ಪ್ರಧಾನ ಮಂತ್ರಿಯವರ ಕಛೇರಿ
ಮೂಲಸೌಕರ್ಯ ವಲಯದಲ್ಲಿ ಬಜೆಟ್ ಪರಿಣಾಮಕಾರಿ ಅನುಷ್ಠಾನಕ್ಕೆ ನೀಲನಕ್ಷೆ ಬಗೆಗಿನ ಸಮಾಲೋಚನೆ ಕುರಿತ ವೆಬಿನಾರ್ ಉದ್ದೇಶಿಸಿ ಫೆಬ್ರವರಿ 16ರಂದು ಪ್ರಧಾನಿ ಭಾಷಣ
प्रविष्टि तिथि:
15 FEB 2021 8:24PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಫೆಬ್ರವರಿ 16ರಂದು ಸಂಜೆ 4 ಗಂಟೆಗೆ ಕೇಂದ್ರ ಬಜೆಟ್ 2021-22 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತ ನೀಲನಕ್ಷೆ ಸಮಾಲೋಚನಾ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ವೆಬಿನಾರ್ ಕುರಿತು
ಈ ವೆಬಿನಾರ್ ನಲ್ಲಿ ಪ್ರಮುಖ ಹಣಕಾಸು ಸಂಸ್ಥೆಗಳು ಮತ್ತು ನಿಧಿಗಳ ಪ್ರತಿನಿಧಿಗಳು, ಕನ್ಸೆಷನರಿಗಳು, ಗುತ್ತಿಗೆದಾರರು, ಸಮಾಲೋಚಕರು ಮತ್ತು ವಿಷಯ ತಜ್ಞರೂ ಸೇರಿ 200ಕ್ಕೂ ಅಧಿಕ ಪ್ಯಾನಲಿಸ್ಟ್ ಗಳು ಭಾಗವಹಿಸಲಿದ್ದಾರೆ. ಪ್ಯಾನಲಿಸ್ಟ್ ಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಲಯಕ್ಕೆ ಹೆಚ್ಚಿನ ಹೂಡಿಕೆಗಳ ಆಕರ್ಷಣೆಗೆ ಒತ್ತು ನೀಡಿ ಮೂಲಸೌಕರ್ಯ ಅಭಿವೃದ್ಧಿಯ ಗುಣಮಟ್ಟ ಮತ್ತು ವೇಗದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಅಲ್ಲದೆ, ಬಜೆಟ್ ದೂರದೃಷ್ಟಿಯ ತ್ವರಿತ ಜಾರಿಗೆ ಅನುಷ್ಠಾನಗೊಳಿಸಬೇಕಿರುವ ಯೋಜನೆಗಳ ಪಟ್ಟಿ ತಯಾರಿಸುವುದರ ಕುರಿತು ನಾನಾ ವಲಯದ ತಜ್ಞರು ಮತ್ತು ಸಚಿವರ ಗುಂಪಿನೊಂದಿಗೆ ಹಿರಿಯ ಅಧಿಕಾರಿಗಳು ಎರಡು ಪರ್ಯಾಯ ಗೋಷ್ಠಿಗಳು ಮತ್ತು ಅನುಷ್ಠಾನದ ನೀಲನಕ್ಷೆಯ ಕರಡು ಸಮಾಲೋಚನೆ ನಡೆಯಲಿದೆ. ಪ್ರಸ್ತುತ ನಡೆಯುತ್ತಿರುವ ಮಾತುಕತೆಯಲ್ಲಿ ಸಂಬಂಧಿಸಿದವರೊಡನೆ ಅಂತಿಮ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚೆ ನಡೆಯಲಿದೆ.
***
(रिलीज़ आईडी: 1698358)
आगंतुक पटल : 192
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam