಲಿರುವ ಪ್ರಧಾನಮಂತ್ರಿ
ಶಿಲ್ಲಾಂಗ್ ನ ನಿಯ್ ಗ್ರಿಮ್ಸ್ ನಲ್ಲಿ 7500ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ
Posted On:
05 MAR 2021 8:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 7ರಂದು ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಜನೌಷಧಿ ದಿನ’ದ ಆಚರಣೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಶಿಲ್ಲಾಂಗ್ ನ ನಯ್ ಗ್ರಿಮ್ಸ್ ನಲ್ಲಿ 7500ನೇ ಜನೌಷಧ ಕೇಂದ್ರವನ್ನೂ ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಬಾಧ್ಯಸ್ಥರ ಅದ್ಭುತ ಕಾರ್ಯವನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನೂ ಪ್ರದಾನ ಮಾಡಲಿದ್ದಾರೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ
ಗುಣಮಟ್ಟದ ಔಷಧಗಳನ್ನು ಕೈಗೆಟುಕುವ ದರದಲ್ಲಿ ಪೂರೈಸಲು ಈ ಉಪಕ್ರಮ ಪ್ರಯತ್ನಿಸುತ್ತದೆ. ಈ ಯೋಜನೆಯಡಿ ಮಳಿಗೆಗಳ ಸಂಖ್ಯೆ 7499ಕ್ಕೆ ಏರಿದ್ದು, ದೇಶದ ಎಲ್ಲಾ ಜಿಲ್ಲೆಗಳೂ ಕೇಂದ್ರಗಳಿವೆ. 2020-21ರ ಆರ್ಥಿಕ ವರ್ಷದಲ್ಲಿ (ಮಾರ್ಚ್ 4, 2021 ರವರೆಗೆ) ಆಗಿರುವ ಔಷಧ ಮಾರಾಟದಿಂದಾಗಿ ಶ್ರೀಸಾಮಾನ್ಯರಿಗೆ ಅಂದಾಜು 3600 ಕೋಟಿ ರೂ. ಉಳಿತಾಯವಾಗಿದೆ, ಏಕೆಂದರೆ ಈ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳ ದರಕ್ಕಿಂತ ಶೇ. 50 ರಿಂದ ಶೇ.90ರಷ್ಟು ಅಗ್ಗವಾಗಿವೆ.
ಜನೌಷಧಿ ದಿವಸದ ಬಗ್ಗೆ
ಜನೌಷಧಿಯ ಬಗ್ಗೆ ಹೆಚ್ಚಿನ ಜಾಗತಿಯನ್ನು ಉಂಟು ಮಾಡುವ ಸಲುವಾಗಿ, ಮಾರ್ಚ್ 1ರಿಂದ 7ರವರೆಗೆ ಇಡೀ ವಾರ ‘ಜನೌಷಧಿ ಸಪ್ತಾಹ’ವನ್ನು ‘ಜನೌಷಧಿ-ಸೇವೆಯೂ - ಉದ್ಯೋಗವೂ’ ಎಂಬ ಹೆಸರಲ್ಲಿ ದೇಶದಾದ್ಯಂತ ಆಚರಿಸಲಾಗುತ್ತದೆ. ಸಪ್ತಾಹದ ಕೊನೆಯ ದಿನ ಅಂದರೆ ಮಾರ್ಚ್ 7ರಂದು ‘ಜನೌಷಧ ದಿನ’ ಆಚರಿಸಲಾಗುತ್ತದೆ.
***
(Release ID: 1703102)
Visitor Counter : 158
Read this release in:
Tamil
,
Malayalam
,
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Telugu