ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಕಾಪ್ 26 ನಿಯೋಜಿತ ಅಧ್ಯಕ್ಷ, ಸಂಸತ್ ಸದಸ್ಯ ಗೌರವಾನ್ವಿತ ಆರ್‌ಟಿ ಅಲೋಕ್ ಶರ್ಮಾ

Posted On: 16 FEB 2021 7:01PM by PIB Bengaluru

ವಿಶ್ವಸಂಸ್ಥೆಯ 26ನೇ ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಸಮಾವೇಶ (ಕಾಪ್ 26) ನಿಯೋಜಿತ ಅಧ್ಯಕ್ಷ ಹಾಗೂ ಸಂಸತ್ ಸದಸ್ಯ ಗೌರವಾನ್ವಿತ ಅಲೋಕ್ ಶರ್ಮಾ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಹವಾಮಾನ ಬದಲಾವಣೆ ಕುರಿತ ಸಿಓಪಿ, ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (ಯು.ಎನ್‌.ಎಫ್‌.ಸಿ.ಸಿ) ನಿರ್ಧಾರ ಕೈಕೊಳ್ಳುವ ಸಂಸ್ಥೆಯಾಗಿದೆ, ಇದರ 26ನೇ ಸಮಾವೇಶನವನ್ನು ಯುಕೆ 2021 ನವೆಂಬರ್‌ ನಲ್ಲಿ ಗ್ಲ್ಯಾಸ್ಗೋದಲ್ಲಿ ಆಯೋಜಿಸಲಿದೆ.

ಪ್ರಧಾನಮಂತ್ರಿ ಮತ್ತು ಶ್ರೀ ಅಲೋಕ್ ಶರ್ಮಾ ಅವರು ಕಾಪ್26 ಬಗೆಗಿನ ಹವಾಮಾನ ಬದಲಾವಣೆಯ ವಿಷಯಗಳ ಕುರಿತು ಭಾರತ-ಯುಕೆ ಸಹಯೋಗದ ಬಗ್ಗೆಯೂ ಚರ್ಚಿಸಿದರು. ಪ್ಯಾರಿಸ್ ಒಪ್ಪಂದ ಮತ್ತು ಕಾಪ್ 26 ಯಶಸ್ವಿ ಫಲಶ್ರುತಿಗಾಗಿ ರಚನಾತ್ಮಕವಾಗಿ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರುಶ್ರೀ ಶರ್ಮಾ ಅವರು ಡಿಸೆಂಬರ್, 2020ರಲ್ಲಿ ನಡೆದ ಹವಾಮಾನ ಮಹತ್ವಾಕಾಂಕ್ಷೆಯ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣವನ್ನು ಸ್ಮರಿಸಿದರು

ಪ್ರಧಾನಮಂತ್ರಿಯವರು ಕೂಡ ಭಾರತ-ಯುಕೆ ಬಾಂಧವ್ಯವರ್ಧನೆಗೆ ಯುನೈಟೆಡ್ ಕಿಂಗ್ಡಮ್ ಪ್ರಧಾನಮಂತ್ರಿ ಶ್ರೀ ಬೋರಿಸ್ ಜಾನ್ಸನ್ ಅವರೊಂದಿಗೆ ಒಗ್ಗೂಡಿ ಶ್ರಮಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.

***


(Release ID: 1698644) Visitor Counter : 243