ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ವಿರುಧುನಗರದಲ್ಲಿ ಪಟಾಕಿ ಕೈಗಾರಿಕೆಯಲ್ಲಿನ ಅಗ್ನಿ ದುರಂತಕ್ಕೆ ದುಃಖ ವ್ಯಕ್ತಪಡಿಸಿದ ಪ್ರಧಾನಮಂತ್ರಿ; ಸಂತ್ರಸ್ತರಿಗೆ ಪರಿಹಾರ ಅನುಮೋದನೆ

ಪ್ರಕಟಣಾ ದಿನಾಂಕ: 12 FEB 2021 5:14PM by PIB Bengaluru

ತಮಿಳುನಾಡಿನ ವಿರುಧಾನಗರದಲ್ಲಿನ ಪಟಾಕಿ ಕೈಗಾರಿಕೆಯಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಪರಿಹಾರವನ್ನು ಅನುಮೋದಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, "ತಮಿಳುನಾಡಿನ ವಿರುಧುನಗರದಲ್ಲಿನ ಪಟಾಕಿ ಕಾರ್ಖಾನೆಯಲ್ಲಿನ ಅಗ್ನಿ ದುರಂತ ದುಃಖದಾಯಕ. ಈ ನೋವಿನ ಸಮಯದಲ್ಲಿ, ಸಂತ್ರಸ್ತ ಕುಟುಂಬದೊಂದಿಗೆ ನನ್ನ ಸಂವೇದನೆ ಇದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಬಾಧಿತರಿಗೆ ನೆರವಾಗಲು ಸ್ಥಳೀಯ ಪ್ರಾಧಿಕಾರಗಳು ಕಾರ್ಯ ನಿರ್ವಹಿಸುತ್ತಿವೆ.

ಪಿ.ಎಂ.ಎನ್.ಆರ್.ಎಫ್. ನಿಂದ ತಮಿಳುನಾಡಿನ ವಿರುಧು ನಗರದ ಅಗ್ನಿ ಆಕಸ್ಮಿಕದಲ್ಲಿ ಜೀವ ಕಳೆದುಕೊಂಡವರ ಹತ್ತಿರದ ಬಂಧುಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಅನುಮೋದಿಸಲಾಗಿದೆ." ಎಂದು ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1698134) ವಿಸಿಟರ್ ಕೌಂಟರ್ : 151