ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ವನ್ಯಜೀವಿ ದಿನದಂದು ವನ್ಯಜೀವಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ವಂದಿಸಿದ ಪ್ರಧಾನಮಂತ್ರಿ

प्रविष्टि तिथि: 03 MAR 2021 9:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವನ್ಯಜೀವಿಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ವಿಶ್ವ ವನ್ಯಜೀವಿ ದಿನವಾದ ಇಂದು ನಮನ ಸಲ್ಲಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, “#WorldWildlifeDay, ವಿಶ್ವ ವನ್ಯಜೀವಿ ದಿನದಂದು ವನ್ಯ ಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ನಮನ ಸಲ್ಲಿಸುತ್ತೇನೆ. ಅದು ಸಿಂಹಗಳು, ಹುಲಿಗಳು ಮತ್ತು ಚಿರತೆಗಳೇ ಆಗಿರಲಿ, ಭಾರತ ವಿವಿಧ ಪ್ರಾಣಿಗಳ ಸಂಖ್ಯೆಯಲ್ಲಿ ಸ್ಥಿರ ಏರಿಕೆಯನ್ನು ಕಾಣುತ್ತಿದೆ. ನಾವು ನಮ್ಮ ಅರಣ್ಯಗಳ ಮತ್ತು ಪ್ರಾಣಿಗಳ ಸುರಕ್ಷಿತ ವಾಸ ಸ್ಥಾನಗಳ ಸಂರಕ್ಷಣೆಯನ್ನು ಖಾತ್ರಿ ಪಡಿಸಲು ಎಲ್ಲ ಸಾಧ್ಯ ಕಾರ್ಯ ಮಾಡಬೇಕು..” ಎಂದು ತಿಳಿಸಿದ್ದಾರೆ.

***


(रिलीज़ आईडी: 1702122) आगंतुक पटल : 310
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam